ಅಮ್ಮನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಪ್ರಧಾನಿ ಮೋದಿ

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ (Heeraben Modi) ಅಂತ್ಯಕ್ರಿಯೆಗೂ ಮುನ್ನ ಪಾರ್ಥೀವ ಶರೀರ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ (Narendra Modi) ಹೆಗಲುಕೊಟ್ಟಿದ್ದಾರೆ.

ಪಂಕಜ್ ಮೋದಿ ಅವರ ನಿವಾಸದಿಂದ ಪಾರ್ಥೀವ ಶರೀರ ಹೊತ್ತು ಅಂತಿಮ ಯಾತ್ರೆ ಹೊರಟಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಸೆಕ್ಟರ್ 30ರ ರುದ್ರಭೂಮಿಯಲ್ಲಿ ಹೀರಾಬೆನ್ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ಮಾತೃ ವಿಯೋಗ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹೀರಾಬೆನ್ ಅವರನ್ನು ಬುಧವಾರವಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3.39ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಶತಾಯುಷಿ ಹೀರಾಬೆನ್ ಅವರು ಐವರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸದ್ಯ ಹೀರಾಬೆನ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಗಣ್ಯರು ಸಂತಾಪಗಳನ್ನು ಸೂಚಿಸುತ್ತಿದ್ದಾರೆ. ಅಲ್ಲದೇ ಪ್ರಧಾನಿಯವರಿಗೆ ಧೈರ್ಯ ತುಂಬುತ್ತಿದ್ದಾರೆ. ಇದನ್ನೂ ಓದಿ: ಇಂದೇ ಮೋದಿ ತಾಯಿ ಹೀರಾಬೆನ್ ಅಂತ್ಯಕ್ರಿಯೆ

ನಾನ್‌ಸ್ಟಾಪ್ ಕೆಲಸದ ಹಿಂದಿತ್ತು ಅಮ್ಮನ ಟಿಪ್ಸ್: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮೋದಿ ನಾನ್ ಸ್ಟಾಪ್ ಕೆಲ್ಸದ ಹಿಂದೆ ಅಮ್ಮನ ಟಿಪ್ಸ್ ಇತ್ತು. ಪರಿಶ್ರಮವೇ- ಜೀವನದ ಮಂತ್ರ ಅಂತಾ ಅಮ್ಮ ಸದಾ ಮಗನಿಗೆ ಕಿವಿಮಾತು ಹೇಳುತ್ತಿದ್ದರು. ಪ್ರಾಮಾಣಿಕತೆ ಮತ್ತು ಸ್ವಾಭಿಮಾನದ ಪಾಠದ ಜೊತೆಗೆ ಸದಾ ಪರಿಶ್ರಮ ಪಡಬೇಕು ಸದಾ ಸಲಹೆ ಪಡೆಯುತ್ತಿದ್ದರು. ಯಾವುದೇ ಸವಾಲನ್ನು ಜಯಿಸಲು ನಿರಂತರ ಪರಿಶ್ರಮಪಡಬೇಕು ಎಂಬುದು ಅವರ ಪ್ರಮುಖ ಮಂತ್ರವಾಗಿತ್ತು. ಅದಕ್ಕಾಗಿಯೇ ನನ್ನ ಯಶಸ್ಸಿನ ಹಿಂದೆ ತಾಯಿಯಿದ್ದಾರೆ ಅಂತಾ ಮೋದಿ ಸದಾ ಹೇಳುತ್ತಿದ್ದರು ಅನ್ನೋದು ಭಾವುಕ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *