ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

Public TV
1 Min Read

ಹೈದರಾಬಾದ್: ಕೆಲ ವರ್ಷಗಳ ಡೇಟಿಂಗ್ ಬಳಿಕ ತೆಲುಗು ನಟ ನಾಗಚೈತನ್ಯ (Naga Chaitanya) ಮತ್ತು ನಟಿ ಶೋಭಿತಾ (Sobhita Dhulipala)  ಡಿಸೆಂಬರ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವೇಳೆ ಮಗನ ಮದುವೆ ಕಂಡು ತಂದೆ ನಾಗಾರ್ಜುನ (Nagarjuna Akkineni) ಭಾವುಕರಾಗಿದ್ದಾರೆ.

ಡಿಸೆಂಬರ್ 4ರಂದು ರಾತ್ರಿ 8:15ಕ್ಕೆ ನಾಗಚೈತನ್ಯ ಹಾಗೂ ಶೋಭಿತಾ ಸಪ್ತಪದಿ ತುಳಿದಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪ್ರತಿಮೆ ಮುಂದೆ ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣ ನಡೆದಿದೆ. ತಂದೆ ನಾಗಾರ್ಜುನ ಮುಂದೆ ನಿಂತು ಮಗನ ಎರಡನೇ ಮದುವೆ ನಡೆಸಿದ್ದಾರೆ.

ಮಗನ ಮದುವೆ ಫೋಟೋ ಎಕ್ಸ್‌ನಲ್ಲಿ ಹಂಚಿಕೊಂಡು ನಾಗಾರ್ಜುನ ಭಾವುಕರಾಗಿದ್ದಾರೆ. ಮಗನ ಮದುವೆ ಭಾವನಾತ್ಮಕ ಕ್ಷಣ. ನನ್ನ ಪ್ರೀತಿಯ ಚೈಗೆ ಅಭಿನಂದನೆಗಳು ಹಾಗೇ ಕುಟುಂಬಕ್ಕೆ ಸ್ವಾಗತ ಶೋಭಿತಾ. ನೀವಿಬ್ಬರು ನಮ್ಮ ಜೀವನದಲ್ಲಿ ತುಂಬಾ ಸಂತೋಷವನ್ನು ತಂದಿದ್ದೀರಿ ಎಂದು ಬರೆದು ಎಕ್ಸ್‌ನಲ್ಲಿ ನಾಗಾರ್ಜುನ ಪೋಸ್ಟ್ ಮಾಡಿದ್ದಾರೆ.

ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣಕ್ಕೆ ಕೇವಲ 400 ಅತಿಥಿಗಳಿಗೆ ಮಾತ್ರ ಮದುವೆ ಆಹ್ವಾನ ನೀಡಲಾಗಿತ್ತು. ಅಲ್ಲು ಅರ್ಜುನ್, ರಾಮ್ ಚರಣ್ ದಂಪತಿ, ಮಹೇಶ್ ಬಾಬು ದಂಪತಿ, ಪ್ರಭಾಸ್, ರಾಜಮೌಳಿ, ಪಿ.ವಿ ಸಿಂಧೂ ಸೇರಿ ಹಲವು ಗಣ್ಯರು ನವದಂಪತಿಗೆ ಶುಭಕೋರಿದರು.

Share This Article