ನಾಗಚೈತನ್ಯ ಹೊಸ ಚಿತ್ರಕ್ಕೆ ಸಾಯಿ ಪಲ್ಲವಿ ಹೀರೋಯಿನ್

Public TV
1 Min Read

ಟಾಲಿವುಡ್ (Tollywood) ಯಂಗ್ ಹೀರೋ ನಾಗಚೈತನ್ಯ (Nagachaitanya) ಇತ್ತೀಚೆಗೆ 2ನೇ ಮದುವೆ ವಿಚಾರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಬೆನ್ನಲ್ಲೇ  ನಟಿ ಸಾಯಿ ಪಲ್ಲವಿ (Sai Pallavi) ಜೊತೆ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ. ಸತತ ಸೋಲಿನಿಂದ ಬೇಸತ್ತ ನಾಗಚೈತನ್ಯ ಈಗ ಮತ್ತೆ ‘ಲವಸ್ಟೋರಿ’ (Love Story) ಸಹನಟಿ, ಸಾಯಿ ಪಲ್ಲವಿ ಜೊತೆ ಕೈಜೋಡಿಸಿದ್ದಾರೆ.

ನಾಗಚೈತನ್ಯ- ಸಾಯಿ ಪಲ್ಲವಿ ಹೊಸ ಸಿನಿಮಾಗೆ ಅಲ್ಲು ಅರವಿಂದ್ (Allu Aravind) ನಿರ್ಮಾಣ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಚಂದು ಮೊಂಡೇಟಿ ನಿರ್ದೇಶನ ಮಾಡಲಿದ್ದಾರೆ. ಸದ್ಯ ಅವರು ಕಾರ್ತಿಕೇಯ 3 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಿದ್ದಾರೆ. ಬಳಿಕ ನಾಗಚೈತನ್ಯ ಜೊತೆಗಿನ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಇದನ್ನೂ ಓದಿ:ಕಣ್ಮುಂದೆಯೇ ರಶ್ಮಿಕಾ ಇದ್ದರೂ ಮುಖ ತಿರುಗಿಸಿಕೊಂಡು ಹೋದ ಶ್ರದ್ಧಾ ಕಪೂರ್

ಈ ಸಿನಿಮಾದ ಕುರಿತು ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಇಷ್ಟು ಪ್ರೀತಿಸುವ ತಂಡವನ್ನು ಸೇರಿಕೊಳ್ಳುತ್ತಿರುವುದು ಬಹಳ ಖುಷಿಯ ವಿಷಯ. ಬೆಚ್ಚನೆಯ ಸ್ವಾಗತಕ್ಕೆ ಗೀತಾ ಆರ್ಟ್ಸ್, ಬನ್ನಿ ವಾಸು, ಚಂದು ಮೊಂಡೇಟಿಗೆ ಧನ್ಯವಾದ. ನಾಗ ಚೈತನ್ಯ ಅವರೇ ನಿಮ್ಮೊಂದಿಗೆ ಮತ್ತೊಂದು ಸಿನಿಮಾ ಮಾಡುತ್ತಿರುವುದು ಖುಷಿಯ ಸಂಗತಿ. ನನ್ನ ಪ್ರಿಯವಾದ ತೆಲುಗು ಪ್ರೇಕ್ಷಕರೇ, ನಿಮ್ಮನ್ನು ನಾನು ಬಹಳ ಮಿಸ್ ಮಾಡಿಕೊಂಡಿದ್ದೆ. ಈಗ NC 23 ಸಿನಿಮಾ ಮೂಲಕ ನಿಮ್ಮನ್ನು ಭೇಟಿ ಆಗುತ್ತಿರುವುದು ಬಹಳ ಖುಷಿ ನೀಡಿದೆ ಎಂದು ಬರೆದುಕೊಂಡಿದ್ದಾರೆ. ‘ಲವ್‌ಸ್ಟೋರಿ’ ಸಕ್ಸಸ್‌ ನಂತರ ಮತ್ತೆ ಒಂದಾಗ್ತಿರೋ ಈ ಜೋಡಿ ಮಗದೊಮ್ಮೆ ಗೆದ್ದು ಬೀಗುತ್ತಾರಾ ಕಾಯಬೇಕಿದೆ.

ಕಮಲ್ ಹಾಸನ್ (Kamal Haasan) ನಿರ್ಮಾಣದ ಸಿನಿಮಾದಲ್ಲಿ ಶಿವ ಕಾರ್ತಿಕೇಯನ್‌ಗೆ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಹೊಸ ಚಿತ್ರಕ್ಕೆ ರೌಡಿ ಬೇಬಿ ಫೈನಲ್ ಆಗಿದ್ದಾರೆ ಎನ್ನಲಾಗುತ್ತಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್