‘ಯುವ’ನ ಚೊಚ್ಚಲ ಚಿತ್ರವನ್ನು ಹಾಡಿ ಹೊಗಳಿದ ನಾಗಾರ್ಜುನ್

Public TV
1 Min Read

ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar) ನಟನೆಯ ‘ಯುವ’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬೆನ್ನಲ್ಲೇ ಟಾಲಿವುಡ್ ನಾಗಾರ್ಜನ್ ಅಕ್ಕಿನೇನಿ ‘ಯುವ’ (Yuva Film) ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಯುವ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿರುವ ಮಿತ್ರರಿಗೆ ಎಲ್ಲರಿಗೂ ನಮಸ್ಕಾರ, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಯುವ ಸಿನಿಮಾ ಮೊನ್ನೆ ಶುಕ್ರವಾರ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಯುವ ಚಿತ್ರ ಹಿಟ್ ಕೂಡ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಹೈದರಾಬಾದ್‌ನಲ್ಲಿಯೂ ಚಿತ್ರ ಹಿಟ್ ಆಗಿದೆ ಎಂದು ನಾಗಾರ್ಜುನ್ ಮಾತನಾಡಿದ್ದಾರೆ. ವಿಡಿಯೋ ಮೂಲಕ ವಿಶ್‌ ಮಾಡಿದ್ದಾರೆ. ಇದನ್ನೂ ಓದಿ:8 ವರ್ಷಗಳ ಬಳಿಕ ಟಾಲಿವುಡ್‌ಗೆ ಕಮ್‌ಬ್ಯಾಕ್ ಆದ ‘ವೀರಕನ್ನಡಿಗ’ ನಟಿ

ಈ ವೇಳೆ, ವರನಟ ರಾಜ್‌ಕುಮಾರ್ ಅವರನ್ನು ನಾಗಾರ್ಜುನ್ ಸ್ಮರಿಸಿದ್ದಾರೆ. ತೆಲುಗು ಮಂದಿಗೂ ಅವರೆಂದರೆ ಇಷ್ಟ. ಇನ್ನೂ ನಿಮ್ಮ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದೀರಿ. ನಿಮ್ಮ ಮುಂದಿನ ಹೆಜ್ಜೆಗೆ ಶುಭವಾಗಲಿ ಎಂದು ದೊಡ್ಮನೆ ಕುಡಿಗೆ ತೆಲುಗು ನಟ ನಾಗಾರ್ಜುನ್ ಶುಭಹಾರೈಸಿದ್ದಾರೆ.

‘ಯುವ’ ಸಿನಿಮಾ ಇದೇ ಮಾರ್ಚ್.29ಕ್ಕೆ ರಿಲೀಸ್ ಆಗಿದೆ. ಯುವ ಮತ್ತು ಸಪ್ತಮಿ ಗೌಡ (Sapthami Gowda) ಜೋಡಿ ನೋಡುಗರ ಗಮನ ಸೆಳೆದಿದೆ. ಸಂತೋಷ್ ಆನಂದ್‌ರಾಮ್ (Santhosh Anandram) ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ ‘ಯುವ’ (Yuvafilm) ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Share This Article