ನನ್ನ ಮಾತುಗಳನ್ನು ತಿರುಚಿ ವೀರಶೈವ ಲಿಂಗಾಯತರನ್ನು ಎತ್ತಿ ಕಟ್ಟುವ ಪ್ರಯತ್ನವಾಗಿದೆ: ಸಿದ್ದರಾಮಯ್ಯ

Public TV
1 Min Read

ಬೆಳಗಾವಿ: ನನ್ನ ಮಾತುಗಳನ್ನು ತಿರುಚುತ್ತಲೇ ಇದ್ದಾರೆ. ವೀರಶೈವ ಲಿಂಗಾಯತರನ್ನು (Veerashaiva Lingayats) ನನ್ನ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.

ಗೋಕಾಕ್‌ನಲ್ಲಿ ಶೆಟ್ಟರ್ ಹಾಗೂ ಸವದಿ ಪಕ್ಷ ಬಿಟ್ಟಿದ್ದು ಸಮುದ್ರದಲ್ಲಿನ ಒಂದು ಲೋಟ ನೀರು ತಗೆದಂತೆ ಎಂಬ ಬಿಜೆಪಿಗರ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಬಿಜೆಪಿಯವರು ಹತಾಶರಾಗಿ ಆ ರೀತಿಯ ಮಾತನ್ನಾಡುತ್ತಿದ್ದಾರೆ. ಶೆಟ್ಟರ್ ಟಿಕೆಟ್ ಕೈ ತಪ್ಪೋಕೆ ಕಾರಣ ಸಂತೋಷ್ ಅಲ್ಲ ಪ್ರಧಾನಿಗಳು ಎಂಬ ಜೋಶಿ ಹೇಳಿಕೆ ವಿಚಾರಕ್ಕೆ ಶೆಟ್ಟರ್ ಹೇಳೋದು ನಂಬಬೇಕೊ? ಜೋಶಿ ಹೇಳೋದು ನಂಬಬೇಕೊ? ಎಂದು ಪ್ರಶ್ನೆ ಮಾಡಿದರು. ನಾನು ನಂಬೋದು ಶೆಟ್ಟರ್ ಹೇಳೋದನ್ನು. ಜೋಶಿ ಸುಳ್ಳು ಹೇಳ್ತಾನೆ ಎಂದು ಟಾಂಗ್ ನೀಡಿದರು.

ಸಮ್ಮಿಶ್ರ ಸರ್ಕಾರ ಪತನ ಮಾಡಿದ ರಮೇಶ್ ಜಾರಕಿಹೊಳಿ ಕ್ಷೇತ್ರಕ್ಕೆ ಬಂದಿದ್ದೀರಿ, ಹೇಗಿದೆ ವಾತಾವರಣ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ಕ್ಷೇತ್ರದಲ್ಲಿ ರಮೇಶ್ ವಿರುದ್ಧ ಬಲವಾದ ವಿರೋಧ ಇದೆ. ಅದರಿಂದ ಈ ಬಾರಿ ನಮ್ಮ ಅಭ್ಯರ್ಥಿಗೆ ಹೆಚ್ಚು ಅವಕಾಶ ಇದೆ. ಕರ್ನಾಟಕದಲ್ಲಿ 130 ಕ್ಕೂ ಹೆಚ್ಚು ಸ್ಥಾನ ಬಹುತೇಕ 150 ಸ್ಥಾನ ಗೆಲ್ಲುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕುಟುಂಬ, ಸಂಸಾರ ತ್ಯಾಗ ಮಾಡಿ ಬಿ.ಎಲ್ ಸಂತೋಷ್‌ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ: ಪ್ರಹ್ಲಾದ್ ಜೋಶಿ

ಸಿದ್ದರಾಮಯ್ಯ ಮಾತುಗಳನ್ನು ತಿರುಚಲಾಗುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು, ತಿರುಚುತ್ತಲೇ ಇದ್ದಾರೆ. ವೀರಶೈವ ಲಿಂಗಾಯತರನ್ನು ನನ್ನ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಹೇಳಿದ್ದು ವೀರಶೈವ ಲಿಂಗಾಯತರಲ್ಲಿ ಎಲ್ಲರೂ ಪ್ರಮಾಣಿಕರಾಗುತ್ತಿದ್ದರು. ಆದರೆ ಬಸವರಾಜ ಬೊಮ್ಮಾಯಿ (Basavaraj Bommai) ಭ್ರಷ್ಟ ಸಿಎಂ ಎಂದು ಹೇಳಿದ್ದೇನೆ. ‘ವಾಟ್ ಇಸ್ ರಾಂಗ್ ಇನ್ ದ್ಯಾಟ್?’ (ಅದರಲ್ಲಿ ತಪ್ಪೇನಿದೆ?) ಅದು ಜಾತಿ ವಿರುದ್ಧ ಹೇಳಿದ್ದೀನಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದನ್ನೂ ಓದಿ: ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ

Share This Article