ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

Public TV
2 Min Read

– ವಾರದ ಹಿಂದೆ ವಾಟ್ಸಪ್‌ನಲ್ಲಿ ಪಲ್ಲವಿ ಮೆಸೇಜ್‌
– ಪತಿ ವಿರುದ್ಧ ಗ್ರೂಪಿನಲ್ಲಿ ಗಂಭೀರ ಆರೋಪ

ಬೆಂಗಳೂರು: ಓಂ ಪ್ರಕಾಶ್‌ (Om Prakash) ಅವರಿಗೆ ಉಗ್ರರ ಸಂಪರ್ಕ ಇದ್ದು, ಅವರ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ಕೇಸ್‌ ದಾಖಲಿಸಬೇಕು. ನಮಗೆ ಕೇಂದ್ರ ಸರ್ಕಾರದಿಂದ ಸಹಾಯ ಬೇಕಿದೆ ಎಂದು ಪತ್ನಿ ಪಲ್ಲವಿ (Pallavi) ಅವರು ಈ ಹಿಂದೆ ವಾಟ್ಸಪ್‌ನಲ್ಲಿ ಮೆಸೇಜ್‌ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್ ಪತ್ನಿ ಪಲ್ಲವಿ ಒಂದು ವಾರದ ಹಿಂದಿನ ವಾಟ್ಸಪ್‌ ಚಾಟ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಪೊಲೀಸ್ ಆಫೀಸರ್ಸ್ ವೈಫ್ ಅಸೋಸಿಯೇಷನ್ ಗ್ರೂಪ್‌ನಲ್ಲಿ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆರೋಪ ಮಾಡಿದ ಬಳಿಕ ಆ ಗ್ರೂಪ್‌ನಿಂದ ಪಲ್ಲವಿ ಹೊರ ನಡೆದಿದ್ದರು. ಇದನ್ನೂ ಓದಿ: ಚೀನಾದಲ್ಲಿ ಬಂತು 10ಜಿ – ಜಸ್ಟ್ 1 ನಿಮಿಷದಲ್ಲಿ 2 ಗಂಟೆ ಫಿಲ್ಮ್ ಡೌನ್‌ಲೋಡ್

 

ಪಲ್ಲವಿ ಆರೋಪ ಏನು?
ನನ್ನ ಗಂಡನ ಡಿಜಿಪಿ ಹುದ್ದೆಯ ಕೊನೆಯ ಕೆಲವು ತಿಂಗಳುಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಎಲ್ಲಾ ಪ್ರಕರಣಗಳನ್ನು ಮಾನಸಿಕ ಅಸ್ಥಿರತೆಯ ಕಾರಣಗಳನ್ನು ನೀಡಲಾಗುತ್ತಿತ್ತು.

ಓಂಪ್ರಕಾಶ್ ರಿವಾಲ್ವರ್ ಹೊಂದಿದ್ದು ಅದನ್ನು ತಕ್ಷಣವೇ ವಶಪಡಿಸಿಕೊಳ್ಳಬೇಕು. ನಮ್ಮ ಮೊಬೈಲ್‌ ಹ್ಯಾಕ್‌ ಆಗುವ ಮೊದಲು ಈ ಸಂದೇಶವನ್ನು ಉಳಿಸಿಕೊಳ್ಳಿ. ನನ್ನನ್ನು ಒತ್ತೆಯಾಳುವಿನಂತೆ ನೋಡಲಾಗುತ್ತಿದೆ. ನಾನು ಎಲ್ಲಿಗೆ ಹೋದರೂ ಓಂಪ್ರಕಾಶ್ ಅವರ ಏಜೆಂಟ್‌ಗಳ ಕಣ್ಗಾವಲಿನಲ್ಲಿರುತ್ತೇನೆ. ಇದನ್ನೂ ಓದಿ: ಕರುನಾಡಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ

ನಾನು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸಲು ಕೇಳುತ್ತಾ ಬಂದಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನನ್ನ ಮೇಲೆ ಮತ್ತು ಮಗಳ ಮೇಲೆ ವಿಷಪ್ರಾಶನ ಮಾಡಲಾಗಿದ್ದು ನಾವಿಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದೇವೆ.

 

ಓಂಪ್ರಕಾಶ್ ಗೆ ಮಸ್ತಾನ್ ಎಂಬ ಉಗ್ರನ ಸಂಪರ್ಕ ಇದ್ದು, ಪತಿ ಎನ್‌ಐಎ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ಓಂ ಪ್ರಕಾಶ್‌ಗೆ ಹಣ ಬರುತ್ತಿದೆ. ರನ್ಯಾ ರಾವ್‌ಗಿಂತಲೂ ದೊಡ್ಡ ಪ್ರಕರಣ ಇದಾಗಿದ್ದು ಮುಂದೆ ನಾನು ಅಜಿತ್ ದೋವಲ್ ಅವರ ಗಮನಕ್ಕೆ ತರುತ್ತೇನೆ. ನನ್ನ ಮಗಳು ಮತ್ತು ನನಗೆ ಏನಾದರೂ ಸಂಭವಿಸಿದರೆ ಅದಕ್ಕೆ ಪತಿಯೇ ಹೊಣೆಯಾಗುತ್ತಾರೆ.

ಈ ಗುಂಪಿನಲ್ಲಿರುವ ಅಧಿಕಾರಿಗಳು ಮತ್ತು ಇತರರು ದಯವಿಟ್ಟು ಈ ಸಂದೇಶವನ್ನು ಸಾಧ್ಯವಾದಷ್ಟು ಎಲ್ಲರಿಗೆ ಕಳುಹಿಸಿ. ನಾನು ನನ್ನ ಪತಿಯ ಬಗ್ಗೆ ಹೇಳಿದ ಎಲ್ಲಾ ವಿಚಾರಗಳು ಸರಿಯಾಗಿದೆ.

Share This Article