ಗ್ಯಾಂಗ್‍ರೇಪ್ ಪ್ರಕರಣ ಸಂಬಂಧ ಕಾಲಹರಣ ಮಾಡಿಲ್ಲ – ಗೃಹ ಸಚಿವ ಸ್ಪಷ್ಟನೆ

Public TV
2 Min Read

ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಜೊತೆ ನಿನ್ನೆಯಿಂದಲೂ ನಿರಂತರ ಸಂಪರ್ಕದಲ್ಲಿದ್ದು, ಕಾಲಹರಣ ಮಾಡಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಗೃಹಸಚಿವರು ಕಾಲಹರಣ ಮಾಡುತ್ತಿದ್ದಾರೆ ಎಂಬ ಆರೋಪ ಸಂಬಂಧ ಪ್ರತಿಕ್ರಿಯಿಸಿ, ನಾನು ಕೆಪಿಎನಲ್ಲಿ ಕಾಲಹರಣ ಮಾಡುತ್ತಿಲ್ಲ. ನಾನು ಸಭೆಯನ್ನು ಮಾಡುತ್ತಿದ್ದೇನೆ. ನಿನ್ನೆ ಬಂದ ತಕ್ಷಣ ಪೊಲೀಸ್ ಅಧಿಕಾರಿಗಳ ಜೊತೆ ಒಂದಷ್ಟು ಮಾಹಿತಿಗಳನ್ನು ತೆಗೆದುಕೊಂಡಿದ್ದೇನೆ. ಬೆಳಗ್ಗೆಯೂ ಸಹ ಪ್ರಕರಣ ಸಂಬಂಧ ಮಾತನಾಡಿದ್ದೇನೆ. ಪೊಲೀಸರ ಜೊತೆ ಇನ್ನೂ ಎರಡು ಸುತ್ತಿನ ಮಾತುಕತೆ ಆಗಬೇಕು. ಆ ನಂತರ ನಾನು ಈ ಪ್ರಕರಣ ವಿವಿರ ನೀಡುತ್ತೇನೆ. ಮೈಸೂರಿನಲ್ಲಿ ಇಂದು ಪೊಲೀಸರ ಜೊತೆ ಎರಡು ಸಭೆಗಳನ್ನು ಮಾಡುತ್ತೇನೆ ಎಂದರು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಸಂತ್ರಸ್ತೆ ತನಿಖೆಗೆ ಸ್ಪಂದಿಸುತ್ತಿಲ್ಲ: ಎಸ್‍ಟಿಎಸ್ ಆರೋಪ

ಪೊಲೀಸ್ ಅವರಿಗೆ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಒಳ್ಳೆಯ ತರಬೇತಿ ನೀಡುತ್ತಿದ್ದಾರೆ. ಒಬ್ಬ ಸಬ್ ಇನ್ಸ್‍ಪೆಕ್ಟರ್‍ಗೆ ಹೇಗೆ ತರಬೇತಿ ನೀಡುತ್ತಾರೆ ಎಂದು ತಿಳಿದುಕೊಂಡೆ. ಸಮಾಜಕ್ಕೆ ಒಬ್ಬ ಯೋಗ್ಯ ಪೊಲೀಸ್ ಅಧಿಕಾರಿಯನ್ನು ನೀಡಲು ಏನೆಲ್ಲಾ ಮಾಡುತ್ತಾರೆ ಎನ್ನುವುದು ತಿಳಿಯಿತು. ಇವರಿಂದ ನೆಮ್ಮದಿಯ ಜೀವನವನ್ನು ಮಾಡಬಹುದು. ನಾನು ವಿದ್ಯಾರ್ಥಿ ಆಗಿದ್ದಾಗ ಎನ್‍ಸಿಸಿಯಲ್ಲಿ ಭಾಗವಹಿಸಿದ್ದೆ. ಆಗ ಶೂಟ್ ಮಾಡಿ ಬಹುಮಾನ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಸೈನಿಕರ ಕ್ಯಾಂಪ್‍ನಲ್ಲೂ ನಾನು ಭಾಗವಹಿಸಿದ್ದೇನೆ. ಒಂದು ಗುಂಡು ಮಿಸ್ ಆಗದೇ ಶೂಟ್ ಮಾಡುವುದು ಮುಖ್ಯವಾಗುತ್ತದೆ. ಪೊಲೀಸರು ಅವರನ್ನು ರಕ್ಷಣೆ ಮಾಡಿಕೊಂಡು ಸಮಾಜವನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಮೈಸೂರಿನಲ್ಲಿ ಗ್ಯಾಂಗ್‍ರೇಪ್ ಪ್ರಕರಣ – ಘಟನೆಯ ಬಗ್ಗೆ ಬಿಚ್ಚಿಟ್ಟ ಸಂತ್ರಸ್ತೆಯ ಸ್ನೇಹಿತ

ಆರೋಪವೇನು..?
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ನಿನ್ನೆ ಮೈಸೂರೊಗೆ ಭೇಟಿ ಕೊಟ್ಟ ಗೃಹ ಸಚಿವರು ಈವರೆಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿಲ್ಲ. ಬದಲಾಗಿ ಪೊಲೀಸ್ ಅಕಾಡೆಮಿ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಮೈಸೂರಿನಲ್ಲಿ ಗ್ಯಾಂಗ್ ರೇಪ್ ನಡೆದಿದೆ. ಗಂಭೀರ ಪ್ರಕರಣ ನಡೆದರು ಇನ್ನೂ ಸಭೆಯನ್ನೇ ನಡೆಸಿಲ್ಲ. ದೇಶ ವ್ಯಾಪಿ ಗ್ಯಾಂಗ್ ರೇಪ್ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಆದರೂ ಇದೂವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಮೊದಲಿಗೆ ಮಾಡಬೇಕಾಗಿದ್ದ ಕೆಲಸ ಬಿಟ್ಟು ಅಕಾಡೆಮಿ ವೀಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *