ಸರ್ಕಾರಿ ಕಟ್ಟಡದೊಳಗೆ ನಮಾಜ್ – ಜೋಶಿಮಠದಲ್ಲಿ ಉದ್ವಿಗ್ನ ಪರಿಸ್ಥಿತಿ

1 Min Read

ಡೆಹ್ರಾಡೂನ್: ಉತ್ತರಾಖಂಡದ ಐತಿಹಾಸಿಕ ಪವಿತ್ರ ಪಟ್ಟಣ ಜೋಶಿಮಠದ (Joshimath) ಸರ್ಕಾರಿ ಕಟ್ಟಡದೊಳಗೆ ನಮಾಜ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.

ನಗರ ಪಾಲಿಕೆಯಿಂದ ಕ್ರೀಡಾ ಇಲಾಖೆಗೆ ನೀಡಲಾಗಿರುವ ಒಂದು ಕಟ್ಟಡದಲ್ಲಿ ಟೇಬಲ್ ಟೆನ್ನಿಸ್ ಹಾಲ್ ನಿರ್ಮಾಣ ಮಾಡುವ ಉದ್ದೇಶವಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಈ ಕಟ್ಟಡದೊಳಗೆ ಮುಸ್ಲಿಂ ಸಮುದಾಯದವರು ಅನುಮತಿಯಿಲ್ಲದೆ ಜಮಾತ್ ನಮಾಜ್ (Namaz) ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಭಕ್ತರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿರುವುದನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಇದನ್ನೂ ಓದಿ: ಮೇಕೆದಾಟು ಯೋಜನೆ – ವನ್ಯಜೀವಿ ಅನುಮೋದನೆಗಾಗಿ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಪ್ರಸ್ತಾವ

ಸ್ಥಳೀಯ ನಿವಾಸಿಗಳು ಮತ್ತು ಹಿಂದೂ ಸಂಘಟನೆಗಳು ಈ ಕ್ರಮವನ್ನು ವಿರೋಧಿಸಿ, ಸರ್ಕಾರಿ ಆಸ್ತಿಯನ್ನು ಧಾರ್ಮಿಕ ಕಾರ್ಯಕ್ಕೆ ಬಳಸುವುದು ಅಕ್ರಮ ಎಂದು ಆರೋಪಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಢವಾಲ್ ಕಮಿಷನರ್ ವಿನಯ್ ಶಂಕರ್ ಪಾಂಡೆ, ಹಿಂದೂ ಸಂಘಟನೆಗಳು ಸಲ್ಲಿಸಿದ ಮನವಿಯ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ.

Share This Article