28 ದಿನಗಳ ಬಳಿಕ ಮುಂಬೈನಿಂದ ಬಂದು ಹೇಳಿಕೆ ನೀಡಿದ ಮೈಸೂರು ಸಂತ್ರಸ್ತೆ

Public TV
2 Min Read

ಮೈಸೂರು/ಬೆಂಗಳೂರು: ಹೊರವಲಯದಲ್ಲಿ 28 ದಿನಗಳ ಹಿಂದೆ ನಡೆದ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಕೊನೆಗೂ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಪೊಲೀಸರ ಮನವೊಲಿಕೆಗೆ ತಲೆಬಾಗಿ ಇಂದು ಮುಂಬೈನಿಂದ ದಿಢೀರ್ ಎಂದು ಮೈಸೂರಿಗೆ ಧಾವಿಸಿದ ಸಂತ್ರಸ್ತೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಲಿಖಿತ ಹೇಳಿಕೆ ದಾಖಲಿಸಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರಾದ ಸಂತ್ರಸ್ತೆ, ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಸುದೀರ್ಘ ಎರಡು ಗಂಟೆಗಳ ಕಾಲ ತಮ್ಮ ಹೇಳಿಕೆಯನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ. ಆ ದಿನ ಏನಾಯ್ತು? ಯಾರು ರಕ್ಷಣೆ ನೀಡಿದ್ರು? ಮಾನಸಿಕವಾಗಿ ಅನುಭವಿಸಿದ ಯಾತನೆ. ಹೀಗೆ ಎಲ್ಲವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:  ಅಮೆರಿಕದಲ್ಲಿ ಕೋವಿಡ್ 19, ಭಯೋತ್ಪಾದನೆ, ಹವಾಮಾನ ವೈಪರೀತ್ಯ ಬಗ್ಗೆ ಮಾತನಾಡುತ್ತೇನೆ – ಮೋದಿ

ಸಂತ್ರಸ್ತೆ ಹೇಳಿಕೆ ನೀಡಿದ ಪರಿಣಾಮ ಗ್ಯಾಂಗ್ ರೇಪ್ ಪ್ರಕರಣಕ್ಕೆ ಮತ್ತಷ್ಟು ಬಲ ಬಂದಿದೆ. ಆರೋಪಿಗಳ ಸುತ್ತ ಈಗ ಕಾನೂನಿನ ಉರುಳು ಮತ್ತಷ್ಟು ಬಿಗಿ ಆಗಲಿದೆ.

ಸಂತ್ರಸ್ತೆ ಹೇಳಿಕೆ ನೀಡಿದ ಮಾಹಿತಿಯನ್ನು ಸಿಎಂ ಬೊಮ್ಮಾಯಿ ಸದನಕ್ಕೆ ಇಂದು ನೀಡಿದರು. ಗ್ಯಾಂಗ್‍ರೇಪ್ ಅತ್ಯಾಚಾರಿಗಳಿಗೆ ಮರಣದಂಡನೆ ಕೊಡಿಸುವ ಶಿಕ್ಷೆ ಕೊಡಿಸುತ್ತೇವೆ ಎಂದು ಘೋಷಿಸಿದ್ರು. ಇದನ್ನೂ ಓದಿ:  ಗ್ರಿಲ್ ಹಾಕಿದ್ದರಿಂದಲೇ ಇಬ್ಬರು ಬೆಂಕಿಗೆ ಬಲಿಯಾಗಿದ್ದಾರೆ – ಅಪಾರ್ಟ್‍ಮೆಂಟ್ ನಿವಾಸಿ

ಪ್ರಕರಣದ ವಿಚಾರಣೆಯನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್‍ಲ್ಲಿ ನಡೆಸಲು ಮನವಿ ಮಾಡಲು ಪೊಲೀಸರಿಗೆ ತಿಳಿಸಿದ್ದೇನೆ ಎಂದು ಗೃಹ ಸಚಿವರು ತಿಳಿಸಿದರು. ಸಾಕ್ಷಿಯೇ ಇಲ್ಲದ ಕೇಸ್ ಅನ್ನು ಪೊಲೀಸರು ಭೇದಿಸಿದ್ದಾರೆ. ಪೊಲೀಸರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಹೇಗಿರಲಿದೆ ಕಾನೂನು ಪ್ರಕ್ರಿಯೆ?
ನ್ಯಾಯಾಧೀಶರ ಮುಂದೆ 164ರ ಅಡಿ ಯುವತಿ ಹೇಳಿಕೆ ನೀಡಿದ್ದಾರೆ. ಸಂಪೂರ್ಣ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಲಾಗಿರುತ್ತದೆ. ನ್ಯಾಯಾಧೀಶರ ಸಮ್ಮುಖದಲ್ಲಿ ಯುವತಿ ನೀಡಿದ ಹೇಳಿಕೆಯೇ ಅಂತಿಮವಾಗಲಿದೆ. ಇದನ್ನೂ ಓದಿ:  ಉಡುಪಿಯಲ್ಲಿ ಹಟ್ಟಿಗೆ ನುಗ್ಗಿ ಗೋವು ಕಳ್ಳತನ- ಪೊಲೀಸ್ ಠಾಣೆ ಮುಂದೆ ಪ್ರತಿಭಟನಾ ಭಜನೆ

ಸೆಕ್ಷನ್ 164 ಅಡಿ ನೀಡಲಾದ ಹೇಳಿಕೆಯನ್ನ ಬದಲಾಯಿಸಲು ಸಾಧ್ಯವಿಲ್ಲ. ನ್ಯಾಯಾಧೀಶರ ಮುಂದೆ ಕೊಟ್ಟ ಹೇಳಿಕೆಯನ್ವಯ ಪೊಲೀಸರಿಂದ ಚಾರ್ಜ್‍ಶೀಟ್ ಸಲ್ಲಿಕೆಯಾಗುತ್ತದೆ. ಚಾರ್ಜ್‍ಶೀಟ್‍ನಲ್ಲಿ ಯುವತಿ ಹೇಳಿಕೆಯನ್ನೇ ಪ್ರಮುಖ ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *