ಬಿಗ್ ಬಾಸ್ ಮನೆಯ(Bigg Boss Kannada 10) ಆಟ 72 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ಆಟ ರೋಚಕ ಹಂತ ತಲುಪುತ್ತಿದೆ. ಹೀಗಿರುವಾಗ ಪ್ರತಾಪ್ ನಡೆಗೆ ನಮ್ರತಾ ಗೌಡ ತಿರುಗಿ ಬಿದ್ದಿದ್ದಾರೆ. ತಮ್ಮ ಹಳ್ಳಿ ಭಾಷೆಯಿಂದ ಜನರಿಗೆ ಪ್ರತಾಪ್ (Drone Prathap) ಮಾಟ ಮಾಡ್ತಿದ್ದಾರೆ ಎಂದು ನಮ್ರತಾ ಮಾತನಾಡಿದ್ದಾರೆ.
ದೀದಿ ಎಂದು ಕರೆಯುತ್ತ ಚೆನ್ನಾಗಿದ್ದ ಪ್ರತಾಪ್-ನಮ್ರತಾ ಒಡನಾಟ ಇದೀಗ ಬದಲಾಗಿದೆ. ಪ್ರತಾಪ್ ಏನೇ ಮಾಡಿದ್ರೂ ನಮ್ರತಾ ತಪ್ಪು ಹುಡುಕುತ್ತಾರೆ. ಇದೀಗ ಬಿಗ್ ಬಾಸ್ ಮನೆಮಂದಿಗೆಲ್ಲಾ ಟಾಸ್ಕ್‌ವೊಂದನ್ನ ನೀಡಿದ್ದರು. ಬ್ರೇಕಿಂಗ್ ನ್ಯೂಸ್ ಹೇಳುವ ಮೂಲಕ ಮನೆಯ ನ್ಯೂಸ್ ಅನ್ನ ಬಿಚ್ಚಿಡಬೇಕು ಎಂದು ಟಾಸ್ಕ್ ನೀಡಲಾಗಿತ್ತು. ಈ ವೇಳೆ ನಮ್ರತಾ ಅವರು ಪ್ರತಾಪ್ ವಿಚಾರವೆತ್ತಿದ್ದಾರೆ.
ಪ್ರತಾಪ್ ಅವರು ಮೈಂಡ್ ಗೇಮ್ ಆಡ್ತಿದ್ದಾರೆ, ಸಿಂಪಥಿ ರಾಜಕೀಯ ಮಾಡ್ತಿದ್ದಾರೆ, ಅವರ ಮುಗ್ಧತೆ ಮುಗಿದು ಹೋಯ್ತು ಎಂಬ ಮಾತು ಕೇಳಿ ಬಂದಿತ್ತು. ಆದರೆ ಈಗ ಅವರು ಹಳ್ಳಿ ಭಾಷೆ ಮಾತನಾಡುತ್ತ, ಹೊಸ ಗೇಮ್ ಶುರು ಮಾಡಿದ್ದಾರೆ ಎಂಬ ಆರೋಪ ಶುರು ಆಗಿದೆ ಎಂದು ನಮ್ರತಾ (Namratha Gowda) ರೊಚ್ಚಿಗೆದ್ದಿದ್ದಾರೆ. ಇದನ್ನೂಓದಿ:‘ಸಲಾರ್’ ರಿಲೀಸ್‌ಗೂ ಮುನ್ನ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್
ನಮ್ಮ ಹಳ್ಳಿಯಲ್ಲಿ ನಾವು ಹೀಗೆ ಮುದ್ದೆ ಹೇಗೆ ಕೊಟ್ಟೋದು ಅಂತ ಹೇಳೋದು, ಅಪ್ಪ-ಅವ್ವ ಎನ್ನೋದು ಯಾರಿಗೂ ಕಾಣಿಸುತ್ತಿಲ್ಲ ಅಂತ ಅಂದುಕೊಳ್ಳಬೇಡಿ. ಗ್ರಾಮೀಣ ಜನರಿಗೆ ಮಾಟ ಮಾಡೋಕೆ, ನಾಗವಲ್ಲಿ ಥರ ಆಗಾಗ ನಿಮ್ಮ ಮಂಡ್ಯ ಭಾಷೆ ಬದಲಾಗತ್ತೆ ಎಂದು ಪ್ರತಾಪ್‌ಗೆ ನೇರವಾಗಿ ನಮ್ರತಾ ಕುಟುಕಿದ್ದಾರೆ.
ನಾನು ಹಳ್ಳಿ ಥರವೂ ಮಾತನಾಡ್ತೀನಿ, ಸಿಟಿ ಭಾಷೆಯಲ್ಲಿಯೂ ಮಾತನಾಡ್ತೀನಿ. ಹಳ್ಳಿ ಟಾಸ್ಕ್‌ನಲ್ಲಿ ಭಾಗ್ಯಶ್ರೀ ಮೇಡಂ ಅವರು ಕೂಡ ಈ ಮಾತು ಹೇಳಿದ್ರು. ಸೌಟು ಮುಂತಾದ ಪದಗಳನ್ನು ಬಳಸ್ತಾ ಮಾತಾಡ್ತೀನಿ. ಅದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಪ್ರತಾಪ್ ಹೇಳಿದ್ದಾರೆ. ಜನರಿಗೆ ನಾನು ಯಾವುದೇ ರೀತಿಯಲ್ಲಿ ಮೋಡಿ ಮಾಡ್ತಿಲ್ಲ. ನಾನು ಇರೋದೇ ಹೀಗೆ ಮನೆಯಲ್ಲೂ ಹಳ್ಳಿ ಭಾಷೆಯನ್ನೇ ಬಳಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ ಪ್ರತಾಪ್.