ಬಿಎಸ್‍ವೈಗೆ ಮಳೆ ನಿಭಾಯಿಸೋ ಶಕ್ತಿ ಇದೆ: ಶೋಭಾ ಕರಂದ್ಲಾಜೆ

Public TV
1 Min Read

ಮೈಸೂರು: ಸಿಎಂ ಯಡಿಯೂರಪ್ಪಗೆ ಮಳೆಯನ್ನ ನಿಭಾಯಿಸೋ ಶಕ್ತಿ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಮೈಸೂರಿನ ಸುತ್ತೂರಿನಲ್ಲಿ ಸುತ್ತೂರು ಜಾತ್ರೆ ಸಮಾರೋಪದಲ್ಲಿ ಅವರು ಮಾತನಾಡಿದರು. 2008ರಲ್ಲಿ ಯಡಿಯೂರಪ್ಪನವರು ಸಿಎಂ ಆಗಿದ್ರು. ಬರದ ಆ ವೇಳೆ ಮಳೆ ಧಾರಕಾರವಾಗಿ ಬಂದಿತ್ತು. ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮಳೆ ಬಂದು ಬರ ದೂರವಾಯ್ತು. ಆದರೆ ನೆರೆಯಿಂದ ಜನರ ಮನೆಗಳಿಗೆ ಹಾನಿ ಉಂಟಾಯಿತು ಎಂದು ಹೇಳಿದರು.

ಪ್ರವಾಹ ಪರಿಹಾರವಾಗಿ ಎನ್.ಡಿ.ಆರ್.ಎಫ್ ತಂಡ 94 ಸಾವಿರ ಕೊಡುತ್ತೆ. ಅದಕ್ಕೆ 4 ಲಕ್ಷದ 6 ಸಾವಿರ ಸೇರಿಸಿ ಮನೆ ಕಟ್ಟಲು ಹಣ ನೀಡುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕೊಟ್ಟ ಮೊದಲ ಮುಖ್ಯಮಂತ್ರಿ ಅಂದ್ರೆ ಯಡಿಯೂರಪ್ಪನವರು ಎಂದು ಸಿಎಂ ಯಡಿಯೂರಪ್ಪರನ್ನು ಶೋಭಾ ಕರಂದ್ಲಾಜೆ ಹಾಡಿ ಹೊಗಳಿದರು.

Share This Article
Leave a Comment

Leave a Reply

Your email address will not be published. Required fields are marked *