ಕುಟುಂಬಸ್ಥರ ಚಿಕಿತ್ಸೆಗಾಗಿ ಭಿಕ್ಷೆ ಬೇಡಿದ ಜನ – ಮೈಸೂರಲ್ಲೊಂದು ಮನಕಲಕುವ ಘಟನೆ

Public TV
2 Min Read

– ನೊಂದ ಕುಟುಂಬದ ಕಣ್ಣೀರಿಗೆ ಕರಗಿದ ಆಸ್ಪತ್ರೆ ಆಡಳಿತ ಮಂಡಳಿ

ಮೈಸೂರು: ನಂಜನಗೂಡು (Nanjangud) ತಾಲ್ಲೂಕಿನ ಹೆಡತಲೆ ಗ್ರಾಮದಲ್ಲೊಂದು ಮನಕಲಕುವ ಘಟನೆ ನಡೆದಿದೆ. ಆಸ್ಪತ್ರೆ ಹಣಕ್ಕಾಗಿ ಗ್ರಾಮದ ಯುವಕರು, ಸಂಬಂಧಿಗಳ ಜೊತೆ ಸೇರಿ ಕುಟುಂಬವೊಂದು ಭಿಕ್ಷೆ ಬೇಡಿದೆ.

ಹೌದು. ಇದೇ ತಿಂಗಳ 2ನೇ ತಾರೀಖು ಬದನವಾಳು ಬಳಿ 2 ಬೈಕ್ ನಡುವೆ ಅಪಘಾತ ಆಗಿದ್ದು, 6 ಜನ ಗಾಯಗೊಂಡಿದ್ದರು. ಅದರಲ್ಲಿ ಒಂದೇ ಕುಟುಂಬದ ತಂದೆ ಮಹೇಶ್ (38) ತಾಯಿ ರಾಣಿ (32) ಹಾಗೂ ಮಗಳು ಆದ್ಯ (5) ಗಾಯಗೊಂಡಿದ್ರು. ಇದನ್ನೂ ಓದಿ: ಚಾಮುಂಡಿ ಚಲೋ ಪಾದಯಾತ್ರೆಗೆ ಪೊಲೀಸರ ತಡೆ – ಬಿಜೆಪಿ, ಹಿಂದೂ ಕಾರ್ಯಕರ್ತರು ವಶಕ್ಕೆ

ತಾಯಿ, ಮಗು ಒಂದೆಡೆ, ತಂದೆ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸದ್ಯ ಮಗು ಆದ್ಯಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 3 ದಿನದ ಚಿಕಿತ್ಸೆಗೆ 1,80,000 ಹಣ ಕಟ್ಟಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಮಗು ನೋಡಬೇಕು, ವೆಂಟಿಲೇಟರ್‌ನಿಂದ ಹೊರ ತೆಗೆಯಬೇಕು ಅಂದ್ರೆ ಹಣ ಕಟ್ಟಿ ಅಂತಿದ್ದಾರೆ ಅಂತ ಸಂಬಂಧಿಕರು ಆರೋಪಿಸಿದ್ದಾರೆ. ಕೂಲಿ ಮಾಡುವ ಕುಟುಂಬಕ್ಕೆ ಅಷ್ಟು ಹಣ ನೀಡಲು ಆಗದ ಕಾರಣ ಬಡ ಕುಟುಂಬದ ನೆರವಿಗೆ ಗ್ರಾಮದ ಯುವಕರು, ಸಂಬಂಧಿಗಳು ಭಿಕ್ಷೆ ಬೇಡಿದ್ದಾರೆ. ಇದನ್ನೂ ಓದಿ: ಸಚಿವ ಹೆಚ್‌.ಸಿ ಮಹದೇವಪ್ಪ ಹೆಸರಿನಲ್ಲಿ ಬರೋಬ್ಬರಿ 27 ಲಕ್ಷ ರೂ. ವಂಚಿಸಿದ ಮಹಿಳೆ

ದೊಡ್ಡಮ್ಮ ಮಂಗಳ ಅನ್ನೋವ್ರು ಭಿಕ್ಷೆ ಬೇಡೋ ವಿಡಿಯೋ ವೈರಲ್ ಆಗಿದೆ. ಆದರೆ, ಖಾಸಗಿ ಆಸ್ಪತ್ರೆ (ಬೃಂದಾವನ) ಆಡಳಿತ ಮಂಡಳಿಯ ಖಂಡೇಶ್ ಸ್ಪಷ್ಟನೆ ನೀಡಿದ್ದು, ಆಸ್ಪತ್ರೆ ಬಂದಾಗ ಇಲ್ಲಿನ ಚಿಕಿತ್ಸಾ ವೆಚ್ಚದ ಬಗ್ಗೆ ತಿಳಿಸಲಾಗಿತ್ತು. ಅವರು ಅದಕ್ಕೆ ಒಪ್ಪಿದ್ದರು. ಆ ಕುಟುಂಬದ ಆರ್ಥಿಕ ಪರಿಸ್ಥಿತಿ ನಮಗೆ ಗೊತ್ತಿರಲಿಲ್ಲ. ಭಿಕ್ಷೆ ಬೇಡಿ ಹಣ ತಂದಿದ್ದಾರೆ ಎಂಬುದು ನಮಗೆ ವಿಡಿಯೋ ಮೂಲಕ ತಿಳಿಯಿತು. ಹೀಗಾಗಿ ಈ ವಿಡಿಯೋ ನೋಡಿ ನಾವು ರಿಯಾಯಿತಿ ಕೊಡಲು ತೀರ್ಮಾನ ಮಾಡಿದ್ದೇವೆ. ಮಗು ಐಸಿಯುನಲ್ಲಿದ್ದರೂ ಡಿಸ್ಚಾರ್ಜ್ ಮಾಡಿ ಎನ್ನುತ್ತಿದ್ದಾರೆ ಅಂದಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

Share This Article