ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಸದಾ ಸಿದ್ಧ: ರಾಜವಂಶಸ್ಥ ಯದುವೀರ್ ಒಡೆಯರ್

Public TV
1 Min Read

ಚಾಮರಾಜನಗರ: ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಹಿಂದೆಯೂ ಸದಾ ಸಿದ್ಧವಾಗಿತ್ತು, ಈಗಲೂ ಧರ್ಮ ರಕ್ಷಣೆಗೆ ನಾವು ಸಿದ್ಧವಾಗಿದ್ದೇವೆ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಚಾಮರಾಜನಗರದ ನಂದಿ ಭವನದಲ್ಲಿ ಆಯೋಜಿಸಿರುವ ಎಬಿವಿಪಿ 41ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿನ ಬಹುತೇಕ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲೇ ಪರಿಹಾರ, ಉತ್ತರವಿದೆ. ಆದ್ದರಿಂದ‌ ಧರ್ಮ ರಕ್ಷಣೆ ಅಗತ್ಯವಾಗಿದೆ. ಧರ್ಮ ರಕ್ಷಣೆಗೆ ಜಾತಿ-ಜಾತಿಗಳು ಒಗ್ಗಟ್ಟಾಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹಿಜಬ್‌ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಡಿಕೆಶಿ ಆದೇಶಕ್ಕೆ ಕಿಮ್ಮತ್ತಿಲ್ಲವೇ: ಬಿಜೆಪಿ ಪ್ರಶ್ನೆ

ಕಡಿಮೆ ಸಂಖ್ಯೆಯಲ್ಲಿದ್ದ ಬ್ರಿಟಿಷರು ಭಾರತವನ್ನು ಆಳಲು ಸಾಧ್ಯವಾಗಿದ್ದು ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣದಿಂದಾಗಿ. ಜಯ ಚಾಮರಾಜ ಒಡೆಯರ್ ವಿಶ್ವ ಹಿಂದೂ ಪರಿಷತ್‌ನ ಅದ್ಯಕ್ಷರಾಗಿದ್ದರು. ಜೊತೆಗೆ ಬೇಸಿಗೆ ಅರಮನೆಯಲ್ಲಿ ವಿಎಚ್‌ಪಿ ಸಮ್ಮೇಳನವೂ ನಡೆದಿತ್ತು ಎಂದು ನೆನಪಿಸಿಕೊಂಡರು.

ಧರ್ಮದ ಜೊತೆ ಪರಿಸರ ರಕ್ಷಣೆಗೂ ನಾವು ಆದ್ಯತೆ ಕೊಡಬೇಕು. ಇದಕ್ಕೆಲ್ಲಾ ಶಿಕ್ಷಣವೇ ಪರಿಹಾರ ಕೊಡಬೇಕು. ಶಿಕ್ಷಣದಿಂದಲೇ ಈ ಬಗ್ಗೆ ಜಾಗೃತಿ ಮಾಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹಿಜಬ್ ವಿವಾದದ ನಡುವೆಯೇ ಮಾದರಿಯಾದ ಮುಸ್ಲಿಂ ಶಿಕ್ಷಣ ಸಂಸ್ಥೆ

ಸಚಿವ ಡಾ.ಸಿ‌.ಎನ್.ಅಶ್ವತ್ಥ ನಾರಾಯಣ, ಪದ್ಮಶ್ರೀ ಪುರಸ್ಕೃತ ಡಾ.ಸುಬ್ಬಯ್ಯ ಅಯ್ಯಪ್ಪನ್, ಎಬಿವಿಪಿ ರಾಷ್ಟೀಯ ಅಧ್ಯಕ್ಷ ಡಾ.ಛಗನ್ ಬಾಯ್ ಪಟೇಲ್, ಮೈವಿವಿ ಕುಲಪತಿ ಪ್ರೊ.ಜಿ‌.ಹೇಮಂತ್ ಕುಮಾರ್ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *