ಅಭಿಮನ್ಯು ಟೀಂಗೆ ಹೊಸ ಮೆಂಬರ್ ಎಂಟ್ರಿ- ಅಶ್ವತ್ಥಾಮ ಭವಿಷ್ಯದ ಕ್ಯಾಪ್ಟನ್!

Public TV
2 Min Read

ಮೈಸೂರು: ಈ ಬಾರಿಯ ಸರಳ ದಸರಾಕ್ಕೆ ಬರಲು ಅರ್ಜುನ ನೇತೃತ್ವದ ಗಜಪಡೆ ಸಿದ್ಧವಾಗಿದೆ. ಇದರೊಂದಿಗೆ ಅಭಿಮನ್ಯು ಟೀಂಗೆ ಹೊಸ ಆನೆ ಸೇರ್ಪಡೆಯಾಗಿದೆ. ಅದರ ಹೆಸರು ಅಶ್ವತ್ಥಾಮ. ಮಹಾಭಾರತದ ದ್ರೋಣಾಚಾರ್ಯರ ಮಗನ ಹೆಸರಿನ ಈ ಆನೆ ಈ ಬಾರಿಯ ದಸರೆಯ ಪ್ರಮುಖ ಆಕರ್ಷಣೆಯಾಗಲಿದೆ.

ಪುಂಡ ಹಾಗೂ ಜಗಮೊಂಡನಾಗಿದ್ದ ಈ ಆನೆ ಈಗ ದಸರಾ ಆನೆಗಳ ತಂಡ ಸೇರಿದೆ. ಅಶ್ವತ್ಥಾಮ ನಾಲ್ಕು ವರ್ಷದ ಹಿಂದೆ ಕಾಡಿನಿಂದ ನಾಡಿಗೆ ಬಂದು ಸಿಕ್ಕಾಪಟ್ಟೆ ಕಿರಿಕ್ ಮಾಡಿತ್ತು. ಹಾಸನ ಜಿಲ್ಲೆ ಸಕಲೇಶಪುರದ ಸುತ್ತಮುತ್ತ ಕಾಡಿನಿಂದ ನಾಡಿಗೆ ಬರುತ್ತಿದ್ದ ಈ ಆನೆ ಬೆಳೆದ ಬೆಳೆಯನ್ನು ತಿಂದು ಮತ್ತೆ ಕಾಡು ಸೇರುತ್ತಿತ್ತು. ಇದರಿಂದ ಆತಂಕಗೊಂಡ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆಗ ಆಪರೇಷನ್ ಗಜರಾಜ ಶುರುವಾಗಿತ್ತು. ಗ್ರಾಮಸ್ಥರು ಹೇಳಿದ ಪ್ರಕಾರ ಆನೆ ಭಾರಿ ಗಾತ್ರದ್ದಾಗಿತ್ತು. ಉದ್ದನೆಯ ದಂತ, ಆಕರ್ಷಕ ಮೈ ಕಟ್ಟಿನ ಒಂಟಿ ಸಲಗ ಅಂತಾ ಗೊತ್ತಾಗಿತ್ತು. ಆದ್ದರಿಂದ ಅರಣ್ಯ ಇಲಾಖೆಯವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರಲಿಲ್ಲ. ಅಶ್ವತ್ಥಾಮನ ಸೆರೆಗೆ ಬಂದಿದ್ದು, ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಆನೆ ನೇತೃತ್ವದಲ್ಲಿ ಅರ್ಜುನ ಸೇರಿ ಹಲವು ಆನೆಗಳ ಕಾರ್ಯಾಚರಣೆಯಲ್ಲಿ ಅಶ್ವತ್ಥಾಮ ಸೆರೆಯಾಗಿತ್ತು. ಇದನ್ನೂ ಓದಿ: ಈ ಬಾರಿ ಸರಳ, ಸಾಂಪ್ರದಾಯಿಕ ದಸರಾ ಆಚರಣೆ

