ನನ್ನ ಧರ್ಮ ಪಾಲನೆ ಹೊಸ್ತಿಲು ದಾಟಿ ಹೊರಬಂದಿಲ್ಲ: ಬಾನು ಮುಷ್ತಾಕ್

Public TV
1 Min Read

ಮೈಸೂರು: ನನ್ನ ಧರ್ಮ ಪಾಲನೆ ಹೊಸ್ತಿಲು ದಾಟಿ ಹೊರಬಂದಿಲ್ಲ ಎಂದು ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಭಾನು ಮುಷ್ತಾಕ್‌ (Banu Mushtaq) ಹೇಳಿದ್ದಾರೆ.

ದಸರಾ ಉದ್ಘಾಟನೆ ಕಾರ್ಯಕ್ರಮದ (Mysuru Dasara 2025) ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ, ನನ್ನ ಅಭಿಪ್ರಾಯ ಮಾತಲ್ಲಿ ಹೇಳುವುದು ಏನಿಲ್ಲ. ಎಲ್ಲಾ ನನ್ನ ನಡುವಳಿಕೆಯಲ್ಲೇ ಇದೆ ಎಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಇದನ್ನೂ ಓದಿ: ದಸರೆ ಹಬ್ಬ ಮಾತ್ರ ಅಲ್ಲ, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ: ಬಾನು ಮುಷ್ತಾಕ್‌

ನಾನು ನನ್ನ ಧರ್ಮವನ್ನು ಪಾಲನೆ ಮಾಡುತ್ತೇನೆ. ಅದು ನನ್ನ ವೈಯುಕ್ತಿಕವಾದದ್ದು. ಅದು ಯಾವತ್ತೂ ಹೊಸ್ತಿಲು ದಾಟಿ ಹೊರಬಂದಿಲ್ಲ. ನನಗೆ ಬೇರೆ ಧರ್ಮಗಳ ಬಗ್ಗೆ ಅಪಾರವಾದ ಗೌರವವಿದೆ ಎಂದರು.

ಹಳೇ ಭಾಷಣ ವೈರಲ್ ಆದ ವಿಚಾರವಾಗಿ, ಒಂದು ಚಿಕ್ಕ ತುಣುಕನ್ನ ಕೇಳಿ ಏನನ್ನೂ ನಿರ್ಧಾರ ಮಾಡಬೇಡಿ. ನನ್ನ ಪೂರ್ತಿ ಮಾತನ್ನು ಕೇಳಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಚಾಮುಂಡಿ ತಾಯಿ ಪೂಜೆ ವೇಳೆ ಬಾನು ಮುಷ್ತಾಕ್ ಭಾವುಕ

Share This Article