ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್‌ ಮೊದಲ ಪ್ರತಿಕ್ರಿಯೆ

Public TV
1 Min Read

ಚೆನ್ನೈ: ಕರೂರಿನಲ್ಲಿ ರ‍್ಯಾಲಿ ವೇಳೆ ಭೀಕರ ಕಾಲ್ತುಳಿತ (Karur Stampede) ದುರಂತಕ್ಕೆ ಸಂಬಂಧಿಸಿದಂತೆ ನಟ, ರಾಜಕಾರಣಿ ದಳಪತಿ ವಿಜಯ್‌ (Vijay) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ವಿಜಯ್‌, ನನ್ನ ಹೃದಯ ಚೂರಾಗಿದೆ. ನಾನು ಅಸಹನೀಯ ನೋವು ಮತ್ತು ದುಃಖದಲ್ಲಿದ್ದೇನೆ. ಹೇಳಿಕೊಳ್ಳಲಾಗದಷ್ಟು ನೋವು ಎಂದು ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮಾಯಕರ ಜೀವಹಾನಿ ಹೃದಯವನ್ನು ಕಲಕಿದೆ: ಕಾಲ್ತುಳಿತ ದುರಂತಕ್ಕೆ ರಜನಿಕಾಂತ್‌ ಕಂಬನಿ

ಕರೂರಿನಲ್ಲಿ ಪ್ರಾಣ ಕಳೆದುಕೊಂಡ ನನ್ನ ಪ್ರೀತಿಯ ಸಹೋದರ, ಸಹೋದರಿಯರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವೇ ಗುಣಮುಖರಾಗಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ವಿಜಯ್‌ ತಿಳಿಸಿದ್ದಾರೆ.

ತಮಿಳುನಾಡು ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರೂರಿನಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್‌ ಬೃಹತ್‌ ರ‍್ಯಾಲಿ ನಡೆಸಿದ್ದರು. ವಿಜಯ್‌ ನೋಡಲೆಂದು ಲಕ್ಷಾಂತರ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಈ ವೇಳೆ ಭೀಕರ ಕಾಲ್ತುಳಿತ ಸಂಭವಿಸಿದೆ. 35ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿಜಯ್‌ಗಾಗಿ ಸತತ 7 ಗಂಟೆ ಕಾದಿದ್ದ ಜನ; ಬರೋಬ್ಬರಿ 1 ಲಕ್ಷ ಮಂದಿ ಜಮಾವಣೆ – ಭೀಕರ ಕಾಲ್ತುಳಿತ ಹೇಗಾಯ್ತು?

Share This Article