ನೆಹರು, ಇಂದಿರಾ ಗಾಂಧಿ ಮಾಡಿದ ತಪ್ಪನ್ನ ಮೋದಿ ಮಾಡಬಾರದು: ಯತ್ನಾಳ್

Public TV
2 Min Read

– ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕ್‌ನ ರಾಷ್ಟ್ರಪಿತ ಅಂತ ಲೇವಡಿ

ವಿಜಯಪುರ: ಮಹಾತ್ಮಾ ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಪಿಓಕೆ ಬಿಟ್ಟುಕೊಡುವುದು, ಸಿಂಧೂ ನದಿ ನೀರನ್ನು ನಾವೇ ಬಳಸಿಕೊಳ್ಳುವುದು ಸೇರಿದಂತೆ ಮೋದಿ ಅವರು ಹಾಕಿದ ಷರತ್ತುಗಳು ಉತ್ತಮವಾಗಿದ್ದು, ಎಲ್ಲವನ್ನು ನಾನು ಸ್ವಾಗತಿಸುತ್ತೇನೆ. ಯುದ್ಧ ವಿರಾಮ ಘೋಷಣೆ ಮಾಡಿದಾಗ ಬಹಳ ದೇಶ ಭಕ್ತರಿಗೆ ಬೇಸರ, ನೋವಾಗಿತ್ತು ಆಗಿತ್ತು. ಆದರೆ ಈ ಹಿಂದೆ ನೆಹರು, ಇಂದಿರಾ ಗಾಂಧಿ ಮಾಡಿದ ತಪ್ಪನ್ನು ಮೋದಿ ಅವರು ಮಾಡಬಾರದು ಎನ್ನುವುದು ದೇಶದ ಜನರ ಭಾವನೆ. ಶಿಮ್ಲಾ ಒಪ್ಪಂದವನ್ನ ಪಾಕಿಸ್ತಾನ ತಾನೇ ಮಾಡಿಕೊಂಡಿದೆ. ಇಂದಿರಾ ಗಾಂಧಿ ಮಾಡಿದ ತಪ್ಪಿನಿಂದ ಲಾಹೋರ್ ನಮ್ಮ ದೇಶದ ಭಾಗ ಆಗುವುದು ತಪ್ಪಿದಂತಾಯಿತು. ದೇಶದ ಜನರಿಗೆ ಮೋದಿಯವರ ಮೇಲೆ ನಂಬಿಕೆಯಿದೆ ಎಂದು ಹೇಳಿದರು.ಇದನ್ನೂ ಓದಿ: ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

ದೇಶದ ಜನರು ಅಂಜಬಾರದು, ನಮ್ಮ ಹತ್ತಿರ ಕೂಡ ಅಣುಬಾಂಬ್ ಇದೆ. ಕೇವಲ ನಮ್ಮ ಒಂದು ಬ್ರಹ್ಮೋಸ್ ಇದ್ದರೆ ಸಾಕು ಪಾಕಿಸ್ತಾನ ನಾಶ ಮಾಡಬಹುದು. ಪ್ರಧಾನಮಂತ್ರಿಗಳು ಇದೇ ರೀತಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಅವರು ಇದೇ ರೀತಿ ಇದ್ದರೆ ಪ್ರಧಾನಿಗಳ ಮೇಲೆ ವಿಶ್ವಾಸ ಉಳಿಯುತ್ತದೆ. ಒಂದು ಹೆಜ್ಜೆ ಹಿಂದೆ ಸರಿದರೂ ಕೂಡ ಸರಿಯಾಗಲ್ಲ. ಹಿಂದೂಗಳನ್ನು ರಕ್ಷಣೆ ಮಾಡುತ್ತೀವಿ ಎಂಬ ಕಾರಣಕ್ಕೆ ಹಿಂದೂಗಳು ಬಿಜೆಪಿಗೆ, ಮೋದಿಯವರಿಗೆ ಮತ ಹಾಕುತ್ತಾರೆ. ಹೀಗಾಗಿ ನಾವು ಹಿಂದೆ ಸರಿದರೆ ಸರಿಯಿರಲ್ಲ ಎಂದರು.

ದೇಶದ ಜನ ಒಂದು ಬಾರಿ ಪಾಕಿಸ್ತಾನ ನಾಶ ಆಗುವುದನ್ನು ನೋಡಬೇಕಿದೆ. ನಮ್ಮ ದೇಶದಲ್ಲಿ ಮುಸ್ಲಿಮರಿಗಿಂತ ನಾಲಾಯಕರು ಕೆಲವರು ನಮ್ಮ ಕಾಂಗ್ರೆಸ್‌ನ ಹಿಂದೂಗಳಿದ್ದಾರೆ. ಮುಸ್ಲಿಮರಿಗೆ ಗಾಂಧೀಜಿ ಪಾಕಿಸ್ತಾನಕ್ಕೆ ಹೋಗಲು ತಿಳಿಸಿದ್ದಾರೆ. ಗಾಂಧಿ ನಮ್ಮ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನ ರಾಷ್ಟ್ರಪಿತ ಎಂದು ವಾಗ್ದಾಳಿ ನಡೆಸಿದರು.

ಇನ್ನು ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ಹೊರಹಾಕಿದ ತಕ್ಷಣ ಮುಗಿದೋಯ್ತು. ಇನ್ನು ಬಿಜೆಪಿಗೆ ಬರಲ್ಲ ಅಂತಾ ಕೆಲವರು ತಿಳಿದುಕೊಂಡಿದ್ದಾರೆ ಎಂದು ಹುಚ್ಚರು. ಹೈಕಮಾಂಡ್ ನಿರಂತರ ನನ್ನ ಸಂಪರ್ಕದಲ್ಲಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿದ ನಂತರ ನನ್ನನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಕಾರ್ಮೋಡ – ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ಯೋಧ ಕರ್ತವ್ಯಕ್ಕೆ ವಾಪಸ್

 

Share This Article