ಮೈಸೂರು ಪಾಕ್, ಜಿಲೇಬಿ ಪ್ರಿಯರೇ ಹುಷಾರ್ – ಕ್ಯಾನ್ಸರ್, ಡಯಾಬಿಟಿಸ್‌ಗೆ ಕಾರಣವಾಗ್ತಿದ್ಯಾ ಸಿಹಿತಿಂಡಿಗಳು?

By
2 Min Read

– ಆಹಾರ ಇಲಾಖೆಯಿಂದ 10ಕ್ಕೂ ಅಧಿಕ ಸಿಹಿ ತಿಂಡಿಗಳು ಟೆಸ್ಟಿಂಗ್‌ಗೆ ರವಾನೆ

ಬೆಂಗಳೂರು: ಗೋಬಿ, ಪಾನಿಪುರಿ, ಕಬಾಬ್, ಪನ್ನೀರ್ ಆಯ್ತು. ಇದೀಗ ಆಹಾರ ಇಲಾಖೆ ಸಿಹಿ ತಿಂಡಿಗಳನ್ನು ಪರೀಕ್ಷೆಗೊಳಪಡಿಸಿ ಏನೆಲ್ಲಾ ಕಲಬೆರಿಕೆ ಮಾಡಲಾಗುತ್ತಿದೆ ಹಾಗೂ ಕ್ಯಾನ್ಸರ್, ಡಯಾಬಿಟಿಸ್‌ಗೆ ಸಿಹಿತಿಂಡಿಗಳು ಕಾರಣವಾಗುತ್ತಿದ್ಯಾ ಎನ್ನುವುದನ್ನು ಪತ್ತೆ ಹಚ್ಚಲು ಹೊರಟಿದೆ.

ಹೌದು, ಜನರು ಬಾಯಿ ಚಪ್ಪರಿಸಿಕೊಂಡು ತಿನ್ನುವ ಸ್ಟೀಟ್ಸ್‌ ಮೇಲೆ ಇದೀಗ ಆಹಾರ ಇಲಾಖೆ ಸಮರ ಸಾರಲು ಸಜ್ಜಾಗಿದ್ದು, 10ಕ್ಕೂ ಅಧಿಕ ಸಿಹಿ ತಿಂಡಿಗಳನ್ನು ಟೆಸ್ಟಿಂಗ್‌ಗೆ ರವಾನಿಸಿದೆ. ಯುಗಾದಿ ಹಬ್ಬ ಬಂದರೆ ಸಾಕು ಜನರು ಸಿಹಿ ತಿಂಡಿಗಳ ಖರೀದಿಗೆ ಮುಂದಾಗುತ್ತಾರೆ. ಹೀಗಾಗಿ ಹಬ್ಬ ಹತ್ತಿರವಾಗುತ್ತಿದ್ದಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.ಇದನ್ನೂ ಓದಿ:ಟಾರ್ಗೆಟ್‌ ರಾಜಣ್ಣ – ಹೈಕಮಾಂಡ್‌ಗೆ ದೂರು ನೀಡಲು ಮುಂದಾದ ಸಿಎಂ ಆಪ್ತರು

ಮೈಸೂರು ಪಾಕ್, ಮಿಕ್ಸ್ಚ್‌ರ್‌, ಕಾಜುಬರ್ಫಿ, ಜಿಲೇಬಿ, ಜಹಂಗೀರ್‌ನಲ್ಲಿ ಕಲರಿಂಗ್, ಕಲಬೆರಕೆ ಮತ್ತು ಸಕ್ಕರೆ ಪ್ರಮಾಣ ಹೆಚ್ಚಳದ ಬಗ್ಗೆ ಆಹಾರ ಸುರಕ್ಷತಾ ಇಲಾಖೆಗೆ ದೂರು ಹೋಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸುರಕ್ಷತಾ ಇಲಾಖೆ ಅಧಿಕಾರಿಗಳು ಸಿಹಿ ತಿಂಡಿಗಳ ಮಾದರಿಗಳನ್ನು ಟೆಸ್ಟ್‌ಗೆ ರವಾನಿಸಿದ್ದಾರೆ.

ಸುಮಾರು 10ಕ್ಕೂ ಹೆಚ್ಚು ಸಿಹಿ ತಿಂಡಿಗಳನ್ನ ಟೆಸ್ಟಿಂಗ್‌ಗೆ ಕಳುಹಿಸಲಾಗಿದೆ. ಈ ಸ್ಟೀಟ್‌ಗಳಲ್ಲಿ ಕಲಬೆರಕೆ, ಕಲರಿಂಗ್ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಕ್ಯಾನ್ಸರ್, ಡಯಾಬಿಟಿಸ್‌ಗೆ ಕಾರಣ ಆಗುತ್ತಿದೆ ಎಂದು ಈ ಬಗ್ಗೆ ಆಹಾರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕಲರಿಂಗ್‌ನಿಂದ ಕ್ಯಾನ್ಸರ್, ಹೆಪಟೈಟಿಸ್ ಸಮಸ್ಯೆ ಆಗಿ ದೇಹಕ್ಕೆ ಹಾನಿಯಾಗಲಿದೆ. ಜೊತೆಗೆ ಸಕ್ಕರೆ ಪ್ರಮಾಣ ಇದ್ದರೆ ಅದು ಡಯಾಬಿಟಿಸ್‌ಗೆ ಕಾರಣ ಆಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ.

1. ಜಿಲೇಬಿ, ಮಿಕ್ಸ್ಚ್‌ರ್‌ಗಳಲ್ಲಿ ಸನ್ ಸೆಟ್ ಯಲ್ಲೋ ಕಲರ್ ಬಳಕೆ ಮಾಡಲಾಗುತ್ತದೆ. ಇದು ಕ್ಯಾನ್ಸರ್ ಕಾರಕ.
2. ಸಿಹಿ ತಿಂಡಿಗಳಲ್ಲೂ ಅಪಾಯಕಾರಿ ರೋಡೋಮೆನ್ ಬಿ ಅಂಶ ಇರುತ್ತದೆ
3. ಕಾರ್ಸೋನೋಜೆನಿಕ್ ಎನ್ನುವ ಕ್ಯಾನ್ಸರ್ ಕಾರಕ ಅಪಾಯಕಾರಿ
4. ಕೆಲ ಸ್ವೀಟ್‌ಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಳ ಇದ್ದು ಡಯಾಬಿಟಿಸ್‌ಗೆ ಕಾರಣ
5. ಬಳಸುವ ಅಡುಗೆ ಎಣ್ಣೆ ಕೂಡ ಹೈಜೆನಿಕ್ ಇರಲ್ಲ

ಕಲಬೆರಕೆ, ಕಲರಿಂಗ್, ಸಕ್ಕರೆ ಪ್ರಮಾಣ ಹೆಚ್ಚಳ ಸಂಬಂಧ ಆಹಾರ ಸುರಕ್ಷತಾ ಇಲಾಖೆ (Department of Food Safety) ಅಧಿಕಾರಿಗಳು 10 ಸಿಹಿತಿಂಡಿಗಳನ್ನು ಲ್ಯಾಬ್‌ಗೆ ರವಾನಿಸಿದ್ದು, ವರದಿಯಲ್ಲಿ ಏನಿರಲಿದೆ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ:ಸ್ನೇಹಿತೆಯನ್ನ ಭೇಟಿಯಾಗಲು ಬುರ್ಖಾ ಧರಿಸಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿದ ಯುವಕ

Share This Article