– ಅರಮನೆಯ ಭದ್ರತಾ ವೈಫಲ್ಯ ಬಟಬಯಲು
ಮೈಸೂರು: ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ನಡೆದ ಸಿಲಿಂಡರ್ ಸ್ಪೋಟ ಪ್ರಕರಣದಿಂದ (Cylinder blast near Mysuru Palace) ಅರಮನೆಯ ಭದ್ರತಾ ವೈಫಲ್ಯ ಬಟಬಯಲಾಗಿದೆ.
ಸ್ಪೋಟ ಸಂಭವಿಸಿದ 20 ಅಡಿ ದೂರದಲ್ಲೇ ಅಧುನಿಕ ತಂತ್ರಜ್ಞಾನದ ಸಿಸಿಟಿವಿ (CCTV) ಹಾಕಲಾಗಿದೆ. ಆದರೆ ಈ ಸಿಸಿಟಿವಿಯಲ್ಲಿ ಸ್ಫೋಟದ ದೃಶ್ಯವೇ ಸೆರೆಯಾಗಿಲ್ಲ. ಇದನ್ನೂ ಓದಿ: 15 ದಿನಗಳಿಂದ ಲಾಡ್ಜ್‌ನಲ್ಲಿ ವಾಸ – ಮೈಸೂರು ಸ್ಫೋಟಕ್ಕೆ ಎನ್‌ಐಎ ಎಂಟ್ರಿ
ಮೈಸೂರು ಅರಮನೆಗೆ ವರ್ಷದಿಂದ ವರ್ಷಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅರಮನೆಯ ಆವರಣ ಮತ್ತು ಸುತ್ತಮುತ್ತಲಿನ ರಸ್ತೆಯಲ್ಲಿ ಸಿಸಿಟಿವಿ ಹಾಕಲಾಗಿದೆ. ಅದರಲ್ಲೂ ಸ್ಫೋಟ ಸಂಭವಿಸಿದ ಜಾಗದ ಸುಮಾರು 20 ಅಡಿ ದೂರದಲ್ಲಿ 360 ಡಿಗ್ರಿ ಸಿಸಿಟಿವಿಯನ್ನು ಹಾಕಲಾಗಿದೆ. ಆದರೆ ಈ ಸಿಸಿಟಿವಿಯಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿಲ್ಲ. ಇದನ್ನೂ ಓದಿ: ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ – ಮತ್ತೋರ್ವ ಗಾಯಾಳು ಲಕ್ಷ್ಮಿ ಸಾವು

