ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

Public TV
2 Min Read

ಕ್ಷಿಣದ ಯಾವುದೇ ಸಿನಿಮಾದಲ್ಲಿ ನಾಯಿ ಕಾಣಿಸಿಕೊಳ್ಳಲಿ ಅಲ್ಲಿ ಸಿಂಬು ಇರಲೇಬೇಕಿತ್ತು. ಅಷ್ಟರ ಮಟ್ಟಿಗೆ ಈ ಸಿಂಬು ಫೇಮಸ್ ಆಗಿದ್ದ. ಅದರಲ್ಲೂ ಶಿವರಾಜ್ ಕೆ.ಆರ್ ಪೇಟೆ ನಟನೆಯ ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಹೈಲೈಟ್ ಆಗಿದ್ದು ಇದೇ ಸಿಂಬು ಎಂಬ ನಾಯಿ. ಈ ಸಿನಿಮಾದಿಂದ ಸಿಂಬುಗೆ ಮತ್ತಷ್ಟು ಬೇಡಿಕೆ ಬಂತು. ಇದೀಗ  ಆ ಸಿಂಬು ಇಹಲೋಕ ತ್ಯಜಿಸಿರುವ ಸುದ್ದಿ ಬಂದಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

ತಮ್ಮೊಟ್ಟಿಗೆ ನಟಿಸಿದ್ದ ಸಿಂಬುನನ್ನು ಕಳೆದುಕೊಂಡಿರುವ ವಿಷಯವನ್ನು ನಟ ಶಿವರಾಜ್ ಕೆ.ಆರ್ ಪೇಟೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ನಮ್ಮೊಂದಿಗೆ ಸಿಂಬು ನಟಿಸಿರಲಿಲ್ಲ. ಅದರೊಂದಿಗೆ ನಾವು ನಟಿಸಿದ್ದೆವು. ಅದರೊಂದಿಗಿನ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಸಿಂಬು ಇದೀಗ ಇಲ್ಲ ಎನ್ನುವ ಸುದ್ದಿ ಕೇಳಿ ತುಂಬಾ ನೋವಾಯಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

ನಾನು ಮತ್ತು ಗುಂಡ ಸಿನಿಮಾದಲ್ಲಿ ಸಿಂಬು ನಟಿಸುವಾಗ ಅದಕ್ಕೆ ಎಂಟು ವರ್ಷ. ಸಿಂಬು ಲ್ಯಾಬ್ರಡರ್ ತಳಿಯದ್ದಾಗಿದ್ದು, ಅದಕ್ಕೆ ಸಿನಿಮಾದಲ್ಲಿ ನಟಿಸಲು ಸ್ವಾಮಿ ಅನ್ನುವವರು ತರಬೇತಿ ಕೂಡ ಕೊಟ್ಟಿದ್ದಾರೆ. ಹೀಗಾಗಿಯೇ ಹಲವು ಸಿನಿಮಾಗಳಲ್ಲಿ ಈ ಸಿಂಬು ಕಾಣಿಸಿಕೊಂಡಿದ್ದೆ. ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ನಾನು ಮತ್ತು ಗುಂಡು ಸಿನಿಮಾದಲ್ಲಿ ಈ ನಾಯಿ ಡಬ್ಬಿಂಗ್ ಕೂಡ ಮಾಡಿದೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

ಸಿಂಬು ಸಿನಿಮಾ ರಂಗದಲ್ಲಿ ಕಾಲಿಟ್ಟಿದ್ದು ಬೆಂಗಳೂರು ಡೇಸ್ ಎಂಬ ಮಲಯಾಳಂ ಸಿನಿಮಾದ ಮೂಲಕ. ಆನಂತರ ಅದು ಕನ್ನಡದಲ್ಲಿ ಗುಳ್ಟು, ಶಿವಾಜಿ ಸುರತ್ಕಲ್, ಐರಾವತ ಹಾಗೂ ಕೆಲವು ಕಿರುಚಿತ್ರಗಳು ಮತ್ತು ಜಾಹೀರಾತು ಚಿತ್ರಗಳಲ್ಲೂ ಸಿಂಬು ನಟಿಸಿದೆ. ಕರ್ನಾಟಕದ ಪತ್ರಕರ್ತರೆ ಕೊಡಮಾಡುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಕಳೆದ ವರ್ಷದ ಪ್ರಪಂಚದಲ್ಲಿ ಮೊದಲ ಬಾರಿಗೆ ನಾನ್ ಯುಮನ್ ಕ್ಯಾಟಗರಿಯಲ್ಲಿ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ನಾನು ಮತ್ತು ಗುಂಡ ಚಿತ್ರಕ್ಕಾಗಿ ಸಿಂಬುಗೆ ಕೊಡಲಾಗಿತ್ತು. ಇಂಥದ್ದೊಂದು ಪ್ರಶಸ್ತಿ ಪಡೆದ ಹೆಗ್ಗಳಿಕೆ ಈ ನಾಯಿದ್ದಾಗಿತ್ತು.

ನಾನು ಮತ್ತು ಗುಂಡ ಸಿನಿಮಾದಲ್ಲಿ ಸಿಂಬು ಪ್ರಮುಖ ಪಾತ್ರವನ್ನೇ ವಹಿಸಿತ್ತು. ನಾಯಿ ಮತ್ತು ಮನುಷ್ಯ ಸಂಬಂಧದ ಕುರಿತಾದ ಈ ಸಿನಿಮಾದಲ್ಲಿ ನಾಯಿಗೂ ಹೀರೋನಷ್ಟೇ ಪ್ರಾಮುಖ್ಯತೆ ನೀಡಲಾಗಿತ್ತು. ಹೀಗಾಗಿಯೇ ನಿರ್ದೇಶಕ ಶ್ರೀನಿವಾಸ್, ಇದೇ ನಾಯಿಯಿಂದ ಡಬ್ಬಿಂಗ್ ಮಾಡುವ ಮೂಲಕ ಹೊಸ ದಾಖಲೆಯನ್ನೇ ಬರೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *