ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಟಾಲಿವುಡ್‍ನ ನಾಗಚೈತನ್ಯಾ-ಸಮಂತಾ ರುತ್‍ಪ್ರಭು!

Public TV
1 Min Read

ಹೈದರಾಬಾದ್: ಟಾಲಿವುಡ್‍ನ ಹಾಟ್ ಕಪಲ್ ನಾಗಚೈತನ್ಯಾ ಮತ್ತು ಸಮಂತಾ ರುತ್‍ಪ್ರಭು ಮದುವೆಗೆ ಜೋರಾದ ಸಿದ್ಧತೆ ನಡೆಯುತ್ತಿದೆ. ಗೋವಾ ಕಡಲ ತೀರದ ಡಬ್ಲ್ಯು ಹೋಟೆಲ್‍ನಲ್ಲಿ ಮದುವೆಯ ಸಿದ್ಧತೆ ನಡೆಯುತ್ತಿದೆ.

ಶುಕ್ರವಾರ ಹಿಂದು ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದ್ದು, ಶನಿವಾರ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಕಾರ್ಯ ನಡೆಯಲಿದೆ. ವಿಶೇಷ ಅಂದರೆ ಎರಡೂ ಕುಟುಂಬದ ಹತ್ತಿರದ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಎರಡೂ ಕುಟುಂಬಗಳ 200 ಜನರು ಮಾತ್ರ ಈ ಮದುವೆಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದಹಾಗೆ ಆಹ್ವಾನಿತರಿಗೆ ಈಗಾಗಲ್ಲೇ ಹೈದರಾಬಾದ್‍ನಿಂದ ವಿಶೇಷ ವಿಮಾನ ಬುಕ್ ಮಾಡಲಾಗಿದ್ದು ಇಂದು ಸಂಜೆಯೊಳಗೆ ಆಹ್ವಾನಿತರು ಗೋವಾವನ್ನು ತಲುಪಲಿದ್ದಾರೆ. ವಿಶೇಷ ಅಂದರೆ ಈ ಮದುವೆ ಉತ್ಸವಕ್ಕೆ ಹೆಚ್ಚಿನ ಸಿನಿಮಾ ಗಣ್ಯರು ಉಪಸ್ಥಿತರಿರುವುದಿಲ್ಲ.

ಗೋವಾದಲ್ಲಿ ಮದುವೆ ಶಾಸ್ತ್ರಗಳನ್ನು ಮುಗಿಸಿ ಬಂದ ನಂತರ ಹೈದರಾಬಾದ್‍ನಲ್ಲಿ ಈ ಜೋಡಿಯ ಆರತಕ್ಷತೆ ಸಮಾರಂಭವನ್ನು ಮಾಡೋಕೆ ನಿರ್ಧರಿಸಿರುವುದಾಗಿ ಅಕ್ಕಿನೇನಿ ನಾಗಾರ್ಜುನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗೋವಾದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಟಾಲಿವುಡ್‍ನ ಕೆಲವೇ ಕೆಲವು ಖ್ಯಾತ ತಾರೆಯರನ್ನು ಮಾತ್ರ ಆಹ್ವಾನಿಸಿರುವ ಸುದ್ದಿ ಬಂದಿದೆ. ಈಗಾಗಲೇ ವಧು ವರರು ಗೋವಾ ತಲುಪಿದ್ದು ಅಲ್ಲಿ ಮದುವೆ ಮುನ್ನಾ ದಿನದ ಶಾಸ್ತ್ರಗಳು ನಡೆಯುತ್ತಿದೆ.

ಮಧು ಮಗಳಾಗಿರುವ ಸಮಂತ ಅವರು ನಾಗಚೈತನ್ಯ ಅಜ್ಜಿ ನೀಡಿರುವ ಸೀರೆಯನ್ನು ಧರಿಸಲಿದ್ದಾರೆ. ಅಂದಹಾಗೆ ಇದೊಂದು ಅದ್ಧೂರಿ ಮದುವೆಯಾಗಿರದೆ ಸಿಂಪಲ್ ಮದುವೆಯಾಗಿರುತ್ತೆ ಅನ್ನೋದಾಗಿ ನಾಗಾರ್ಜುನ ಕುಟುಂಬ ತಿಳಿಸಿದೆ. ಗೋವಾದಲ್ಲಿ ನಡೆಯುವ ಮದುವೆಯ ವೆಚ್ಚ ಸುಮಾರು 10 ಕೋಟಿ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *