ಸಖತ್ ಬೋಲ್ಡ್ & ಹಾಟ್ ಆಗಿ ಕಾಣಿಸಿಕೊಂಡ ನಮ್ರತಾ ಗೌಡ

Public TV
2 Min Read

ತ್ತೀಚೆಗಷ್ಟೇ ನಟಿ ನಮ್ರತಾ ಗೌಡ (Namratha Gowda) ತಮ್ಮ ಹುಟ್ಟು ಹಬ್ಬವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡರು. ಅಂದು ಬಿಳಿ ಬಣ್ಣದ ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ್ದವರು ಇಂದು ಮತ್ತೊಂದು ಫೋಟೋ ಶೂಟ್ (Photo shoot) ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಮೈಗೊಂದು ತುಂಡು ಬಟ್ಟೆ, ಕರಿಬಣ್ಣದ ಪ್ಯಾಂಟ್ ನೊಂದಿಗೆ ಸಖತ್ ಹಾಟ್ ಹಾಟ್ (Hot)  ಆಗಿ ಕಾಣಿಸಿಕೊಂಡಿದ್ದಾರೆ ನಮ್ರತಾ. ಕಲರ್ ಕಾಂಬಿನೇಷನ್ ಮತ್ತು ಅವರು ಕೊಟ್ಟಿರುವ ಲುಕ್ ಪಡ್ಡೆಗಳ ನಿದ್ದೆಗೆಡಿಸುವುದು ಗ್ಯಾರಂಟಿ.

ಕಿರುತೆರೆಯ ಈ ಬ್ಯೂಟಿ ಇತ್ತೀಚೆಗಷ್ಟೇ ಫಾರಿನ್‌ಗೆ ಹಾರಿದ್ದರು. ಇಂಡೋನೇಷ್ಯಾದಲ್ಲಿ ಬೀಡು ಬಿಟ್ಟಿದ್ದ ‘ನಾಗಿಣಿ 2’ (Nagini 2) ಖ್ಯಾತಿಯ ನಟಿ ಫಾರಿನ್ ಟ್ರಿಪ್‌ನ ಮಸ್ತ್ ಆಗಿ ಎಂಜಾಯ್ ಮಾಡಿದ್ದರು. ಟ್ರಿಪ್‌ನ ಸುಂದರ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಕೂಡ ಮಾಡಿದ್ದರು. ಬಾಲಿಯಲ್ಲಿ ನಮ್ರತಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಟಿವಿ ಪರದೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ನಟಿ, ಈಗೀನ ಹಾಟ್ ಲುಕ್‌ ನೋಡಿ ಫ್ಯಾನ್ಸ್‌ ಸ್ಟನ್‌ ಆಗಿದ್ದಾರೆ.

‘ನಾಗಿಣಿ 2’ ಸೀರಿಯಲ್ ಮುಗಿದ ಬೆನ್ನಲ್ಲೇ ಫಾರಿನ್‌ಗೆ ನಟಿ ತೆರಳಿದ್ದರು. ನಮ್ರತಾ ಮತ್ತು ಗ್ಯಾಂಗ್ ಫಾರಿನ್‌ಲ್ಲಿ ಮಜಾ ಮಾಡಿದ್ದಾರೆ. ಬಾಲಿಯಲ್ಲಿ ಸುಂದರ ತಾಣಗಳಿಗೆ ನಮ್ರತಾ ಗೌಡ ಭೇಟಿ ನೀಡಿದ್ದರು. ಸ್ನೇಹಿತೆ ಐಶ್ವರ್ಯಾ ಸಿಂಧೋಗಿ (Aishwarya Sindhogi) ಜೊತೆ ನಮ್ರತಾ ಬಾಲಿಯಲ್ಲಿರುವ ಹಾಗೂ ಬಿಕಿನಿ ಧರಿಸಿರುವ ಫೋಟೋವನ್ನ ತಮ್ಮ ಖಾತೆಯಲ್ಲಿ ಶೇರ್ ಮಾಡಿಡಿದ್ದರು.

ನಮ್ರತಾ ಗೌಡ ಅವರು ಬಾಲನಟಿಯಾಗಿ ಮೊದಲು ಬಣ್ಣ ಹಚ್ಚಿದ್ದರು. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಆಕ್ಟೀವ್ ಆಗಿ ಕಾಣಿಸಿಕೊಂಡರು. ‘ಪುಟ್ಟಗೌರಿ ಮದುವೆ’ (Puttagowri Maduve) ಸೀರಿಯಲ್‌ನಲ್ಲಿ ರಕ್ಷ್, ರಂಜನಿ ರಾಘವನ್ ಜೊತೆ ನಮ್ರತಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡರು. ಬಳಿಕ ‘ನಾಗಿಣಿ 2’ ಸೀರಿಯಲ್‌ನಲ್ಲಿ ನಮ್ರತಾ ಮಿಂಚಿದ್ದರು.

‘ನಾಗಿಣಿ 2’ ಸೀರಿಯಲ್ ನಮ್ರತಾ ಗೌಡ ಅವರ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಡ್ತು. ಹೀರೋ ನಿನಾದ್- ನಮ್ರತಾ ಗೌಡ ಜೋಡಿಯನ್ನ ನೋಡಿ ಅನೇಕರು ಮೆಚ್ಚಿಕೊಂಡರು. ದೀಪಿಕಾ ದಾಸ್ (Deepika Das) ಬಳಿಕ ನಾಗಿಣಿ ಪಾತ್ರಕ್ಕೆ ನಮ್ರತಾ ಜೀವ ತುಂಬಿದ್ದರು. ಈ ಸೀರಿಯಲ್‌ನಿಂದ ನಮ್ರತಾಗೆ ಜನಪ್ರಿಯತೆ ಸಿಕ್ಕಿತು.

 

ಸೀರಿಯಲ್ ನಂತರ ಸಿನಿಮಾದಲ್ಲಿ ನಟಿಸಲು ನಮ್ರತಾ ಗೌಡ ತಯಾರಿ ನಡೆಸುತ್ತಿದ್ದಾರೆ. ಜಿಮ್, ವರ್ಕೌಟ್, ಫಿಟ್‌ನೆಸ್ ಅಂತಾ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ ಬಗ್ಗೆ ಹೊಸ ವಿಚಾರವೊಂದು ಸದ್ದು ಮಾಡ್ತಿದೆ. ನಮ್ರತಾ ಗೌಡ ಅವರು ಮುಂಬರುವ ಬಿಗ್ ಬಾಸ್ ಶೋಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಕಾದುನೋಡಬೇಕಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್