ಗ್ರಾಮದಲ್ಲಿ ನಿಲ್ದಾಣ ಮಾಡುವಂತೆ ‘ನಮ್ಮ ಮೆಟ್ರೋ’ ಪಿಲ್ಲರ್ ಏರಿ ಪ್ರತಿಭಟನೆ

Public TV
1 Min Read

ಬೆಂಗಳೂರು/ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲದ ಅಂಚೆಪಾಳ್ಯದ ಬಳಿ ನಮ್ಮ ಮೆಟ್ರೋ ನಿಲ್ದಾಣ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.

ನಿರ್ಮಾಣ ಹಂತದಲ್ಲಿರುವ ಪಿಲ್ಲರ್ ಗಳನ್ನ ಏರಿದ ಯುವಕರು ಮಹಾತ್ಮ ಗಾಂಧಿಜೀ ಹಾಗೂ ಅಂಬೇಡ್ಕರ್ ಫೋಟೋಗಳನ್ನ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಇತ್ತ ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದರು. ಈ ಹಿಂದೆ ನಮ್ಮ ಮೆಟ್ರೋ ಅಧಿಕಾರಿಗಳು ಅಂಚೆಪಾಳ್ಯದ ಬಳಿ ಮೆಟ್ರೋ ನಿಲ್ದಾಣ ಮಾಡುವ ಭರವಸೆ ನೀಡಿದ್ದರು. ಆದರೆ ಏಕಾಏಕಿ ರಸ್ತೆ ಹಾಗೂ ನಿಲ್ದಾಣವನ್ನ ಸಹ ಮಾಡುವುದಿಲ್ಲ ಎಂಬುದಕ್ಕೆ ಆಕ್ರೋಶಗೊಂಡು ಗ್ರಾಮಸ್ಥರು ಮೆಟ್ರೋ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಸ್ಥಳದಲ್ಲಿ ಮಾದನಾಯಕನಹಳ್ಳಿ ಪೊಲೀಸರು ಮೊಕ್ಕಾಂ ಹೂಡಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್ ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದ, ಪ್ರತಿಭಟನಾ ಸ್ಥಳಕ್ಕೆ ಬಿಎಂಆರ್ ಸಿಎಲ್ ಎಂಡಿ ಬರುವಂತೆ ಆಗ್ರಹಿಸುತ್ತಿದ್ದರು. ಪ್ರತಿಭಟನೆಯಲ್ಲಿ ಮಹಿಳೆಯರು ಸಹ ಭಾಗಿಯಾಗಿದ್ದು, ಪಟ್ಟುಬಿಡದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೂಡಲೇ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ತಂದರು. ಇದನ್ನೂ ಓದಿ: ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ

ಸ್ಥಳಕ್ಕೆ ನೆಲಮಂಗಲ ಉಪ ವಿಭಾಗದ ಡಿವೈಎಸ್ ಪಿ ಜಗದೀಶ್, ನಮ್ಮ ಮೆಟ್ರೋ ಮುಖ್ಯ ಇಂಜಿನಿಯರ್ ಕಲ್ಲಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಮಾತನಾಡಿ, ಉನ್ನತ ಅಧಿಕಾರಿಗಳೊಂದಿಗೆ ಮತ್ತೆ ಸಭೆ ನಡೆಸುವ ಭರವಸೆ ನೀಡಿದರು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದೆ ಉಗ್ರ ರೂಪದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಇದನ್ನೂ ಓದಿ; ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ವ್ಯಾಕ್ಸಿನ್ ಸೆಪ್ಟೆಂಬರ್​​​ಗೆ ಲಭ್ಯ – ಬೆಲೆ 750 ರೂ.

Share This Article
Leave a Comment

Leave a Reply

Your email address will not be published. Required fields are marked *