ಆದಿಯೋಗಿ ಸನ್ನಿಧಾನದಲ್ಲಿ ನಾಗರಪಂಚಮಿ ಸಂಭ್ರಮ

Public TV
2 Min Read

– ಈಶಾ ಆದಿಯೋಗ ಕೇಂದ್ರದ ನಾಗಮಂಟಪದ ಬಳಿ ನಾಗರಾಧಾನೆ

ಚಿಕ್ಕಬಳ್ಳಾಪುರ: ಶ್ರಾವಣ ಮಾಸ ಸಾಲು ಸಾಲು ಹಬ್ಬಗಳ ಆಗಮನ, ನಾಡಿನೆಲ್ಲೆಡೆ ನಾಗರಪಂಚಮಿ ಹಬ್ಬ ಸಡಗರ ಸಂಭ್ರಮದಿಂದ ನೇರವೇರಿದೆ. ಎಲ್ಲೆಡೆ ಶ್ರದ್ಧಾ ಭಕ್ತಿಪೂರ್ವಕವಾಗಿ ನಾಗರಪಂಚಮಿ ಹಬ್ಬವನ್ನ ಆಚರಣೆ ಮಾಡಲಾಗಿದ್ದು, ಅದೇ ರೀತಿ ಈಶಾ ಆದಿಯೋಗಿಯ ಸನ್ನಿಧಾನದಲ್ಲೂ ಸಡಗರ ಸಂಭ್ರಮದಿಂದ ನಾಗರಪಂಚಮಿ ಆಚರಣೆ ಮಾಡಲಾಗಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಈಶಾ ಯೋಗಕೇಂದ್ರದಲ್ಲಿರುವ 112 ಅಡಿ ಎತ್ತರದ ಆದಿಯೋಗಿ ಶಿವನ ಮುಂಭಾಗದ ನಾಗಮಂಟಪದ ಬಳಿ ನಾಗರಪಂಚಮಿಯನ್ನ ಸಡಗರ ಸಂಭ್ರಮದಿಂದ ಅಚರಣೆ ಮಾಡಲಾಯಿತು. ನಾಗರಪಂಚಮಿಯ ಅಂಗವಾಗಿ ನಾಗಮಂಟಪದ‌ ಬಳಿ ನಾಗಮಂಡಲ ರಚನೆ ಮಾಡಿ ನಾಗಾರಾಧಾನೆ ಮಾಡಲಾಯಿತು. ಉಡುಪಿ ಮೂಲದ ನಾಗಪಾತ್ರಿಗಳು ನಾಗಾರಾಧಾನ ನೃತ್ಯ ನಡೆಸಿದರು. ಇನ್ನೂ ನಾಗಾರಾಧನ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಭಕ್ತರನ್ನುದ್ದೇಶಿ ಮಾತನಾಡಿದ, ಸದ್ಗುರು ಜಗ್ಗಿ ವಾಸುದೇವ್ 19 ವರ್ಷಗಳ ನಂತರ ಶ್ರಾವಣ‌ಮಾಸದಲ್ಲಿ ನಾಗರಪಂಚಮಿ ಆಗಮನವಾಗಿದ್ದು ಸಡಗರ ಸಂಭ್ರಮದಿಂದ ನಾಗಾರಾಧನೆ ಮಾಡುವ ಮೂಲಕ ನಾಗನ ಕೃಪೆಗೆ ಭಕ್ತರು ಪಾತ್ರರಾಗುವಂತೆ ಕೋರಿದರು.

ಹೌದು. ನಾಗಮಂಟಪಕ್ಕೆ ಮಂಗಳಾರತಿ ಮಾಡುವ ಮೂಲಕ ನಾಗಾರಾಧನಾ ಕಾರ್ಯಕ್ರಮ ಆರಂಭವಾಯಿತು. ನಾಗಮಂಡಲದ ಸುತ್ತಲೂ ಡಮರುಗ ತಾಳ‌ಮೇಳ ವಾದ್ಯಗಳ ಸದ್ದಿಗೆ ಹೆಣ್ಣು ಗಂಡು ವೇಷ ಧರಿಸಿದ್ದ ಉಡುಪಿ ಮೂಲದ ನಾಗಪಾತ್ರಿಗಳು ನೃತ್ಯ ಮಾಡುತ್ತಾ ನಾಗರಾಧನ ಕಾರ್ಯಕ್ರಮ ನಡೆಸಿಕೊಟ್ಟರು. ಸರಿಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ನಾಗಾರಾಧನ ನೃತ್ಯ ಭಕ್ತರ ಕಣ್ಮನ ಸೆಳೆಯಿತು. ಕರಾವಳಿ ತುಳುನಾಡು ಭಾಗದಲ್ಲಿ ಮಾತ್ರ ಮಾಡಲಾಗುತ್ತಿದ್ದ ಈ‌ ನಾಗಾರಾಧನ ಕಾರ್ಯಕ್ರಮ ಈಶಾ ಆದಿಯೋಗಿ ಕೇಂದ್ರದಲ್ಲೂ ಶ್ರದ್ದಾ ಭಕ್ತಿಯಿಂದ ನೇರವೇರಿತು. ನಾಗರಪಂಚಮಿಯ ಆಚರಣೆ ವೇಳೆ ಬಹುಭಾಷಾ ನಟಿ ತಮನ್ನಾ ಭಾಟಿಯಾ, ನಟಿ ಶ್ರೀನಿಧಿ ಶೆಟ್ಟಿ, ನಟಿ ಮಯೂರಿ ಕುಟುಂಬ ಸಮೇತ ಆಗಮಿಸಿ ದೈವದ ಕೃಪೆಗೆ ಪಾತ್ರರಾದರು.

ನಾಗರಪಂಚಮಿಯ ಅಚರಣೆಯಲ್ಲಿ ಗಣ್ಯಾತಿಗಣ್ಯರ ಜೊತೆ ಸಹಸ್ರಾರು ಭಕ್ತ ಸಮೂಹ ಸಹ ಭಾಗವಹಿಸಿ ನಾಗರಾಧನೆ ಮಾಡುವ ಮೂಲಕ ನಾಗನ ಕೃಪೆಗೆ ಪಾತ್ರರಾದರು. ಇನ್ನೂ ಇದಕ್ಕೂ ಮುನ್ನ ಸರ್ಪ ದೋಷ ನಿವಾರಣಾ ಆಶ್ಲೇಷ ಬಲಿ ಪೂಜೆ ಸಹ ನೇರವೇರಿದ್ದು ಆ ಪೂಜಾ ಕೈಂಕರ್ಯದಲ್ಲೂ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್