ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ

Public TV
2 Min Read

ಚೆನ್ನೈ: ಶನಿವಾರದಂದು ಚೆನ್ನೈಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ (BJP) ಕಾರ್ಯಕರ್ತ ತಿರು ಎಸ್.ಮಣಿಕಂದನ್ (Tiru.S.Manikandan) ಅವರನ್ನು ಭೇಟಿಯಾಗಿ ವಿಶೇಷ ಸೆಲ್ಫಿ (Selfie) ತೆಗೆದುಕೊಂಡು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಸಲುವಾಗಿ ಪ್ರಧಾನಿ ಮೋದಿ (Narendra Modi) ಶನಿವಾರ ಚೆನ್ನೈಗೆ (Chennai) ಭೇಟಿ ನೀಡಿದ್ದರು. ಈ ವೇಳೆ ಅಂಗವಿಕಲರಾಗಿ (Disabled) ಒಂದು ಅಂಗಡಿಯನ್ನು ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರಾದ ತಿರು.ಎಸ್.ಮಣಿಕಂದನ್ ಅವರನ್ನು ಭೇಟಿಯಾಗಿ ಅವರೊಡನೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಬಳಿಕ ಇದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅನೇಕರು ಪ್ರೇರೇಪಿತರಾಗಲಿ ಎಂದು ಅವರ ಜೀವನಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಇದನ್ನು ಓದಿ: ಕೋವಿಡ್ ಕೇಸ್ ತೀವ್ರ ಹೆಚ್ಚಳ – ಕೇರಳ, ಹರಿಯಾಣ, ಪುದುಚೇರಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

ಚೆನ್ನೈನಲ್ಲಿ ನಾನು ತಿರು ಎಸ್.ಮಣಿಕಂದನ್ ಅವರನ್ನು ಭೇಟಿಯಾದೆ. ಅವರು ಈರೋಡ್‌ನ (Erode) ಬಿಜೆಪಿ ಕಾರ್ಯಕರ್ತ ಹಾಗೂ ಬೂತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಅಂಗವಿಕಲನಾಗಿ ಅವರು ತನ್ನದೇ ಸ್ವಂತ ಅಂಗಡಿಯನ್ನು ನಡೆಸುತ್ತಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ. ಅಲ್ಲದೇ ಅವರು ತಮಗೆ ಬಂದ ದೈನಂದಿನ ಲಾಭದಲ್ಲಿ ಗಣನೀಯ ಭಾಗವನ್ನು ಬಿಜೆಪಿಗೆ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಫೋಟೋದೊಂದಿಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸಚಿವ ಕಿರಣ್‌ ರಿಜಿಜು ಕಾರು ಅಪಘಾತ 

ತಿರು ಎಸ್.ಮಣಿಕಂದನ್ ಅವರಂತಹ ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿ ಪಕ್ಷದಲ್ಲಿ ನಾನು ಕಾರ್ಯಕರ್ತನಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ ಎಂದು ಮಣಿಕಂದನ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇದನ್ನು ಓದಿ: ಯುದ್ಧ ವಿಮಾನದಲ್ಲಿ ಮೊದಲ ಬಾರಿ ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು

Share This Article