ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಮೊಟ್ಟೆ ಹೊಡೆಸಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅನುಮಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದೂ ಧರ್ಮಕ್ಕೆ, ಸಾವರ್ಕರ್‌ಗೆ ಅವಮಾನ ಮಾಡಿದ್ದಾರೆ. ಇದನ್ನು ಕಾಂಗ್ರೆಸ್‍ನಲ್ಲಿ ಇರುವವರೇ ಸಹಿಸಲ್ಲ. ಹೀಗಾಗಿ ಸಿದ್ದರಾಮಯ್ಯಗೆ ಕಾಂಗ್ರೆಸ್ ಕಾರ್ಯಕರ್ತ ಸಂಪತ್ ಮೊಟ್ಟೆ ಎಸೆದಿದ್ದಾನೆ. ಮೊಟ್ಟೆ ಎಸೆದಿರುವುದರ ಹಿಂದೆ ಡಿಕೆಶಿಯವರು ಇರಬೇಕು ಎಂದರು.
ಹಿಂದೂಗಳಿಗೆ ಮಾಡಿದ ಅವಮಾನ, ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್‌ಗೆ ಮಾಡಿದ ಅವಮಾನವನ್ನು ಕಾಂಗ್ರೆಸ್‍ನಲ್ಲಿರುವವರೇ ವಿರೋಧಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹಿಂದೂ ವಿರೋಧ ನೀತಿಯನ್ನು ಕಾಂಗ್ರೆಸ್‍ನಲ್ಲೆ ಸಹಿಸೋದಿಲ್ಲ. ಈ ಕಾರಣದಿಂದ ಕಾಂಗ್ರೆಸ್‍ನಲ್ಲಿರುವ ಹಿಂದೂಗಳು ಕಾಂಗ್ರೆಸ್‍ನ್ನು ತ್ಯಜಿಸುತ್ತಿದ್ದಾರೆ. ಇದರ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತ ಮೊಟ್ಟೆ ಹಾಕಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹತ್ಯೆಗೆ ಯತ್ನಿಸಿದ್ದು ಸತ್ಯ; ನಾನೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ – ಎಂ.ಲಕ್ಷ್ಮಣ್
ಈ ಬಗ್ಗೆ ಸಂಪತ್ ಅವರೇ ಕಾಗ್ರೆಸ್ ಕಾರ್ಯಕರ್ತನೆಂದು ಉಲ್ಲೇಖ ಮಾಡಿದ್ದಾನೆ. ಈ ಬಗ್ಗೆ ಬಿಜೆಪಿ ಹೇಳಿಲ್ಲ ಎಂದ ಅವರು, ಅದಕ್ಕಿಂತ ಮೊದಲು ಡಿಕೆಶಿಯವರು ಮೊಟ್ಟೆ ಹೊಡೆಸಿದ್ದಾರಾ ಎನ್ನುವುದರ ಬಗ್ಗೆ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸೆ. 8ಕ್ಕೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನೋತ್ಸವ: ಸುಧಾಕರ್