ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

Public TV
1 Min Read

ಪಣಜಿ: ಭಾರತವು ಲಸಿಕೆಯಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸುತ್ತಿರುವುದನ್ನು ನೋಡಿ ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ಲಸಿಕೆ ಪಡೆದ ನಂತರ ಜ್ವರ ಬಂದರೆ ಅದನ್ನು ಅಡ್ಡ ಪರಿಣಾಮವೆಂದು ಜನರು ಕರೆಯುತ್ತಾರೆ. ನನ್ನ ಜನ್ಮದಿನದಂದು 2.5 ಕೋಟಿ ಭಾರತೀಯರಿಗೆ ಲಸಿಕೆ ನೀಡಲಾಗಿದೆ. ಇದನ್ನು ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ ಎನ್ನುವ ಮೂಲಕ ವಿಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ.  ಇದನ್ನೂ ಓದಿ: ಮೋದಿ ಬಗ್ಗೆ ಸ್ವಾಮಿ ವ್ಯಂಗ್ಯ – ಕುದುರೆಗೆ ನೀರು ಕುಡಿಯುವಂತೆ ಮಾಡೋದು ಹೇಗೆ?

ನನ್ನ 71ನೇ ಜನ್ಮದಿನದಂದು 2.5 ಕೋಟಿ ಲಸಿಕೆ ಡೋಸ್‍ಗಳನ್ನು ನೀಡಲಾಗಿದೆ. ಇದು ನನಗೆ ಮರೆಯಲಾಗದ ಹಾಗೂ ಭಾವನಾತ್ಮಕ ದಿನವೆಂದು ನರೇಂದ್ರ ಮೋದಿ ಹೇಳಿದ್ದಾರೆ. ಆರೋಗ್ಯ ಕಾರ್ಯಕರ್ತರನ್ನು ಸ್ಮರಿಸಿರುವ ಮೋದಿ, ನಿಮ್ಮ ಪ್ರಯತ್ನಗಳಿಂದ ಭಾರತ ಒಂದೇ ದಿನದಲ್ಲಿ 2.5 ಕೋಟಿ ಲಸಿಕೆ ಡೋಸ್‍ಗಳನ್ನು ನೀಡಿ ವಿಶ್ವ ದಾಖಲೆ ಮಾಡಿದೆ. ಈ ಸಾಧನೆಯನ್ನು ಬಲಿಷ್ಠ ರಾಷ್ಟ್ರಗಳು ಸಹ ಮಾಡಲಾಗಲಿಲ್ಲ ಎಂದು ಹೇಳಿದ್ದಾರೆ.  ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ಮುಂದಾದ ಕಾಂಗ್ರೆಸ್- ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ?

ದೇಶವು ನಿನ್ನೆ ಕೋವಿನ್ ಡ್ಯಾಶ್‍ಬೋರ್ಡ್ ಅನ್ನು ಹೇಗೆ ನೋಡಿತು ಎಂಬುದು ನನಗೆ ಗೊತ್ತು. ಪ್ರತಿ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಲಸಿಕೆ, ಪ್ರತಿ ನಿಮಿಷಕ್ಕೆ 26 ಸಾವಿರ ವ್ಯಾಕ್ಸಿನೇಷನ್‍ಗಳು ನಿನ್ನೆ ನಡೆದಿದೆ. ಈ ಪ್ರಯತ್ನಕ್ಕಾಗಿ ದೇಶದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಆಡಳಿತದಲ್ಲಿರುವ ಜನರನ್ನು ನಾನು ಅಭಿನಂದಿಸುತ್ತೇನೆ. ನಿಮ್ಮ ಈ ಕೆಲಸ ದೇಶದ ಮಾನವಶಕ್ತಿಯನ್ನು ದೇಶದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಜನ್ಮದಿನಗಳು ಬಂದು ಹೋಗುತ್ತವೆ. ನಾನು ಇಂತಹ ವಿಷಯಗಳಿಂದ ದೂರ ಉಳಿದಿದ್ದೇನೆ. ಈ ಬಾರಿಯ ಜನ್ಮದಿನವನ್ನು ಮಾತ್ರ ಎಂದಿಗೂ ಮರೆಯಲಾರೆ ಎಂದು ಭಾವನಾತ್ಮಕವಾಗಿ ಮೋದಿ ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *