ಮೈಸೂರು ವೈಟ್‌ ಚಿಕನ್‌ ಪಲಾವ್‌ – ಮನೆಯಲ್ಲೇ ಮಾಡಿ ಟೇಸ್ಟ್‌ ನೋಡಿ…

2 Min Read

ಮೈಸೂರು (Mysuru) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಮೈಸೂರಲ್ಲಿ ಹಿತವಾದ ಊಟ ಮತ್ತು ಅನೇಕ ರೀತಿಯ ಆಹಾರ ಪದಾರ್ಥಗಳನ್ನ ಸವಿದು ಆನಂದಿಸಬಹುದು. ಮೈಸೂರಿಗೆ ಹೋದ್ರಂತು ಮೈಸೂರು ಪಾಕ್, ಹೋಟೆಲ್ ಹನುಮಂತು, ಆರ್‌ಆರ್‌ಆರ್ ಹೋಟೆಲ್ ಮತ್ತು ಎಂಪೈರ್‌ನಂತಹ ಸ್ಥಳಗಳಲ್ಲಿ ನೀವು ರುಚಿಕರವಾದ ತಿಂಡಿಗಳನ್ನ ಸವಿದೇ ವಾಪಸ್‌ ಬರೋದೇ ಇಲ್ಲ. ಆದ್ರೆ ಮೈಸೂರು ಶೈಲಿಯ ವೈಟ್‌ ಚಿಕನ್‌ ಪಲಾವ್‌ (Mysuru White Chicken Pulao) ಎಂದಾದ್ರು ಮಾಡಿದ್ದೀರಾ? ಇದಕ್ಕಾಗಿ ನೀವು ಹೋಟೆಲ್‌ಗಳಿಗೆ (Hotel) ಹೋಗ್ಬೇಕು ಅಂತಿಲ್ಲ, ಮನೆಯಲ್ಲೂ ಮಾಡಿ ಸವಿಯಬಹುದು. ಅದಕ್ಕೆ ಸಿಂಪಲ್‌ ಟಿಪ್ಸ್‌ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು
ಚಿಕನ್‌ ಪಲಾವ್‌ – 1 ಕೆಜಿ
ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ
ಕೊತ್ತಂಬರಿ ಸೊಪ್ಪು – ಅರ್ಧ ಕಟ್ಟು
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಅಕ್ಕಿ – 2 ಕಪ್‌
ನಿಂಬೆ ರಸ – 1 ಚಮಚ
ಲವಂಗ – 3
ಹಾಲು – 1.5 ಲೀಟರ್‌
ಹಸಿ ಮೆಣಸಿಕ ಕಾಯಿ – 5
ಶುಂಠಿ ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ
ದಾಲ್ಚಿನ್ನಿ – 1 ಇಂಚು
ನೀರು – 10 ಕಪ್‌
ಮೆಣಸಿನ ಪುಡಿ – 1 ಚಮಚ
ಕಪ್ಪು ಏಲಕ್ಕಿ – 3
ಬಟಾಣಿ – 200 ಗ್ರಾಂ

ಮಾಡುವ ವಿಧಾನ ಹೇಗೆ?
* ಮೊದಲು ದೊಡ್ಡ ಪಾತ್ರೆಯಲ್ಲಿ ಅಕ್ಕಿ, ನೀರು ಸೇರಿಸಿ ಅನ್ನ ಮಾಡಬೇಕು.
* ನಂತರ ಪ್ರತ್ಯೇಕವಾಗಿ ಚಿಕನ್‌ ಗ್ರೇವಿ ತಯಾರಿಸಿಕೊಳ್ಳಬೇಕು.
* ಮತ್ತೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಬೇಕು. ಅದಕ್ಕೆ ದಾಲ್ಚಿನ್ನಿ ಕಡ್ಡಿ, ಲವಂಗ, ಕಪ್ಪು ಏಲಕ್ಕಿ ಹಾಗಿ 30 ಸೆಕೆಂಡುಗಳಷ್ಟು ಸಮಯ ಉರಿಯಬೇಕು.
* ಬಳಿಕ ಚಿಕನ್‌ ಪೀಸ್‌ಗಳನ್ನ ಸೇರಿಸಿ, ಬಿಸಿ ಹೆಚ್ಚಿಸಿ ಸುಮಾರು 7 ರಿಂದ 10 ನಿಮಿಷಗಳ ಕಾಲ ಬೇಯಿಸಬೇಕು.
* ನಂತರ ಹಸಿ ಮೆಣಸಿನ ಕಾಯಿ, ಕೊತ್ತಂಬರಿ, ಮೆಣಸಿನ ಪುಡಿ, ಉಪ್ಪನ್ನು ಸೇರಿಸಿ ಮಿಶ್ರಣ ಮಾಡಬೇಕು.
* ಆ ನಂತರ ಚಿಕನ್‌ ಪೀಸ್‌ಗಳು ಬೇಯುವವರೆಗೆ ಹಾಲಿನಲ್ಲೇ ಬಿಟ್ಟು ಮುಚ್ಚಳದಿಂದ ಮುಚ್ಚಬೇಕು.

ಧಮ್‌ ಕಟ್ಟುವುದು:
* ಕೋಳಿ ಮಾಂಸ ಬೇಯಿಸಿದ ಬಳಿಕ ಬಟಾಣಿ, ನಿಂಬೆ ರಸವನ್ನ ಸರಿಯಾಗಿ ಬೆರೆಸಬೇಕು.
* ಗ್ರೇವಿ ರುಚಿ ಪರಿಶೀಲಿಸಿ, ಅಗತ್ಯವಿದ್ದರೆ ಉಪ್ಪು ಅಥವಾ ಮೆಣಸನ್ನ ಸೇರಿಸಬೇಕು.
* ಜೊತೆಗೆ 100 ಗ್ರಾಂ ಬೆಣ್ಣೆಯನ್ನ ಹದವಾಗಿ ಅನ್ನದ ಮೇಲ್ಭಾಗದಲ್ಲಿ ಹರಡಬೇಕು.
* ಆ ಬಳಿಕ ಪಾತ್ರೆಯ ಮುಚ್ಚಳವನ್ನ ಬಿಗಿಯಾಗಿ ಮುಚ್ಚಬೇಕು. ಅಗತ್ಯವಿದ್ದರೆ, ಪಾತ್ರೆಯ ಅಂಚುಗಳನ್ನ ಸಹ ಮುಚ್ಚಿಡಬೇಕು.
* 15 ರಿಂದ 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಬೇಕು. ನಂತರ ಬಿಸಿ ಹದಗೊಳ್ಳಲು ಪಾತ್ರೆಯನ್ನ ಪ್ರತ್ಯೇಕವಿಟ್ಟು ಮುಚ್ಚಳ ತೆಗೆದು ಚಿಕನ್‌ ಗ್ರೇವಿಯೊಂದಿಗೆ ಅನ್ನವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಹದವಾಗಿ ತಯಾರಾಗಿರುವ ರುಚಿಯಾದ ಚಿಕನ್‌ ಪಲಾವ್‌ ಸವಿಯಲು ಸಿದ್ಧ.

Share This Article