ಒಟಿಟಿಗೆ ಬರಲಿದೆ ಆಶಿಕಾ ರಂಗನಾಥ್ ನಟನೆಯ ‘ನಾ ಸಾಮಿ ರಂಗ’ ಸಿನಿಮಾ

By
1 Min Read

ನ್ನಡದ ಪಟಾಕಿ ಪೋರಿ ಆಶಿಕಾ ರಂಗನಾಥ್ (Ashika Ranganath) ಟಾಲಿವುಡ್‌ನಲ್ಲಿಯೂ ಮಿಂಚಿ ಗೆದ್ದಿದ್ದಾರೆ. ನಾಗಾರ್ಜುನ ಅಕ್ಕಿನೇನಿಗೆ ಜೋಡಿಯಾಗಿ ‘ನಾ ಸಾಮಿ ರಂಗ’ (Naa Saami Ranga) ಸಿನಿಮಾದಲ್ಲಿ ಆಶಿಕಾ ನಟಿಸಿದ್ದರು. ಚಿತ್ರಮಂದಿರದಲ್ಲಿ ಗೆದ್ದಿರೋ ಈ ಸಿನಿಮಾ ಈಗ ಒಟಿಟಿಗೆ ಲಗ್ಗೆ ಇಡುತ್ತಿದೆ.

ಜ.14ರಂದು ‘ನಾ ಸಾಮಿ ರಂಗ’ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ನಾಗಾರ್ಜುನ ಮತ್ತು ಆಶಿಕಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಸಿನಿಮಾ ನೋಡಿ ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದರು. ಈಗ ಇದೇ ಫೆ.17ರಂದು ಒಟಿಟಿಯಲ್ಲಿ ಸಿನಿಮಾ ಪ್ರಸಾರ ಆಗಲಿದೆ. ಇದನ್ನೂ ಓದಿ:ಬಾಲಿವುಡ್‌ನತ್ತ ‘ಆರ್‌ಆರ್‌ಆರ್’ ಹೀರೋ ರಾಮ್ ಚರಣ್

ಡ್ಯಾನ್ಸ್ ಮಾಸ್ಟರ್ ವಿಜಯ್ ಬಿನ್ನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಗ್ರಾಮೀಣ ಸೊಗಡಿನ ಕಥೆಯನ್ನು ಈ ಚಿತ್ರದ ಮೂಲಕ ತೋರಿಸಿದ್ದರು. ನಾಗಾರ್ಜುನ ಅವರನ್ನು ಡಿಫರೆಂಟ್ ಆಗಿ ಅಭಿಮಾನಿಗಳಿಗೆ ತೋರಿಸುವ ಮೂಲಕ ಸದ್ದು ಮಾಡಿದ್ದರು. ಆಶಿಕಾ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದರು.

ಬೆಂಗಳೂರಿನ ಬೆಡಗಿ ಆಶಿಕಾ ಈಗ ತೆಲುಗಿನತ್ತ ಮುಖ ಮಾಡಿದ್ದಾರೆ. ರಶ್ಮಿಕಾ, ಶ್ರೀಲೀಲಾರಂತೆಯೇ ಆಶಿಕಾ ಕೂಡ ಟಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿದ್ದಾರೆ. ಸ್ಟಾರ್ ನಟರ ಜೊತೆ ಹೀರೋಯಿನ್ ಆಗಿ ಆಶಿಕಾ ಗುರುತಿಸಿಕೊಳ್ತಿದ್ದಾರೆ.

ಸದ್ಯ ಆಶಿಕಾ ರಂಗನಾಥ್ ಕೈಯಲ್ಲಿ ‘ಅವತಾರ ಪುರುಷ 2’ ಸಿನಿಮಾ ಸೇರಿದಂತೆ ಹಲವು ತೆಲುಗು ಪ್ರಾಜೆಕ್ಟ್‌ಗಳಿವೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ನಟಿ ಕಾಣಿಸಿಕೊಳ್ತಾರೆ.

Share This Article