ನನ್ನ ಸರ್ಕಾರ ಭದ್ರವಾಗಿದೆ, ಯಾರೂ ಅಲ್ಲಾಡಿಸೋಕೆ ಆಗಲ್ಲ- ಸಿಎಂ ಎಚ್‍ಡಿಕೆ

Public TV
2 Min Read

ಮೈಸೂರು: ನನ್ನ ಸರ್ಕಾರ ಎಷ್ಟು ಭದ್ರವಾಗಿದೆ ಎಂದು ನನಗೆ ಗೊತ್ತಿದೆ. ಯಾರು ಕೂಡ ನನ್ನ ಸರ್ಕಾರವನ್ನ ಅಲ್ಲಾಡಿಸೋಕೆ ಆಗಲ್ಲ ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಈಗ ಸರ್ಕಾರ ಬೀಳುತ್ತೆ, ಆಗ ಬೀಳುತ್ತೆ ಅನ್ನುವಂತಹ ವರದಿಗಳನ್ನು ಪ್ರಕಟಿಸುತ್ತಿದೆ. ನಿತ್ಯ ಯಾರೋ ನೀಡುವ ವರದಿಗಳನ್ನು ಇಟ್ಟುಕೊಂಡು ಪತ್ರಿಕೆ ಹಾಗೂ ಟಿವಿಗಳಲ್ಲಿ ವರದಿ ಬರುತ್ತಿದೆ. ಆದ್ರೆ ನನ್ನ ಸರ್ಕಾರ ಸುಭದ್ರವಾಗಿದೆ. ಅದು ಎಷ್ಟು ಸುಭದ್ರವಾಗಿದೆ ಅಂತ ನನಗೆ ಗೊತ್ತಿದೆ. ಮಾಧ್ಯಮದವರನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ ಅಂತ ಹೇಳಿದ್ರು.

ಮಾಧ್ಯಮಕ್ಕೆ ಟಾಂಗ್:
ಮೊದಲು ಗೌರಿ ಹಬ್ಬಕ್ಕೆ ಸರ್ಕಾರ ಬಿಳುತ್ತೆ ಅಂದ್ರು. ಏನೂ ಆಗಲಿಲ್ಲ ಅಂದರೆ ಗಾಂಧಿಜಯಂತಿಗೆ ಡೇಟ್ ಫಿಕ್ಸ್ ಮಾಡ್ತೀರಿ. ಅದು ಆಗಲಿಲ್ಲ ಅಂದ್ರೆ ದಸರಾಗೆ ಡೇಟ್ ಫಿಕ್ಸ್ ಮಾಡುತ್ತೀರಿ. ಆದ್ರೆ ಸರ್ಕಾರ ಯಾವಾಗಲೂ ಬೀಳೊಲ್ಲ. ಯಾವ ಶಾಸಕರು ಹೈದರಾಬಾದ್‍ಗೂ ಹೋಗಲ್ಲ, ಸಿಖಂದರಬಾದ್‍ಗೂ ಹೋಗಲ್ಲ. ಯಾರು ಎಲ್ಲೂ ಹೋಗೊಲ್ಲ ಅಂತ ಮಾಧ್ಯಮಗಳಿಗೆ ಟಾಂಗ್ ನೀಡಿ ಸರ್ಕಾರದ ಭದ್ರವಾಗಿದೆ ಅಂತ ತಿಳಿಸಿದ್ರು.

ಬಹಿರಂಗ ಎಚ್ಚರಿಕೆ:
ಸರ್ಕಾರ ಬೀಳುತ್ತೆ ಅಂತ ಸುಮ್ಮನಾಗಬೇಡಿ. ಮುಖ್ಯಮಂತ್ರಿಗಿರಿ ಶಾಶ್ವತ ಅಲ್ಲ. ಯಾರು ಬಂದರೂ ನೀವು ಕೆಲಸ ಮಾಡಬೇಕು. ಜಾತಿ ನೋಡಿ ನಾನು ಯಾರನ್ನು ರಕ್ಷಣೆ ಮಾಡೋಲ್ಲ. ನನ್ನವರ ಜೊತೆ ಬಂದು ರಕ್ಷಣೆಯಾಗುವ ಉದ್ದೇಶವಿದ್ದರೆ ಅದನ್ನ ಬಿಟ್ಟುಬಿಡಿ. ಪ್ರಾಮಾಣಿಕ ಅಧಿಕಾರಿಗಳಿಗೆ ಸದಾ ರಕ್ಷಣೆಗೆ ನಿಂತಿದೆ ನಮ್ಮ ಸರ್ಕಾರ. ಆದ್ರೆ ಸರ್ಕಾರ ಅಸ್ಥಿರತೆ ಮಾಡಿ ತಮ್ಮ ಬೆಳೆ ಬೆಳೆಯಿಸಿಕೊಂಡರೆ ಸುಮ್ಮನೆ ಬಿಡೊಲ್ಲ. ಸರ್ಕಾರ ಬಿಳುತ್ತೆ ಅಂತ ಜನರಿಗೆ ಕೆಲಸ ಮಾಡದೆ ಹಿಂದೆ ಬಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಅಂತ ಇದೇ ವೇಳೆ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಬಹಿರಂಗ ಎಚ್ಚರಿಕೆ ನೀಡಿದ್ರು.

ಸರ್ಕಾರ ಬೀಳಿಸುವ ಪ್ರತಿಪಕ್ಷಗಳ ಯತ್ನ, ಇದು ಬಿಜೆಪಿ ನಾಯಕರ ಸಣ್ಣತನ ತೋರಿಸುತ್ತದೆ. ನಾಡಿನ ಸಮಸ್ಯೆಗಿಂತ ಹೆಚ್ಚಾಗಿ ಸರ್ಕಾರ ಅಸ್ಥಿರಗೊಳಿಸುವ ನಿಟ್ಟಿನಲ್ಲಿದ್ದಾರೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಯಾವುದೇ ಸ್ಟ್ರಾಟಜಿ ಮಾಡುವುದಿಲ್ಲ. ರಾಜ್ಯದ ಕೆಲಸ ಮಾಡುವ ಕಡೆ ಮಾತ್ರ ಗಮನ ಹರಿಸಲಾಗುವುದು. ಆಪರೇಷನ್ ಕಮಲದ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮದ ಮೂಲಕ ಗಮನಿಸಿದ್ದೇನೆ ಅಂದ ಅವರು, ಜಾರಕಿಹೋಳಿ ಸಹೋದರರು ಸೇರಿದಂತೆ ಪ್ರತಿದಿನ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದವರ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಳ್ಳಬೇಕು ಅಂತ ಅವರು ಹೇಳಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *