ಶೀಘ್ರವೇ ಷರೀಫ್-ಮೋದಿ ಭೇಟಿ ಸಾಧ್ಯತೆ

Public TV
1 Min Read

ನವದೆಹಲಿ: ಅಪರೂಪದ ವರದಿಯಂತೆ ಭಾರತ ಹಾಗೂ ಪಾಕಿಸ್ತಾನದ ಪ್ರಧಾನಿಗಳು ಶೀಘ್ರವೇ ಭೇಟಿಯಾಗಲಿದ್ದಾರೆ. ಉಜ್ಬೇಕಿಸ್ತಾನದಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಶುಕ್ರವಾರ 3 ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದು, ಸೆಪ್ಟೆಂಬರ್ 15-16 ರಂದು ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ನಡೆಯಲಿರುವ ಎಸ್‌ಸಿಒ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಆಹ್ವಾನಿಸಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೇಶದಲ್ಲಿ ಮಂಕಿಪಾಕ್ಸ್ ಭೀತಿ – ಆತಂಕ ಹೆಚ್ಚಿಸಿದ ಆಫ್ರಿಕನ್ ಹಂದಿಜ್ವರ

ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಪಾಕಿಸ್ತಾನ ಮತ್ತು ಭಾರತದ ಪ್ರಧಾನ ಮಂತ್ರಿಗಳು ಮುಖಾಮುಖಿಯಾಗುವ ಅವಕಾಶ ಇಲ್ಲಿ ಒದಗಿಬರುವ ಸಾಧ್ಯತೆಯಿರುತ್ತದೆ. ಒಂದು ವೇಳೆ ಇಬ್ಬರೂ ಪ್ರಧಾನಿಗಳು ಭೇಟಿಯಾದಲ್ಲಿ, ಕಳೆದ 6 ವರ್ಷಗಳಲ್ಲೇ ಮೊದಲ ಬಾರಿಗೆ ಇಬ್ಬರೂ ಪ್ರಧಾನಿಗಳು ಭೇಟಿಯಾದಂತಾಗುತ್ತದೆ. ಇದನ್ನೂ ಓದಿ: ಚೀನಾದಿಂದ ಪಾಲಿಸ್ಟರ್‌ ಧ್ವಜ ಆಮದು ಮಾಡಿಕೊಂಡು ರಾಷ್ಟ್ರಧ್ವಜ, ಖಾದಿಗೆ ಅವಮಾನ: ಕೇಂದ್ರದ ವಿರುದ್ಧ ಸಿದ್ದು ಕಿಡಿ

ಚೀನಾ, ಪಾಕಿಸ್ತಾನ, ರಷ್ಯಾ, ಭಾರತ, ತಜಕಿಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ತಾನ ಮತ್ತು ಕಝಾಕಿಸ್ತಾನ ದೇಶಗಳು ಎಸ್‌ಸಿಒ ಸದಸ್ಯತ್ವ ಹೊಂದಿವೆ. ಈ ಸಂಘಟನೆ ಸಾಮರ್ಥ್ಯ ಹಾಗೂ ಅಧಿಕಾರವನ್ನು ಹೆಚ್ಚಿಸಲು, ದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು, ಬಡತನವನ್ನು ಕಡಿಮೆ ಮಾಡಲು ಹಾಗೂ ಆಹಾರ ಭದ್ರತೆಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡುತ್ತವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *