ಮೈಸೂರು: ಮಿನಿ ಟೆಂಪೋ ಟಿವಿಎಸ್ ಮೊಪೆಡ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್‍ನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದ ಬಳಿ ನಡೆದಿದೆ.
ಮಂಜುಳಾ (27) ಮತ್ತು ಮಹೇಶ್ (13) ಮೃತ ದುರ್ದೈವಿಗಳು. ಮಿನಿ ಟೆಂಪೋ ನೋಟ್ ಬುಕ್ ತುಂಬಿಕೊಂಡು ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುತ್ತಿತ್ತು. ಆದರೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದ ಬಳಿ ಟೆಂಪೂ ಚಾಲಕ ನಿಯಂತ್ರಣ ತಪ್ಪಿ ಟಿವಿಎಸ್‍ನಲ್ಲಿ ಬರುತ್ತಿದ್ದ ಮೊಪೆಡ್‍ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಮೊಪೆಡ್‍ನಲ್ಲಿ ಮಂಜುಳಾ ಮತ್ತು ಮಹೇಶ್ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಡಿಕ್ಕಿ ರಭಸಕ್ಕೆ ಟೆಂಪೋ ಪಲ್ಟಿಯಾಗಿದ್ದು ಅದರಲ್ಲಿದ್ದ ನೋಟ್‍ಬುಕ್‍ಗಳಲ್ಲೆವೂ ಚೆಲ್ಲಾಪಿಲ್ಲಿಯಾಗಿವೆ.
ಈ ಕುರಿತು ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.