ಮೈಸೂರು: ಅರಮನೆ ಆವರಣದಲ್ಲಿ(Mysuru Palace) ನಡೆದ ಸ್ಫೋಟ ಪ್ರಕರಣಕ್ಕೆ (Cylinder Blast) ಸಂಬಂಧಿಸಿದಂತೆ ತನಿಖೆ ಚುರುಕೊಂಡಿದ್ದು ಮೃತ ಸಲೀಂ (Saleem) ಉತ್ತರ ಪ್ರದೇಶದಲ್ಲಿ (Uttar Pradesh) 5 ಎಕ್ರೆ ಜಮೀನು ಹೊಂದಿದ್ದ ವಿಚಾರ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಪೊಲೀಸರ ಜೊತೆಗೆ ಮೈಸೂರು ಪೊಲೀಸರು ನಿರಂತರ ಸಂಪರ್ಕದಲ್ಲಿದ್ದು ಸಲೀಂ ಹಿನ್ನೆಲೆ ಬಗ್ಗೆ ಆಳವಾದ ತನಿಖೆ ಶುರುವಾಗಿದೆ. ಇದನ್ನೂ ಓದಿ: ಸಲೀಂ ಹೊಟ್ಟೆಪಾಡಿಗಾಗಿ ಕೆಲಸ ಮಾಡ್ತಿದ್ದ, ಆತಂಕ ಪಡುವ ಅಗತ್ಯವಿಲ್ಲ: ಮಹದೇವಪ್ಪ
ಕನೋಜ್ ಜಿಲ್ಲೆಯ ತೊಫಿಯಾ ಗ್ರಾಮದ ನಿವಾಸಿಯಾಗಿರುವ ಸಲೀಂ ಊರಿನಲ್ಲಿ ಕೃಷಿ ಮಾಡುತ್ತಿದ್ದ. ಈತನಿಗೆ 5 ಎಕ್ರೆ ಜಮೀನು ಇದ್ದು ಇಷ್ಟು ವರ್ಷ ಕೃಷಿ ಕೆಲಸವನ್ನೇ ಮಾಡುತ್ತಿದ್ದ. ಕೃಷಿ ಕೆಲಸ ಬಿಟ್ಟು ಒಂದು ತಿಂಗಳ ಹಿಂದೆ ಮೈಸೂರಿಗೆ ಸಲೀಂ ಬಂದಿದ್ದ. ಇದನ್ನೂ ಓದಿ: 15 ದಿನಗಳಿಂದ ಲಾಡ್ಜ್‌ನಲ್ಲಿ ವಾಸ – ಮೈಸೂರು ಸ್ಫೋಟಕ್ಕೆ ಎನ್‌ಐಎ ಎಂಟ್ರಿ
ಕೃಷಿ ಕೆಲಸ ಬಿಟ್ಟು ಮೈಸೂರಿಗೆ ಬಲೂನ್ ಮಾರಾಟ ಮಾಡಲು ಬಂದಿದ್ದು ಯಾಕೆ ಎಂಬ ಮಾಹಿತಿಯನ್ನು ಸಲೀಂ ಕುಟುಂಬಸ್ಥರಿಂದ ಈಗ ಪೊಲೀಸರು ಸಂಗ್ರಹಿಸುತ್ತಿದ್ದಾರೆ. 5 ಎಕ್ರೆ ಜಮೀನು ಇದ್ದರೂ ಬಲೂನು ಮಾರಾಟಕ್ಕೆ ಇಳಿದ್ದಿದ್ದು ಯಾಕೆ? ಅದರಲ್ಲೂ ಮೈಸೂರಿಗೆ ಬಂದು ಮಾರಾಟಕ್ಕೆ ಇಳಿದಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

