ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್

Public TV
1 Min Read

ತೆಲಗು ನಟ ನಾಗಾರ್ಜುನ (Nagarjuna) ಅವರ ಮಗ ಅಖಿಲ್ ಅಕ್ಕಿನೇನಿ (Akhil Akkineni) ತಮ್ಮ ಗೆಳತಿ ಝೈನಾಬ್ (Zainab Ravdjee) ಅವರನ್ನು ಮದುವೆಯಾಗಿದ್ದಾರೆ. ಮದುವೆ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನೆರವೇರಿದೆ.

ಮದುವೆಯ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಚಿತ್ರದಲ್ಲಿ ಅಖಿಲ್ ಬಿಳಿ ಕುರ್ತಾ ಮತ್ತು ಧೋತಿಯಲ್ಲಿ ಧರಿಸಿದ್ದು, ಜೈನಾಬ್ ಬಿಳಿ ರೇಷ್ಮೆ ಸೀರೆಯನ್ನು ಧರಿಸಿದ್ದರು. ಇನ್ನೂ ಮದುವೆ ನಡೆದ ಅನ್ನಪೂರ್ಣ ಸ್ಟುಡಿಯೋವನ್ನು ಅಖಿಲ್ ಅವರ ಅಜ್ಜ, ದಂತಕಥೆ ನಟ ಅಕ್ಕಿನೇನಿ ನಾಗೇಶ್ವರ ರಾವ್ ಸ್ಥಾಪನೆ ಮಾಡಿದ್ದರು.

ಸಮಾರಂಭದಲ್ಲಿ ಚಿರಂಜೀವಿ, ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನ, ಶೋಭಿತಾ ಧೂಲಿಪಾಲ ಮತ್ತು ನಾಗ ಚೈತನ್ಯ ಸೇರಿದಂತೆ ತೆಲುಗು ಚಲನಚಿತ್ರೋದ್ಯಮದ ಹಲವಾರು ಪ್ರಮುಖ ನಟ ನಟಿಯರು ಪಾಲ್ಗೊಂಡಿದ್ದರು. ವಿವಾಹಕ್ಕೂ ಮುನ್ನ ಉತ್ಸಾಹಭರಿತ ಬರಾತ್ ಸಮಾರಂಭವನ್ನು ನಡೆಸಲಾಯಿತು, ಅಲ್ಲಿ ಚೈತನ್ಯ ಸಾಂಪ್ರದಾಯಿಕ ಕೆಂಪು ಕುರ್ತಾದಲ್ಲಿ ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು.

ನಿರ್ದೇಶಕ ಪ್ರಶಾಂತ್ ನೀಲ್, ಚಿರಂಜೀವಿ, ದಗ್ಗುಬಾಟಿ ವೆಂಕಟೇಶ್ ಮತ್ತು ನಾಗಾರ್ಜುನ ಸೇರಿದಂತೆ ಅನೇಕ ಅತಿಥಿಗಳು ಸಹ ವಿವಾಹದಲ್ಲಿ ಭಾಗಿಯಾಗಿದ್ದರು. ಅಖಿಲ್ ಮತ್ತು ಝೈನಾಬ್‌ರ ನಿಶ್ಚಿತಾರ್ಥ ಕಳೆದ ನವೆಂಬರ್‌ನಲ್ಲಿ ನಡೆದಿತ್ತು. ಇದಕ್ಕೂ ಮೊದಲು ಎರಡು ವರ್ಷಗಳ ಕಾಲ ಅವರು ಡೇಟಿಂಗ್‌ನಲ್ಲಿದ್ದರು.

ಅಖಿಲ್ ತಮ್ಮ ತಂದೆಯ ಚಲನಚಿತ್ರ ಸಿಸಿಂದ್ರಿದಲ್ಲಿ ಬಾಲನಟನಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಏಜೆಂಟ್ (2023), ಮಿಸ್ಟರ್ ಮಜ್ನು (2019), ಹಲೋ! (2017) ಮತ್ತು ಅಖಿಲ್ (2015) ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

Share This Article