ಮೈಸೂರು ಜಯಚಾಮರಾಜ ಒಡೆಯರ್ ಪ್ರತಿಮೆಗೆ ಹಾನಿ!

By
1 Min Read

ಮೈಸೂರು: ಅರಮನೆ ನಗರಿಯಲ್ಲಿ ಸಂಭ್ರಮದ ದಸರಾ ಮುಗಿಯುತ್ತಿದ್ದಂತೆಯೇ ಬೇಸರದ ಸಂಗತಿಯೊಂದು ಹೊರಬಿದ್ದಿದೆ. ಚಾಮರಾಜ ಒಡೆಯರ್ ಪ್ರತಿಮೆಗೆ ಹಾನಿಯುಂಟಾಗಿದೆ.

ಹೌದು. ಜಯಚಾಮರಾಜ ಒಡೆಯರ್ ಸರ್ಕಲ್‍ನಲ್ಲಿರುವ ಒಡೆಯರ್ ಪ್ರತಿಮೆ ಹಾನಿಗೊಳಗಾಗಿದೆ. ನಿನ್ನೆ ಜಂಬೂಸವಾರಿ ವೇಳೆ ಜಂಬೂ ಸವಾರಿ ನೋಡಲು ಜನ ಮುಗಿಬಿದ್ದಿದ್ದಾರೆ. ಈ ವೇಳೆ ನಡೆದ ನೂಕಾಟ-ತಳ್ಳಾಟದಿಂದ ಜಯಚಾಮರಾಜ ಒಡೆಯರ್ ಅಮೃತ ಶಿಲೆಯ ಪ್ರತಿಮೆಗೆ ಹಾನಿಯಾಗಿದೆ.  ಇದನ್ನೂ ಓದಿ: ಮಂಗಳೂರಿನಲ್ಲಿ 150 ಮಂದಿಗೆ ತ್ರಿಶೂಲ ಹಂಚಿದ ವಿಹೆಚ್‍ಪಿ!

ಪ್ರತಿಮೆ ಬಳಿ ಹೂ ಕುಂಡಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಭಾರೀ ಸಂಖ್ಯೆಯಲ್ಲಿ ಜನ ಸೇರಿದ ಪರಿಣಾಮ ಜಯಚಾಮರಾಜ ಒಡೆಯರ್ ಪ್ರತಿಮೆಯ ಖಡ್ಗ ಮುರಿದು ಬಿದ್ದಿದೆ. ಇದನ್ನೂ ಓದಿ: ನವದುರ್ಗೆಯರ ವಿಸರ್ಜನಾ ಕಾರ್ಯಕ್ರಮದೊಂದಿಗೆ ಮಂಗಳೂರು ದಸರಾಕ್ಕೆ ತೆರೆ

Share This Article
Leave a Comment

Leave a Reply

Your email address will not be published. Required fields are marked *