ಅಂದು 30 ವರ್ಷದ ಗಂಡಾನೆಯಾಗಿದ್ದ, ಅಶ್ವತ್ಥಾಮನನ್ನು ಕಂಡ ಅಧಿಕಾರಿಗಳು ಇದಕ್ಕೆ ತರಬೇತಿ ನೀಡಿ ಪಳಗಿಸಿದರೆ ಅತ್ಯುತ್ತಮ ಆನೆಯಾಗಲಿದೆ ಅನಿಸಿತು. ತಕ್ಷಣ ಮೇಲಧಿಕಾರಿಗಳಿಂದ ಅನುಮತಿ ಪಡೆದು, ಹರವೆ ಆನೆ ಕ್ಯಾಂಪ್‍ಗೆ ಕರೆತಂದು ತರಬೇತಿ ನೀಡಿದ್ದರು. ಶಿಬಿರಕ್ಕೆ ಬಂದ ಆನೆಗೆ ಅಶ್ವತ್ಥಾಮ ಎಂದು ನಾಮಕರಣ ಮಾಡಲಾಯಿತು. ಬರೋಬ್ಬರಿ 3,500ಕೆಜಿ ತೂಕವಿದ್ದ ಅಶ್ವತ್ಥಾಮ, 2.85 ಮೀಟರ್ ಎತ್ತರ, 3.46 ಮೀಟರ್ ಉದ್ದವಿತ್ತು. ದಂತಗಳು ಆಕರ್ಷಕವಾಗಿ ಉದ್ದವಾಗಿದ್ದು, ಉಗ್ರ ಸ್ವರೂಪಿಯಾಗಿದ್ದ ಅಶ್ವತ್ಥಾಮ ಎಲ್ಲರಲ್ಲೂ ಆತಂಕ ಸೃಷ್ಟಿಸಿತ್ತು. ತರಬೇತಿಯಿಂದ ಉಗ್ರನಾಗಿದ್ದ ಆನೆ ಸೌಮ್ಯವಾಗಿದೆ. ಸಮತಟ್ಟಾದ ಬೆನ್ನು ಇರುವ ಕಾರಣ ದಸರೆಗೆ ಆಯ್ಕೆ ಮಾಡಲಾಗಿದೆ. ಅಶ್ವತ್ಥಾಮನಿಗೆ ಕೇವಲ 34 ವರ್ಷ ಜೊತೆಗೆ ಸಮತಟ್ಟಾದ ಬೆನ್ನು ಇದೆ. ಚಿನ್ನದ ಅಂಬಾರಿ ಕಟ್ಟಲು ಹೇಳಿ ಮಾಡಿಸಿದ ಮೈ ಕಟ್ಟು. ಹೀಗಾಗಿಯೇ ಅಶ್ವತ್ಥಾಮ ಭವಿಷ್ಯದ ಅಂಬಾರಿ ಹೊರುವ ಆನೆ ಎಂದೇ ಬಿಂಬಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಸೋನಿಯಾ ಗಾಂಧಿ ಅನಿವಾರ್ಯತೆ ಇದೆ, ನಮಗೆ ಇಲ್ಲ: ಪ್ರತಾಪ್ ಸಿಂಹ

ಇದೇ ಮೊದಲ ಬಾರಿಗೆ ಅಶ್ವತ್ಥಾಮ ಮೈಸೂರು ದಸರೆಗೆ ಪ್ರವೇಶ ಮಾಡಲಿದ್ದು, ಅಶ್ವತ್ಥಾಮನಿಗೆ ಮಾವುತ ಶಿವು ಹಾಗೂ ಕಾವಾಡಿ ಗಣೇಶ್ ಜೊತೆಯಾಗಿದ್ದಾರೆ. ಕೇವಲ ನಾಲ್ಕು ವರ್ಷದಲ್ಲಿ ಇವರ ನಡುವೆ ಅವಿನಾಭಾವ ಸಂಬಂಧ ಬೆಳೆದಿದ್ದು, ಇವರು ಹೇಳಿದ ಎಲ್ಲಾ ಮಾತುಗಳನ್ನು ಚಾಚು ತಪ್ಪದೆ ಪಾಲಿಸುವ ಅಶ್ವತ್ಥಾಮ ಇದೀಗ ಎಲ್ಲರ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *