ದಿನೇಶ್ ಗುಂಡೂರಾವ್‍ಗೆ ಚಪ್ಪಲಿ ಕೊರಿಯರ್ ಮಾಡಿದ ಮೈಸೂರು ಯುವಕ

Public TV
2 Min Read

ಮೈಸೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಅವರಿಗೆ ಮೈಸೂರಿನ ಯುವಕನೊಬ್ಬ ಚಪ್ಪಲಿ ಗಿಫ್ಟ್ ಕೊಟ್ಟಿದ್ದಾನೆ.

ನಮ್ಮ ಸಮುದಾಯದವರಿಗೆ ಗುಂಡುರಾವ್ ಅವರು ಅವಮಾನ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೊರಿಯರ್ ಮೂಲಕ ಚಪ್ಪಲಿಯನ್ನು ಕಳುಹಿಸಿರುವೆ ಮತ್ತು ಅವರು ಬಹಿರಂಗಬಾಗಿ ಕ್ಷಮೆ ಕೇಳಬೇಕು ಎಂದು ಗಿಫ್ಟ್ ನೀಡಿದ ಯುವಕ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಮುಲ್ಲಾ ಅಥವಾ ಮೌಲ್ವಿಗೆ ಹೊಡೀಬೇಕು ಅಂತ ಹೇಳಿದ್ರೆ, ನಿಮ್ಮ ಹೆಂಡ್ತಿಯೇ ನಿಮ್ಗೆ ಹೊಡೀತಿದ್ರು: ಗುಂಡೂರಾವ್ ವಿರುದ್ಧ ಸಿಂಹ ಕೆಂಡಾಮಂಡಲ

ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್‍ನ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ದಿನೇಶ್ ಗುಂಡುರಾವ್ ಅವರು ಮಾತನಾಡಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಅರ್ಹರಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕು. ಅವರು ಕರ್ನಾಟಕಕ್ಕೆ ಬಂದು ಭಾಷಣ ಮಾಡುತ್ತಾರೆ. ಈ ಬಾರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಗುಂಡೂರಾವ್‍ಗೆ ಗಂಡಸ್ತನವಿದ್ರೆ, ತಾಯಿ ಎದೆ ಹಾಲು ಕುಡಿದಿದ್ರೆ ಮೊದ್ಲು ಕಲಬುರಗಿಗೆ ಬರಲಿ- ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸವಾಲ್

ಗುಂಡೂರಾವ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ ಅವರು, ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಂತಹ ಮೇಣದ ಬತ್ತಿ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರು ತುಚ್ಚಾ ಮಾತುಗಳನ್ನು ಆಡಿದ್ದಾರೆ. ಯೋಗಿ ಆದಿತ್ಯನಾಥ್ ಅವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಅಂದಿದ್ದೀರಲ್ಲಾ ಗುಂಡೂರಾವ್ ಅವರೇ. ಯೋಗಿ ಬದಲು ಒಬ್ಬ ಮುಲ್ಲಾ ಅಥವಾ ಮೌಲ್ವಿ ಬಗ್ಗೆನೋ ಇದೇ ಮಾತನ್ನು ಆಡಿದ್ರೆ, ನಿಮ್ಮ ಹೆಂಡತಿ ಬೇಗಂ ತಬ್ಬು ಅವರೇ ಆ ಕೆಲಸವನ್ನು ನಿಮಗೆ ಮಾಡಿರುತ್ತಿದ್ದರು. ಮಾತನಾಡಬೇಕಾದರೆ ಸ್ವಲ್ಪ ಎಚ್ಚರಿಕೆ ಇರಬೇಕು. ನಾಲಿಗೆಯ ಮೇಲೆ ನಿಗಾ ಇರಬೇಕು. ಇಲ್ಲ ಅಂದರೆ ನಿಮಗೆ ತಕ್ಕ ಉತ್ತರ ಕೊಡಬೇಕಾಗುತ್ತದೆ’ ಎಂದು ವಿಡಿಯೋ ಮಾಡಿ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ಹಾಕುವ ಮೂಲಕ ಗುಂಡೂರಾವ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *