ಬೆಂಗಳೂರಿನಲ್ಲಿ ಮೋದಿ – ಎಷ್ಟು ಗಂಟೆಗೆ ಏನು ಕಾರ್ಯಕ್ರಮ? ಇಲ್ಲಿದೆ ಪೂರ್ಣ ವಿವರ

Public TV
2 Min Read

ಬೆಂಗಳೂರು: ಸಿಲಿಕಾನ್‌ ಸಿಟಿ ಜನರ ಬಹುದಿನಗಳ ಕನಸು ನನಸಾಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹಳದಿ ಮಾರ್ಗವನ್ನು (Yellow Line) ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ 10:30ಕ್ಕೆ ಬೆಂಗಳೂರಿಗೆ (Bengaluru) ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ 3 ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದು, ಇದರಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಸಂಚರಿಸುವ ರೈಲು ಕೂಡ ಸೇರಿದೆ. ಬಳಿಕ 11:50ರ ಸುಮಾರಿಗೆ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.

ಸುಮಾರು 5,057 ಕೋಟಿ ವೆಚ್ಚದ ಮೆಟ್ರೋ ಹಳದಿ ಮಾರ್ಗ ಇದಾಗಿದ್ದು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಯೆಲ್ಲೋ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲು ಸಿದ್ಧವಾಗಿದೆ. ಪ್ರಧಾನಿ ಮೋದಿ ಸ್ವಾಗತಕ್ಕೆ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಇಂದು ‌ತಾತ್ಕಾಲಿಕವಾಗಿ ಬಂದ್‌ ಆಗಲಿದೆ ಹಸಿರು ಮಾರ್ಗದ 4 ನಿಲ್ದಾಣಗಳು

 


ಮೋದಿ ಟೈಮ್‌ಲೈನ್‌
10:30 – ದೆಹಲಿಯಿಂದ ಹೊರಟ ಮೋದಿ ಹೆಚ್‌ಎಎಎಲ್‌ ನಿಲ್ದಾಣಕ್ಕೆ ಆಗಮನ.
10:55 – ಎಚ್‌ಎಎಲ್‌ನಿಂದ ಎಂಐ 17 ಹೆಲಿಕಾಪ್ಟರ್‌ ಮೂಲಕ ಮೇಖ್ರಿ ಸರ್ಕಲ್ ಬಳಿಯ ಸೇನಾಧಿಕಾರಿ ಕಚೇರಿ ಎಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ಆಗಮನ.
11:00 – ರಸ್ತೆ ಮಾರ್ಗದ ಮೂಲಕ ಮೆಜೆಸ್ಟಿಕ್‌ ಬಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮನ, 3 ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ.

11:45 – ಕಾರಿನಲ್ಲಿ ರಾಗಿ ಗುಡ್ಡ ಮೆಟ್ರೋ ನಿಲ್ದಾಣಕ್ಕೆ ಆಗಮನ. ಹಳದಿ ಮಾರ್ಗದ ಮೆಟ್ರೋಗೆ ಹಸಿರು ನಿಶಾನೆ ತೋರಿ ಬಳಿಕ ಎಲೆಕ್ಟ್ರಾನಿಕ್‌ ಸಿಟಿವರೆಗೆ ಮೆಟ್ರೋದಲ್ಲಿ ಸಂಚಾರ.
12:55 – ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ನಿಲ್ದಾಣದಿಂದ ರಸ್ತೆ ಮಾರ್ಗದ ಮೂಲಕ ಎಲೆಕ್ಟ್ರಾನಿಕ್‌ ಸಿಟಿಯ ಐಐಟಿ ಆಡಿಟೋರಿಯಂನಲ್ಲಿ ಆಯೋಜನೆಗೊಂಡ ಕಾರ್ಯಕ್ರಮಕ್ಕೆ ಆಗಮನ. ಕೆಂಪಾಪುರ- ಜೆಪಿ ನಗರ ನಮ್ಮ ಮೆಟ್ರೋ ಕಿತ್ತಳೆ ಮಾರ್ಗ ಮತ್ತು ಹೊಸಹಳ್ಳಿ – ಕಡಬಗೆರೆ ಬೂದು ಮಾರ್ಗದ 3ನೇ ಹಂತದ ಮೆಟ್ರೋಗೆ ಶಂಕುಸ್ಥಾಪನೆ. ಈ ವೇದಿಕೆ ಕಾರ್ಯಕ್ರಮ ಸುಮಾರು ಒಂದು ಗಂಟೆ ನಡೆಯಲಿದೆ.

02:15 – ಎಲೆಕ್ಟ್ರಾನಿಕ್‌ ಸಿಟಿಯಿಂದ ರಸ್ತೆ ಮಾರ್ಗದ ಮೂಲಕ ಮೇಖ್ರಿ ಸರ್ಕಲ್ ಬಳಿಯ ಸೇನಾಧಿಕಾರಿ ಕಚೇರಿ ಎಚ್‌ಕ್ಯೂಟಿಸಿಯ ಹೆಲಿಪ್ಯಾಡ್‌ ಆಗಮನ.
02:40 – ಹೆಲಿಕಾಪ್ಟರ್‌ ಮೂಲಕ ಹೆಚ್‌ಎಎಲ್‌ಗೆ ತೆರಳಿ ಅಲ್ಲಿಂದ ದೆಹಲಿಗೆ ನಿರ್ಗಮನ.

ಬಿಜೆಪಿಯಿಂದ ಸ್ವಾಗತ
ಪ್ರಧಾನಿ ಮೋದಿ ಸ್ವಾಗತಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿಲು ಬಿಜೆಪಿ ತಯಾರಿ ಮಾಡಿಕೊಂಡಿದೆ. ಚಾಲುಕ್ಯ ವೃತ್ತದಲ್ಲಿ 2,500 ಕಾರ್ಯಕರ್ತರು, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ 3,750 ಕಾರ್ಯಕರ್ತರು, ಸೌತ್ ಎಂಡ್ ವೃತ್ತದಲ್ಲಿ 3,550 ಕಾರ್ಯಕರ್ತರು, ರಾಗಿಗುಡ್ಡ ವೃತ್ತದಲ್ಲಿ 3,000 ಕಾರ್ಯಕರ್ತರು, ಎಲೆಕ್ಟ್ರಾನಿಕ್ ಸಿಟಿ ವೃತ್ತದಲ್ಲಿ 4,000 ಕಾರ್ಯಕರ್ತರು ಪ್ರಧಾನಿ ಮೋದಿಗೆ ಸ್ವಾಗತ ಕೋರಲಿದ್ದಾರೆ.

Share This Article