ನಾಳೆ ಅಂಬಾ ವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್- ಕೃಷ್ಣದತ್ತ ಒಡೆಯರ್ ಸಿಂಹಾಸನಾರೋಹಣ

Public TV
2 Min Read

ಮೈಸೂರು: ನಾಳೆ ಒಂದೆಡೆ ನಾಡ ಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ಸಿಕ್ಕಿದರೆ. ಇತ್ತ ನಾಳೆ ಬೆಳಗ್ಗೆಯೇ ಅಂಬಾ ವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಜರುಗಲಿದ್ದು, ಗತ ಕಾಲದ ವೈಭವ ಮರುಕಳಿಸಲಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನರೋಹಣ ಮಾಡಿ ದರ್ಬಾರ್ ನಡೆಸಲಿದ್ದಾರೆ.

ರಾಜಾಧೀರಾಜ, ರಾಜ ಮಾರ್ತಾಂಡ, ರಾಜ ಕುಲತಿಲಕ, ರಾಜ ಮಾರ್ತಾಂಡ, ಯದುವೀರ್ ಪರಾಕ್, ಬಹು ಪರಾಕ್, ಹೀಗೆ ನಾಳೆ ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ವಂಧಿ ಮಾಧಗರು ಬಹುಪರಾಕ್ ಕೂಗುವ ಶಬ್ದ ಕೇಳಲಿದೆ. ಮತ್ತೊಂದು ಕಡೆ ರಾಜಗಾಂಭೀರ್ಯದಿಂದ ಸಿಂಹಾನದ ಕಡೆ ಯದುವಂಶದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಜ್ಜೆ ಇಡುತ್ತಾರೆ. ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದ ದರ್ಬಾರು ಮಾದರಿಯಲ್ಲೇ ಇಂದಿಗೂ ದಸರೆಯ ಸಂದರ್ಭದಲ್ಲಿ ಸಂಪ್ರದಾಯ ಬದ್ಧವಾಗಿ ಅರಮನೆಯಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಿಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಸ್ವರ್ಣ ನದಿಗೆ ಬಾಗಿನ ಅರ್ಪಿಸಿದ ಸುನಿಲ್ ಕುಮಾರ್

ಗುರುವಾರ ಏಳನೇ ಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ರಾಜ ಪೋಷಾಕು ಧರಿಸಿದ ಯದುವೀರ್, ದರ್ಬಾರ್ ಹಾಲ್ ಪ್ರವೇಶಿಸುತ್ತಿದ್ದಂತೆ ದರ್ಬಾರಿಗಳು ಬಹು ಪರಾಕ್ ಕೂಗಿಲಿದ್ದಾರೆ. ಸಿಂಹಾಸನದ ಬಳಿ ತೆರಳಿದ ನಂತರ ಯದುವೀರ್ ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಲಿದ್ದಾರೆ. ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ, ನಂತರ ಅವರು ಸಿಂಹಾಸನಾರೂಢರಾಗಲಿದ್ದಾರೆ. ಇದೇ ವೇಳೆ ಪತ್ನಿ ತ್ರಿಷಿಕಾ ಕುಮಾರಿ ಯದುವೀರ್ ಪಾದಗಳಿಗೆ ಪುಷ್ಪಾರ್ಚನೆ ಮಾಡಿ, ಪತ್ನಿ ಬಳಿಕ ದಿವಾನರು ಸಿಂಹಾಸನದ ಮುಂದೆ ನಿಂತು ನಡುಬಾಗಿಸಿ ವಂದಿಸುತ್ತಾರೆ.

ಇದಾದ ನಂತರ ಅರಮನೆಯ ದೇವಸ್ಥಾನಗಳು, ಚಾಮುಂಡಿ ಬೆಟ್ಟ ಸೇರಿದಂತೆ ಹಲವು ದೇವಸ್ಥಾನಗಳಿಂದ ತಂದಿದ್ದ ಪ್ರಸಾದವನ್ನು ಒಡೆಯರ್‍ಗೆ ನೀಡಲಾಗುತ್ತದೆ. ಈ ವೇಳೆ ಎಲ್ಲ ಪ್ರಸಾದವನ್ನು ಶ್ರದ್ಧಾ ಭಕ್ತಿಯಿಂದ ಯದುವೀರ್ ಸ್ವೀಕರಿಸುತ್ತಾರೆ. ನಂತರ ಮೈಸೂರು ರಾಜ್ಯ ಗೀತೆಯನ್ನು ನುಡಿಸಲಾಗುತ್ತದೆ. ಈ ವೇಳೆ ರತ್ನ ಖಚಿತ ಸಿಂಹಾಸನದ ಮೇಲೆ ನಿಂತ ಯದುವೀರ್ ಸೆಲ್ಯೂಟ್ ಮಾಡಿ ರಾಜ್ಯ ಗೀತೆಗೆ ಗೌರವ ಸಲ್ಲಿಸಲಿದ್ದಾರೆ. ರಾಜ್ಯ ಗೀತೆ ಮುಗಿದ ನಂತರ ಸಿಂಹಾಸನದಿಂದ ಇಳಿದು ಖಾಸಗಿ ದರ್ಬಾರನ್ನು ಮುಕ್ತಾಯಗೊಳಿಸುತ್ತಾರೆ. ಯದುವೀರ್ ಅವರು ಖಾಸಗಿ ದರ್ಬಾರ್ ನಡೆಸುವ ಮುನ್ನ ಅರಮನೆಯಲ್ಲಿ ಬೆಳಗಿನ ಜಾವದಿಂದಲೇ ಪೂಜಾ ವಿಧಿ ವಿಧಾನಗಳು ಜರುಗುತ್ತವೆ. ಮಂಗಳ ಸ್ನಾನ ನೆರವೇರಿಸಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಯದುವೀರ್ ಅವರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ. ಇದಾದ ಬಳಿಕ ಆರಮನೆಗೆ ಪಟ್ಟದ ಆನೆ, ಕುದರೆ, ಹಸುವನ್ನು ಕರೆಸಿ ಪೂಜೆ ಸಲ್ಲಿಸಲಾಗುತ್ತದೆ. ಇದನ್ನೂ ಓದಿ: ಜ್ಞಾನಪೀಠ ಯಾರಿಗೆ ಸಿಕ್ಕರೂ ಸಂತೋಷ: ಹಿರಿಯ ಕವಿ ಚನ್ನವೀರ ಕಣವಿ


ಸುಮಾರು 1 ಗಂಟೆ ಮೈಸೂರು ಅರಮನೆಯಲ್ಲಿ ನಾಳೆ ಗತಕಾಲದ ವೈಭವ ಮರುಕಳಿಸಲಿದ್ದು, ರಾಜರ ಕಾಲದ ಆಳ್ವಿಕೆ ಮಾದರಿಯಲ್ಲಿ ದರ್ಬಾರ್ ನಡೆಯಲಿದೆ. ಇದನ್ನು ಕಣ್ತುಂಬಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಈ ಬಾರಿ ಅರಮನೆಯಲ್ಲೂ 10 ದಿನಗಳ ಕಾಲ ಸರಳವಾಗಿ ದಸರಾ ದರ್ಬಾರ್ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *