ನಾಗಮಂಗಲ ಗಲಭೆ | ಎಲ್ಲರನ್ನೂ A1 ಮಾಡಲು ಅಗುತ್ತಾ?: ಬಿಜೆಪಿ ನಾಯಕರಿಗೆ ಚಲುವರಾಯಸ್ವಾಮಿ ತಿರುಗೇಟು

By
1 Min Read

ಬೆಂಗಳೂರು: ಎಲ್ಲರನ್ನೂ ಎ1 ಮಾಡಲು ಆಗುತ್ತಾ ಎಂದು ಕೃಷಿ ಸಚಿವ, ನಾಗಮಂಗಲ ಶಾಸಕ ಚಲುವರಾಯಸ್ವಾಮಿ (Chaluvaraya Swamy) ಪ್ರಶ್ನಿಸಿ ಬಿಜೆಪಿ (BJP) ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನಾಗಮಂಗಲ ಗಲಭೆ (Nagamangala Violence) ಬಗ್ಗೆ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಗಣೇಶನನ್ನು ಕೂರಿಸಿದವರನ್ನು ಎ1 ಮಾಡಿದ್ದಾರೆ. ಎ1 ಆರೋಪಿಯನ್ನಾಗಿ ಒಬ್ಬರನ್ನೇ ಮಾಡಲು ಆಗುವುದು ಎಂದು ತಿಳಿಸಿದರು. ಇದನ್ನೂ ಓದಿ: ನಾಗಮಂಗಲ ಗಲಭೆ| ಕೇಸ್‌ನಲ್ಲಿ ಹಿಂದೂಗಳು ಟಾರ್ಗೆಟ್ – ಬಿಜೆಪಿ ಆಕ್ರೋಶ

 

ಸಿಸಿಟಿವಿ ವಿಡಿಯೋ ಗಮನಿಸಿ ಪೊಲೀಸರು ಎರಡು ಕೋಮಿನವರನ್ನ ಬಂಧಿಸಿದ್ದಾರೆ. ಒಂದು ವೇಳೆ ಬಂಧನಕ್ಕೆ ಒಳಗಾದವರು ಗಲಭೆಯಲ್ಲಿ ಭಾಗಿಯಾಗದೇ ಇದ್ದರೆ ಚಾರ್ಚ್ ಶೀಟ್ ಹಾಕುವಾಗ ಅವರ ಹೆಸರನ್ನ ತೆಗೆಯಬೇಕು ಎಂದು ಆದೇಶ ಮಾಡಿದ್ದೇವೆ ಎಂದರು.

ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಸಂಸದರಾಗಿ ಏನು ಕೆಲಸ ಮಾಡಬೇಕು ಅದನ್ನು ಮಾಡುವುದಕ್ಕೆ ಹೇಳಿ. ಸುಮ್ನೆ ಏನೇನೋ ಮಾತನಾಡುತ್ತಾರೆ. ಅವರ ಹೇಳಿಕೆಗಳಿಗೆ ನಾನು ಉತ್ತರಿಸಬಾರದು ಅಂತಾ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.

 

Share This Article