ರಾಜಿ ಸಂಧಾನಕ್ಕೆ ಮಲ್ಯ ಆಸ್ಪತ್ರೆಗೆ ಬಂದ ಶಾಸಕ ಹ್ಯಾರಿಸ್

Public TV
1 Min Read

ಬೆಂಗಳೂರು: ಪುತ್ರ ನಲಪಾಡ್ ನಿಂದ ಹಲ್ಲೆಗೆ ಒಳಗಾದ ವಿದ್ವತ್ ಅವರನ್ನು ನೋಡಲು ಶಾಂತಿನಗರದ ಶಾಸಕ ಹ್ಯಾರಿಸ್ ದಂಪತಿ ಇಂದು ರಾತ್ರಿ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ವಿದ್ವತ್ ತಂದೆ ಲೋಕನಾಥ್ ಬಳಿ, ಏನೋ ಮಕ್ಕಳು ಹೊಡೆದಾಡಿಕೊಂಡಿದ್ದು ಬುದ್ಧಿ ಹೇಳೋಣ. ಕಳೆದ ಮೂರು ದಿನಗಳಿಂದ ಸತ್ತು ಬದುಕಿದ್ದೇನೆ. ಕೋರ್ಟ್ ನಲ್ಲಿ ಆಕ್ಷೇಪಣೆ ಹಾಕಬೇಡಿ, ನನ್ನ ಮಗನಿಗೆ ಜಾಮೀನು ಸಿಗುವುದಿಲ್ಲ ಎಂದು ಹೇಳಿ ಶಾಸಕ ಹ್ಯಾರಿಸ್ ಗೋಳಾಡಿದ್ದಾರೆ.

ಹ್ಯಾರಿಸ್ ಅವರ ಈ ಸಂಧಾನಕ್ಕೆ ಮಣಿಯದ ಲೋಕನಾಥ್, ಶಾಸಕರ ಸಂಪೂರ್ಣ ಮಾತು ಕೇಳಿ ಡಾಕ್ಟರ್ ಕರೆದರು ಎಂದು ಹೇಳಿ ಒಳಗಡೆ ಹೋಗಿದ್ದಾರೆ. ಕೊನೆಗೆ ಸಂಧಾನ ಯಶಸ್ವಿಯಾಗದೇ ಸಪ್ಪೆ ಮೋರೆ ಹಾಕಿಕೊಂಡು ಹ್ಯಾರಿಸ್ ಹೊರಬಂದಿದ್ದಾರೆ.

ಇಬ್ಬರ ಮಾತುಕತೆಯ ಬಳಿಕ ಮಾಧ್ಯಮಗಳು ಪ್ರತಿಕ್ರಿಯೆ ಕೇಳಲು ಮುಂದಾದಾಗ “ನೋ ನೋ” ಎಂದು ಹೇಳಿ ಹ್ಯಾರಿಸ್ ಕಾರು ಹತ್ತಿ ಹೊರಟು ಹೋಗಿದ್ದಾರೆ.

ರಾತ್ರಿ ಬಿಜೆಪಿ ಮುಖಂಡ ಸಿಟಿ ರವಿ ಅವರು ವಿದ್ವತ್ ನೋಡಲು ಆಸ್ಪತ್ರೆಗೆ ಆಗಮಿಸಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇನ್ಫೆಕ್ಷನ್ ಆಗುತ್ತದೆ ಎನ್ನುವ ಕಾರಣಕ್ಕೆ ಐಸಿಯುಗೆ ಬಿಡಲಿಲ್ಲ. ಅವರ ತಂದೆಯ ಜೊತೆ ಮಾತನಾಡಿ ಆರೋಗ್ಯವನ್ನು ವಿಚಾರಿಸಿ ಬಂದಿದ್ದೇನೆ. ಪೋಷಕರು ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವುದನ್ನು ಈ ಪ್ರಕರಣ ತಿಳಿಸಿಕೊಡುತ್ತದೆ ಎಂದು ಹೇಳಿದರು.

https://youtu.be/JGFneQ-8OTg

https://youtu.be/-BMml-Cw79E

https://youtu.be/S8uFT-0fdmo

 

https://www.youtube.com/watch?v=rByoOC1wzSk

Share This Article
Leave a Comment

Leave a Reply

Your email address will not be published. Required fields are marked *