ನಾಗರ ಪಂಚಮಿ ಸ್ಪೆಷಲ್: ಸುಲಭವಾಗಿ ಅಕ್ಕಿ ಉಂಡೆ ಈ ರೀತಿ ಮಾಡಿ

Public TV
2 Min Read

ನಾಗರ ಪಂಚಮಿ ಬಂದಾಯ್ತು ಎಂದರೆ ಹಬ್ಬಗಳ ಸೀಸನ್ ಪ್ರಾರಂಭವಾಯ್ತು ಎಂತಲೇ ಅರ್ಥ. ಹಿಂದೂಗಳಿಗೆ ನಾಗರ ಪಂಚಮಿ ಹಬ್ಬಗಳಿಗೆ ಮುನ್ನುಡಿ ಇದ್ದಂತೆ. ಇನ್ನೇನು ಒಂದಾದಮೇಲೊಂದರಂತೆ ಹಬ್ಬಗಳು ಬರಲಿದ್ದು, ಪ್ರತಿ ಹಬ್ಬಕ್ಕೆ ಮನೆಯಲ್ಲಿ ಒಂದೊಂದೇ ಸಿಹಿ ತಿಂಡಿಗಳನ್ನೂ ಮಾಡಬೇಕಾಗಿ ಬರುತ್ತದೆ. ನಾವೀಗಾಗಲೇ ನಾಗರ ಪಂಚಮಿಗೆ ಸ್ಪೆಷಲ್ ಅಡುಗೆ ಅರಿಶಿನ ಎಲೆ ಕಡುಬು ಹಾಗೂ ಅಳ್ಳಿಟ್ಟು ಮಾಡೋದು ಹೇಗೆಂದು ನೋಡಿದ್ದೇವೆ. ಇಂದು ಕೂಡಾ ನಾವು ಸಿಂಪಲ್ ಆಗಿ ಅಕ್ಕಿ ಉಂಡೆ ಹೇಗೆ ಮಾಡೋದು ಎಂದು ನೋಡೊಣ.

ಬೇಕಾಗುವ ಪದಾರ್ಥಗಳು:
ಅಕ್ಕಿ – 1 ಕಪ್
ತುಪ್ಪ – ಅರ್ಧ ಕಪ್
ಸಕ್ಕರೆ ಪುಡಿ – 1 ಕಪ್
ಒಣ ದ್ರಾಕ್ಷಿ – ಕೆಲವು
ಗೋಡಂಬಿ – ಕೆಲವು
ಏಲಕ್ಕಿ ಪುಡಿ -ಚಿಟಿಕೆ ಇದನ್ನೂ ಓದಿ: Naga Panchami 2023: ಬಾಯಲ್ಲಿ ನೀರೂರಿಸುವ ಅಳ್ಳಿಟ್ಟು, ಅರಿಶಿನ ಎಲೆ ಕಡುಬು ಮಾಡಿ ನೋಡಿ

ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿ ಹಾಕಿ ನೀರಿನಿಂದ ಚೆನ್ನಾಗಿ ತೊಳೆದು, ಬಳಿಕ ಅದನ್ನು ನೀರಿನಿಂದ ಬಸಿದು ಶುಭ್ರವಾದ ಬಟ್ಟೆಯಲ್ಲಿ ಹರಡಿ ಒಣಗಲು ಬಿಡಿ.
* ಅಕ್ಕಿ ಒಣಗಿದ ಬಳಿಕ ಅದನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ.
* ಒಂದು ಪ್ಯಾನ್ ಅನ್ನು ಬಿಸಿ ಮಾಡಿ, ಅದರಲ್ಲಿ ಅಕ್ಕಿ ಹಾಕಿ ಹುರಿದುಕೊಳ್ಳಿ.
* ಅಕ್ಕಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಉರಿಯನ್ನು ಆಫ್ ಮಾಡಿ, ಆರಲು ಬಿಡಿ.
* ಬಳಿಕ ಅದನ್ನು ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ (ಮಿಲ್‌ನಲ್ಲಿ ಪುಡಿ ಮಾಡಿದರೆ ಉತ್ತಮ).
* ಈಗ ಪ್ಯಾನ್‌ನಲ್ಲಿ ತಪ್ಪ ಬಿಸಿ ಮಾಡಿ, ಅಕ್ಕಿ ಹಿಟ್ಟನ್ನು ಅದಕ್ಕೆ ಸೇರಿಸಿ, ಗಂಟಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ತುಪ್ಪ ಕರಗಿ ಹಿಟ್ಟಿನಂತಾದ ಬಳಿಕ ಉರಿಯನ್ನು ಕಡಿಮೆ ಮಾಡಿ 5 ನಿಮಿಷ ಬೇಯಿಸಿಕೊಳ್ಳಿ.
* ಬೇಯಿಸಿದ ಹಿಟ್ಟನ್ನು ಒಂದು ತಟ್ಟೆಗೆ ಹಾಕಿ, ತಣ್ಣಗಾಗಲು ಬಿಡಿ.
* ಬಳಿಕ ಅದಕ್ಕೆ ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಬಳಿಕ ಅದಕ್ಕೆ ಏಲಕ್ಕಿ ಪುಡಿ, ಸಣ್ಣಗೆ ಕತ್ತರಿಸಿದ ಗೋಡಂಬಿ ಹಾಗೂ ದ್ರಾಕ್ಷಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
* ಈಗ ಹಿಟ್ಟಿನಿಂದ ಪುಟ್ಟ ಪುಟ್ಟ ಉಂಡೆಗಳನ್ನು ತಯಾರಿಸಿ.
* ಗೋಡಂಬಿ, ದ್ರಾಕ್ಷಿಗಳಿಂದ ಅಲಂಕರಿಸಿದರೆ ಅಕ್ಕಿ ಉಂಡೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸುಲಭವಾಗಿ ಮಾಡಿ ಡ್ರೈಫ್ರೂಟ್ಸ್ ಬರ್ಫಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್