ಬಹುಕಾಲದ ಗೆಳೆಯನ ಜೊತೆ ನಟಿ ಸುರಭಿ ಚಂದ್ನಾ ಮದುವೆ

Public TV
1 Min Read

ಬಾಲಿವುಡ್‌ನಲ್ಲಿ ಮೋಡಿ ಮಾಡಿದ ಮುದ್ದು ಮುಖದ ಸುಂದರಿ ಸುರಭಿ ಚಂದ್ನಾ (Surabhi Chandna) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಕರಣ್ ಶರ್ಮಾ (Karan Sharma) ಜೊತೆ ಜೈಪುರನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಸಿನಿಮಾಗೆ ಸಂಜಯ್ ದತ್ ಎಂಟ್ರಿ

ನಾಗಿನ್ 5, ಬಿಗ್ ಬಾಸ್ ಸೀಸನ್ 15 ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸುರಭಿ ಅವರು ಉದ್ಯಮಿ ಕರಣ್ ಶರ್ಮಾ ಜೊತೆ ಕಳೆದ 13 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಈಗ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಮಾರ್ಚ್ 2ರಂದು ಮದುವೆ ಆಗಿದ್ದಾರೆ. ಮದುವೆಯ (Wedding) ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.‌

ತಮ್ಮ ಮದುವೆಯ ವಿಶೇಷ ದಿನಕ್ಕಾಗಿ ಸುರಭಿ ವಿಭಿನ್ನವೆನಿಸಿದ ಭಾರಿ ಅಂಬ್ರಾಯಿಡರಿ ಹಾಗೂ ಸ್ಟೋನ್ ವರ್ಕ್ ಇರುವ ಮಿಶ್ರ ಬಣ್ಣದ ಲೆಹೆಂಗಾ ಧರಿಸಿದ್ದಾರೆ. ಅದಕ್ಕೆ ಮ್ಯಾಚ್ ಆಗುವಂತೆ ಬೂದಿ ಕಲರ್ ಬಣ್ಣದ ಗ್ರ್ಯಾಂಡ್ ಶೆರ್ವಾನಿಯಲ್ಲಿ ಕರಣ್ ಶರ್ಮಾ ಮಿಂಚಿದ್ದಾರೆ. ನವಜೋಡಿಯ ಸುಂದರ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.

ನಟಿ ಸುರಭಿ ಮದುವೆಗೆ ನಟಿ ಶ್ರೇನು, ಮಾನಸಿ ಶ್ರೀವಾಸ್ತವ್, ಶಿವಾಂಗಿ ಜೋಶಿ, ಸೇರಿದಂತೆ ಅನೇಕರು ಭಾಗಿಯಾಗಿ ಹಾರೈಸಿದ್ದಾರೆ. ಈ ಮದುವೆ ಸುದ್ದಿ ಕೇಳಿ ನಾಗಿನ್ ನಟಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

Share This Article