ದಸರಾ ಗಜಪಡೆಯ ತೂಕ ಪರೀಕ್ಷೆ – 5 ಟನ್ ತೂಗಿದ ಕ್ಯಾಪ್ಟನ್ ಅಭಿಮನ್ಯು

By
1 Min Read

ಮೈಸೂರು: ವಿಶ್ವ ವಿಖ್ಯಾತ ಮೈಸೂರು (Mysuru) ದಸರಾ (Dasara) ಮಹೋತ್ಸವದ ಹಿನ್ನೆಲೆಯಲ್ಲಿ ಕಾಡಿನಿಂದ ಅರಮನೆಯ ಆವರಣಕ್ಕೆ ಬಂದಿರುವ ಗಜಪಡೆಯ ತೂಕ ಪರೀಕ್ಷೆ ಮಾಡಲಾಯಿತು. ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ತೂಕ ಪರೀಕ್ಷೆ ಒಳ ಪಡಿಸಲಾಯಿತು. ಈ ವೇಳೆ ಆನೆಗಳ ತೂಕ ಆರೋಗ್ಯಕರವಾಗಿರುವುದು ಕಂಡು ಬಂದಿದೆ.

ಮೈಸೂರು ಅರಮನೆಯಿಂದ ಪೊಲೀಸರ ಬಿಗಿ ಭದ್ರತೆಯಲ್ಲಿ ತೂಕ ಮಾಪನ ಕೇಂದ್ರಕ್ಕೆ ಗಜಪಡೆಗೆಯನ್ನು ಕರೆತರಲಾಯಿತು. ಈ ವೇಳೆ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು (Abhimanyu) 5,160 ಕೆಜಿ ತೂಗಿದ್ದಾನೆ. ಈ ಮೂಲಕ ಆರೋಗ್ಯವಂತ ತೂಕವನ್ನು ಹೊಂದಿದ್ದಾನೆ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಂಗ್ಲೆಂಡ್‍ನ ಅತೀ ದೊಡ್ಡ ನಗರಕ್ಕೆ ಆರ್ಥಿಕ ಸಂಕಷ್ಟ – ತುರ್ತು ಪರಿಸ್ಥಿತಿ ಘೋಷಣೆ

ಆನೆಗಳ (Elephant) ತೂಕದ ಆಧಾರದ ಮೇಲೆ ಅವುಗಳ ಆಹಾರ ಮತ್ತು ತರಬೇತಿ ನಿಗದಿಯಾಗುತ್ತದೆ. ಆನೆಗಳು ಆರೋಗ್ಯವಂತ ತೂಕವನ್ನು ಹೊಂದಿದ್ದು, ಅವುಗಳಿಗೆ ಸೂಕ್ತ ಆಹಾರ ಹಾಗೂ ತರಬೇತಿಗೆ ಸಜ್ಜುಗೊಳಿಸಲು ಕ್ರಮ ವಹಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ವಾರ ಯುರೋಪ್ ಪ್ರವಾಸ

ದಸರಾ ಗಜಪಡೆಯ ತೂಕದ ವಿವರ:

ವಿಜಯ – 2,830 ಕೆಜಿ
ಭೀಮ – 4,370 ಕೆಜಿ
ವರಲಕ್ಷ್ಮಿ – 3,020 ಕೆಜಿ
ಮಹೇಂದ್ರ – 4,530 ಕೆಜಿ
ಧನಂಜಯ – 4,940 ಕೆಜಿ
ಕಂಜನ್ – 4,240 ಕೆಜಿ
ಗೋಪಿ – 5,080 ಕೆಜಿ

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್