ಟಾಲಿವುಡ್ ನಟ ನಾಗಚೈತನ್ಯ ಸದ್ಯ ಬಾಲಿವುಡ್‌ನ ಮೊದಲ ಚಿತ್ರ `ಲಾಲ್ ಸಿಂಗ್ ಚಡ್ಡಾ’ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಮಂತಾ ಕುರಿತು ಪ್ರಶ್ನೆಗಳನ್ನ ನಾಗಚೈತನ್ಯ ಎದುರಿಸುತ್ತಿದ್ದಾರೆ. ಇದೀಗ ಸಂರ್ದಶನವೊಂದರಲ್ಲಿ ಮಾಜಿ ಪತ್ನಿ ಬಗ್ಗೆ ನಾಗಚೈತನ್ಯ ಮಾತನಾಡಿರುವ ಮಾತು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಕಳೆದ ಕೆಲವು ದಿನಗಳಿಂದ ನಾಗ ಚೈತನ್ಯ ಹಲವು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. `ಲಾಲ್ ಸಿಂಗ್ ಚಡ್ಡಾ’ ಅವರು ಚಿತ್ರದ ಬಗ್ಗೆ ಮಾತ್ರವಲ್ಲ, ಅವರ ವೈಯಕ್ತಿಕ ಜೀವನದ ಬಗ್ಗೆಯೂ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಸಂದರ್ಶನದ ವೇಳೆ ನಾಗಚೈತನ್ಯ ಅವರಿಗೆ ಮಾಧ್ಯಮದವರು ಸಮಂತಾ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೂ ಓದಿ:`777 ಚಾರ್ಲಿ’ ಸಕ್ಸಸ್ ನಂತರ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ
ಸಂದರ್ಶನದಲ್ಲಿ ನಾಗಚೈತನ್ಯ ಅವರಿಗೆ ಮಾಜಿ ಪತ್ನಿ ಬಗ್ಗೆ ಕೇಳಲಾಗಿದೆ. ಸಮಂತಾ ಅವರನ್ನು ನೀವು ಮತ್ತೆ ಭೇಟಿಯಾದ್ರೆ ಏನು ಮಾಡ್ತೀರಾ? ಎಂದು ನಾಗಚೈತನ್ಯಗೆ ಪ್ರಶ್ನಿಸಿದ್ದಾರೆ. ಇದಕ್ಕೆ ನಾಗ ಚೈತನ್ಯ ಸಖತ್ ಉತ್ತರ ನೀಡಿದ್ದಾರೆ. ಸಮಂತಾ ಅವರನ್ನು ಭೇಟಿಯಾದರೆ. ಅವರಿಗೆ ಹಾಯ್ ಹೇಳಿ ಒಂದು ಹಗ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಸಖತ್ ಆಗಿ ಉತ್ತರ ನೀಡಿದ್ದಾರೆ.


