ಲವ್ ಜಿಹಾದ್ ಹಿಂದೂ ತೀವ್ರಗಾಮಿಗಳನ್ನು ಸೃಷ್ಟಿಸುವ ಭೂತ: ಚಿದಂಬರಂ

Public TV
1 Min Read

ತಿರುವನಂತಪುರ: ಲವ್ ಜಿಹಾದ್, ನಾರ್ಕೊಟಿಕ್ ಜಿಹಾದ್ ಎಂಬುದು ಹಿಂದೂ ಯುವಕ, ಯುವತಿಯರನ್ನು ತೀವ್ರಗಾಮಿಗಳನ್ನಾಗಿಸುವುದಕ್ಕೆ ಸೃಷ್ಟಿಸಿರುವ ಒಂದು ಭೂತ. ಜಾತ್ಯತೀತ ರಾಷ್ಟ್ರ ಇಂತಹ ಮತಾಂಧತೆಯನ್ನು ಮೆಟ್ಟಿ ನಿಲ್ಲಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಚಿದಂಬರಂ ಕಿಡಿಕಾರಿದ್ದಾರೆ.

ಕೆಲದಿನಗಳ ಹಿಂದೆ ನಾರ್ಕೊಟಿಕ್ ಜಿಹಾದ್ ಬಗ್ಗೆ ಕೇರಳದಲ್ಲಿನ ಕ್ಯಾಥೋಲಿಕ್ ಬಿಷಪ್ ಜೋಸೆಫ್ ಕಲ್ಲರಂಗತ್ ಅವರ ಹೇಳಿಕೆಗೆ ತೀವ್ರ ಆಕ್ಷೇಪವೆತ್ತಿರುವ ಚಿದಂಬರಂ, ನಾರ್ಕೊಟಿಕ್ ಜಿಹಾದ್ ಬಗ್ಗೆ ಬಿಷಪ್ ಹೇಳಿಕೆಯನ್ನು ಗಮನಿಸಿದರೆ ಅದು ವಿಕೃತ ಚಿಂತನೆಯಾಗಿದ್ದು, ಈ ಹೇಳಿಕೆ ಧರ್ಮಗಳ ನಡುವೆ ಒಡಕು ಸೃಷ್ಟಿಸಿ ಕೋಮು ಸಮರವನ್ನುಂಟುಮಾಡುವ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಂದ್ ಠುಸ್ ಪಟಾಕಿ – ಬೆಂಗಳೂರಿನಲ್ಲಿ ಎಂದಿನಂತೆ ಸಾಗುತ್ತಿದೆ ಜನ ಜೀವನ

ಬಿಷಪ್ ಆಗಿ ದೀಕ್ಷೆ ಪಡೆದಿರುವ ಜೋಸೆಫ್ ಅವರು ಈ ರೀತಿ ಮಾತನಾಡಿರುವುದು ಸ್ವತಃ ನನಗೆ ಮತ್ತು ನನ್ನಂತಹ ಅನೇಕ ಮಂದಿಗೆ ನೋವುಂಟುಮಾಡಿದೆ. ಭಾರತದಲ್ಲಿ ಇಸ್ಲಾಮ್ ವಿಸ್ತರಣೆಯಾಗುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ. ಇಸ್ಲಾಮ್‍ಗೆ ಜನ ಸಾಮೂಹಿಕ ಮತಾಂತರಗೊಳ್ಳುತ್ತಿರುವುದು ಸುಳ್ಳು ಎಂದು ತಮ್ಮ ನಿಲುವನ್ನು ಪ್ರತಿಪಾದಿಸಿದ್ದಾರೆ.

ಜೋಸೆಫ್ ಕಲ್ಲರಂಗತ್, ಲವ್ ಜಿಹಾದ್ ಹಾಗೂ ನಾರ್ಕೋಟಿಕ್ ಜಿಹಾದ್ ಮೂಲಕ ಯುವಜನತೆಯನ್ನು ತಪ್ಪುದಾರಿಗೆ ಕೊಂಡೊಯ್ಯಲಾಗುತ್ತಿದೆ. ಶಸ್ತ್ರಾಸ್ತ್ರಗಳನ್ನು ಹಿಡಿದು ಹೋರಾಟ ಮಾಡಲಾಗದ ಪ್ರದೇಶಗಳಲ್ಲಿ ತೀವ್ರಗಾಮಿಗಳು ಲವ್ ಜಿಹಾದ್ ಹಾಗೂ ನಾರ್ಕೋಟಿಕ್ ಜಿಹಾದ್‍ಗಳ ಮೂಲಕ ಯುವಜನತೆಯನ್ನು ಹಾಳು ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ನಾವು ಹಿಂದೂಗಳನ್ನು ಮತಾಂತರ ಮಾಡ್ತೇವೆ ಏನ್ ಮಾಡ್ತೀರಾ- ಚರ್ಚ್ ಫಾದರ್ ಅವಾಜ್

ಕಲ್ಲರಂಗತ್ ಹೇಳಿಕೆ ವಿರುದ್ಧ ಕಾಂಗ್ರೆಸ್ ವಿಪಕ್ಷ ನಾಯಕ ವಿ.ಡಿ ಸತೀಶನ್ ಸಹಿತ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕೇರಳದಲ್ಲಿ ಕಾಂಗ್ರೆಸ್‍ಗೆ ಸ್ಪಲ್ಪ ಮಟ್ಟಿನ ಹಿನ್ನಡೆ ತರುವ ಸಾಧ್ಯತೆಗಳಿದ್ದು, ಈ ಹಿಂದೆ ಕೇರಳದಲ್ಲಿರುವ ಕ್ಯಾಥೋಲಿಕ್ ಸಮುದಾಯದಿಂದ ಕಾಂಗ್ರೆಸ್‍ಗೆ ಬಹುಪಾಲು ಬೆಂಬಲ ದೊರೆಯುತ್ತಿತ್ತು. ಇದೀಗ ಕಾಂಗ್ರೆಸ್ ನಾಯಕರ ಟೀಕೆಯಿಂದ ಈ ಬೆಂಬಲ ಕಳೆದುಕೊಳ್ಳುವ ಭೀತಿಯಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *