ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪೀಣ್ಯ – ನಾಗಸಂದ್ರ ನಡುವೆ ಮೆಟ್ರೋ ಸಂಚಾರ ಸ್ಥಗಿತ

Public TV
1 Min Read

ಬೆಂಗಳೂರು: ನಾಗಸಂದ್ರ (Nagasandra) ಹಾಗೂ ಮಾದಾವರ (Madavara) ನಡುವಿನ ಹೊಸ ರೈಲು ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ಹಿನ್ನಲೆಯಲ್ಲಿ ಇಂದು ಮೆಟ್ರೋ ರೈಲು (Namma Metro) ಸೇವೆಯಲ್ಲಿ ವ್ಯತ್ಯಾಸವಾಗಲಿದೆ.

ನಾಗಸಂದ್ರ ಹಾಗೂ ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 10 ಗಂಟೆಯಿಂದ 2 ಗಂಟೆವರೆಗೆ ವಾಣಿಜ್ಯ ಸೇವೆ ಸ್ಥಗಿತವಾಗಲಿದೆ. ಇದನ್ನೂ ಓದಿ: 50 ಕೋಟಿ ನೀಡುವಂತೆ ಬೆದರಿಕೆ – ಹೆಚ್‌ಡಿಕೆ, ರಮೇಶ್ ಗೌಡ ವಿರುದ್ಧ ದೂರು

 

ಈ ಅವಧಿಯಲ್ಲಿ ಪೀಣ್ಯ ಹಾಗೂ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಎಂದಿನಂತೆ ಸಂಚರಿಸಲಿದೆ. ನೇರಳೆ ಮಾರ್ಗದ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆಯಿಲ್ಲ.

ಹಸಿರು ಮಾರ್ಗದಲ್ಲಿ ವಿಸ್ತರಿತಗೊಂಡಿರುವ 3.7 ಕಿ.ಮೀ ದೂರದ ಈ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು (ಜಿಂದಾಲ್‌), ಮಾದಾವರ ಮೆಟ್ರೊ ನಿಲ್ದಾಣಗಳಿವೆ. ಸಿವಿಲ್‌ ಕಾಮಗಾರಿ ಬಳಿಕ ಆಗಸ್ಟ್‌ನಿಂದ ಸಾಮರ್ಥ್ಯ ಪರೀಕ್ಷೆ, ಸಿಗ್ನಲಿಂಗ್‌, ದೂರಸಂಪರ್ಕ, ವಿದ್ಯುತ್‌ ಸರಬರಾಜು ವ್ಯವಸ್ಥೆ ಸಿಸ್ಟಂ ಸಂಯೋಜನೆ, ಸಾಮರ್ಥ್ಯ ಪರಿಶೀಲನೆ ಸಹಿತ ಪ್ರಮುಖ ಪರೀಕ್ಷೆಗಳು ನಡೆದಿತ್ತು. ಸುರಕ್ಷತಾ ತಪಾಸಣೆ ತೃಪ್ತಿಕರವಾದರೆ ಆಯುಕ್ತರು ಶೀಘ್ರವೇ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ.

 

Share This Article