ಗ್ರಾಹಕರಿಗೆ ಕೆಎಂಎಫ್‌ ಶಾಕ್‌ – ನಂದಿನಿ ಹಾಲಿನ ದರ ಹೆಚ್ಚಳ – ಯಾವುದಕ್ಕೆ ಎಷ್ಟು?

Public TV
2 Min Read

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (KMF) ನಂದಿನಿ ಹಾಲಿನ ದರ ಹೆಚ್ಚಿಸಿದೆ (Nandini Milk Price Hike). ಪ್ರತಿ ಲೀಟರ್‌ ಹಾಲಿನ ದರ 2 ರೂ. ಹೆಚ್ಚಿಸಿದೆ ಎಂದು ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್‌ ಪ್ಯಾಕೆಟ್‌ ಹಾಲಿನ ದರವನ್ನ 2 ರೂ. ಹಾಗೂ ಅರ್ಧ ಲೀಟರ್‌ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. ಆದ್ರೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್‌ (1 ಲೀಟರ್)‌ ಪ್ಯಾಕೆಟ್‌ ಹಾಲು ಇನ್ಮುಂದೆ 1,050 ಎಂಎಲ್‌ ಹಾಗೂ ಅರ್ಧ ಲೀಟರ್‌ ಪ್ಯಾಕೆಟ್‌ ಹಾಲು 550 ಎಂಎಲ್‌ ಹೆಚ್ಚುವರಿ ಸಿಗಲಿದೆ. ಪರಿಷ್ಕೃತ ದರ ನಾಳೆಯಿಂದ (ಜೂ.26) ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಯಾವುದಕ್ಕೆ ಎಷ್ಟು ದರ ಹೆಚ್ಚಳ?
ಟೋನ್ಡ್‌ ಹಾಲು
550 ಎಂಎಲ್‌ – 24 ರೂ.
1050 ಎಂಎಲ್‌ – 44 ರೂ.

ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು
550 ಎಂಎಲ್‌ – 24 ರೂ.
1050 ಎಂಎಲ್‌ – 45 ರೂ.

ಹೋಮೋಜಿನೈಸ್ಡ್‌ ಹಸುವಿನ ಹಾಲು
550 ಎಂಎಲ್‌ – 26 ರೂ.
1050 ಎಂಎಲ್‌ – 48 ರೂ.

ಸ್ಪೆಷಲ್‌ ಹಾಲು
550 ಎಂಎಲ್‌ – 27 ರೂ.
1050 ಎಂಎಲ್‌ – 50 ರೂ.

ಶುಭಂ ಹಾಲು
550 ಎಂಎಲ್‌ – 27 ರೂ.
1050 ಎಂಎಲ್‌ – 50 ರೂ.

ಸಮೃದ್ಧಿ ಹಾಲು
550 ಎಂಎಲ್‌ – 28 ರೂ.
1050 ಎಂಎಲ್‌ – 53 ರೂ.

ಹೋಮೋಜಿನೈಸ್ಡ್‌ ಶುಭಂ ಹಾಲು
550 ಎಂಎಲ್‌ – 27 ರೂ.
1050 ಎಂಎಲ್‌ – 51 ರೂ.

ಸತೃಪ್ತಿ ಹಾಲು
550 ಎಂಎಲ್‌ – 30 ರೂ.
1050 ಎಂಎಲ್‌ – 57 ರೂ.

ಶುಭಂ ಗೋಲ್ಡ್‌ ಹಾಲು
550 ಎಂಎಲ್‌ – 28 ರೂ.
1050 ಎಂಎಲ್‌ – 51 ರೂ.

ಡಬಲ್‌ ಟೋನ್ಡ್‌ ಹಾಲು
550 ಎಂಎಲ್‌ – 23 ರೂ.
1050 ಎಂಎಲ್‌ – 43 ರೂ.

Share This Article