ಆಸ್ಟ್ರೇಲಿಯಾದ ಬೀಚ್‌ನಲ್ಲಿ ನಿಗೂಢ ವಸ್ತು ಪತ್ತೆ – ಚಂದ್ರಯಾನ-3ರ ಬಿಡಿಭಾಗ?

By
2 Min Read

ಕ್ಯಾನ್‌ಬೆರಾ: ಕಳೆದ ಶುಕ್ರವಾರವಷ್ಟೇ ಚಂದ್ರಯಾನ-3ರ (Chandrayaan-3) ರಾಕೆಟ್ ಉಡಾವಣೆಯಾಗಿತ್ತು. ಭಾರತದ ಐತಿಹಾಸಿಕ ಕ್ಷಣವನ್ನು ವಿಶ್ವವೇ ನಿಬ್ಬೆರಗಾಗಿ ವೀಕ್ಷಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾದ (Australia) ಪಶ್ಚಿಮ ಭಾಗದ ಗ್ರೀನ್ ಹೆಡ್ ಕರಾವಳಿ ಪ್ರದೇಶದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದೆ. ಈ ವಸ್ತು ಚಂದ್ರಯಾನ-3ಕ್ಕೆ ಸಂಬಂಧಪಟ್ಟಿರಬಹುದೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಚಂದ್ರಯಾನ-3 ಮಿಷನ್ ಅನ್ನು ಭಾರತದ ಅತ್ಯಂತ ಭಾರವಾದ ರಾಕೆಟ್, ಲಾಂಚ್ ವೆಹಿಕಲ್ ಮಾರ್ಕ್-III ಅನ್ನು ಇತ್ತೀಚೆಗೆ ಉಡಾವಣೆ ಮಾಡಲಾಗಿದೆ. ರಾಕೆಟ್ ಉಡಾವಣೆಯಾದ ಬಳಿಕ ಅದು ರಾತ್ರಿ ವೇಳೆ ಆಸ್ಟ್ರೇಲಿಯಾದ ಆಕಾಶದಲ್ಲೂ ಪ್ರಕಾಶಮಾನವಾಗಿ ಕಂಡುಬಂದಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಇದೀಗ ಆಸ್ಟ್ರೇಲಿಯಾದ ಬೀಚ್‌ನಲ್ಲಿ ಪತ್ತೆಯಾಗಿರುವ ನಿಗೂಢ ವಸ್ತು ಚಂದ್ರಯಾನ-3ಕ್ಕೆ ಸಂಬಂಧಪಟ್ಟಿರುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಕೆಟ್ ಉಡಾವಣೆಯಾದ ಬಳಿಕ ಅದರಿಂದ ಕಳಚಿಕೊಂಡ ಎಲ್‌ವಿಎಂ-3ರ ಹಂತಗಳಲ್ಲಿ ಒಂದಾಗಿರಬಹುದು ಎಂದು ಊಹಿಸಲಾಗುತ್ತಿದೆ. ಇದನ್ನೂ ಓದಿ: ಪ್ರಯಾಣಿಕನ ಮೊಬೈಲ್ ಬ್ಲಾಸ್ಟ್ – ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಆದರೂ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಈ ನಿಗೂಢ ವಸ್ತು ಏನು ಎಂಬುದನ್ನು ದೃಢಪಡಿಸಿಲ್ಲ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಕೂಡಾ ಇಲ್ಲಿವರೆಗೆ ಈ ಬಗ್ಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ತನ್ನ ಕರಾವಳಿ ಪ್ರದೇಶದಲ್ಲಿ ಪತ್ತೆಯಾಗಿರುವ ವಸ್ತುವಿನ ಬಗ್ಗೆ ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಿದೆ.

ವರದಿಗಳ ಪ್ರಕಾರ ನಿಗೂಢ ವಸ್ತು 2 ಮೀ. ಎತ್ತರ ಮತ್ತು ಸುಮಾರು 2 ಮೀ. ಅಗಲವಿದೆ. ಇದು ರಾಕೆಟ್‌ನ ಮೂರನೇ ಹಂತ ಎಂಬ ಊಹೆಗಳನ್ನು ಹುಟ್ಟುಹಾಕಿದೆ. ಇದನ್ನು ಜನರ ಸುರಕ್ಷತೆಗೋಸ್ಕರ ಭೂಮಿಯ ಮೇಲೆ ಎಸೆಯದೇ ಸಮುದ್ರದಲ್ಲಿ ಕಳಚಿಕೊಳ್ಳುವಂತೆ ಮಾಡಲಾಗುತ್ತದೆ. ಇದನ್ನೂ ಓದಿ: ಅಮಿತ್ ಶಾ ಉಪಸ್ಥಿತಿಯಲ್ಲೇ 2,400 ಕೋಟಿ ಮೌಲ್ಯದ ಡ್ರಗ್ಸ್ ನಾಶ

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್