ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡಿ: ಪ್ರತಾಪ್ ಸಿಂಹ

Public TV
1 Min Read

ಮೈಸೂರು: ಮೈಸೂರು-ಕೊಡಗು ವ್ಯಾಪ್ತಿಯ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಮರುನಾಮಕರಣಕ್ಕೆ ಪ್ರಸ್ತಾವನೆ ಹಿನ್ನೆಲೆಯಲ್ಲಿ ಫಿಲ್ಡ್ ಮಾರ್ಷಲ್ ಕಾರ್ಯಪ್ಪನವರ ಹೆಸರಿಡಿ ಎಂದು ಸಂಸದ ಪ್ರತಾಪ್ ಸಿಂಹ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿಗೆ ಮನವಿ ಪತ್ರ ನೀಡಿದ ಪ್ರತಾಪ್ ಸಿಂಹ, ರಾಷ್ಟ್ರೀಯ ಉದ್ಯಾನವನಕ್ಕೆ ಭಾರತೀಯ ಸೇನೆಯ ಮೊದಲ ಫೀಲ್ಡ್ ಮಾರ್ಷಲ್ ಜನರಲ್ ಕೆ. ಎಂ ಕಾರ್ಯಪ್ಪ ಹೆಸರಿಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು, ಜನರಲ್ ಕಾರ್ಯಪ್ಪ ಹೆಸರಿಡಲಿ: ಅಪ್ಪಚ್ಚು ರಂಜನ್

ಉದ್ಯಾನವನ ಮೈಸೂರು ಕೊಡಗು ಭಾಗಕ್ಕೆ ಸೇರಿದೆ. ಈ ಬಗ್ಗೆ ಈಗಾಗಲೇ ಆನ್‍ಲೈನ್ ಕ್ಯಾಂಪೇನ್ ಆರಂಭವಾಗಿದ್ದು, ಕೊಡಗಿನ ಜನಸಂಖ್ಯೆ ಬಹಳ ಕಡಮೆ ಇದ್ದರು, ಅದರಲ್ಲಿ ಬಹುತೇಕರು ಭಾರತೀಯ ಸೇನೆಯ ಸೇವೆಯಲ್ಲಿದ್ದಾರೆ. ಅವರಿಗೆ ಗೌರವ ಸಮರ್ಪಿಸಲು ಕಾರ್ಯಪ್ಪ ಅವರ ಹೆಸರು ಬಹಳ ಸೂಕ್ತ. ಅವರ ನಿಸ್ವಾರ್ಥ ಸೇವೆಗೆ ಗೌರವ ಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕೊಡವ ಭಾಷೆಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರನ್ನು ಸ್ಮರಿಸಿದ ರಾಷ್ಟ್ರಪತಿ

ದೇಶದ ಹಲವು ಭಾಗದ ರಾಷ್ಟ್ರೀಯ ಉದ್ಯಾನವನಗಳಿಗೆ ನೆಹರು, ಗಾಂಧಿ ಕುಟುಂಬದ ಹೆಸರಿದೆ. ಇದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್ ಗಾಂಧಿ ಹೆಸರು ಸೂಕ್ತವಲ್ಲ. ಕೊಡಗಿನ ಜನರು ಭಾರತೀಯ ಸೇನೆಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದನ್ನು ಗೌರವಿಸಿ ಅವರ ಭಾವನೆಗಳಿಗೆ ಪೂರಕವಾಗಿ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಹೆಸರು ಇಡಬೇಕೆಂದು ಮನವಿಯಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿಗಳಿಂದ ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆ

Share This Article
Leave a Comment

Leave a Reply

Your email address will not be published. Required fields are marked *