ನನ್ನ ಆಹಾರ ನನ್ನ ಚಾಯ್ಸ್, ಸಮುದಾಯ ಎಳೆದು ತಂದಿದ್ದು ಬಹಳ ಬೇಜಾರಾಯ್ತು: ಡಾಲಿ ಧನಂಜಯ್

2 Min Read

ಬೆಂಗಳೂರು: ನನ್ನ ಆಹಾರ ನನ್ನ ಚಾಯ್ಸ್, ಬೇರೆ ಬೇರೆ ಆಂಗಲ್ ಕೊಟ್ಟು ಸಮುದಾಯ ಎಳೆದು ತಂದಿದ್ದು ಬಹಳ ಬೇಜಾರಾಯ್ತು ಎಂದು ನಟ ಡಾಲಿ ಧನಂಜಯ್ (Daali Dhananjaya) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಂಸಾಹಾರ ಸೇವಿಸಿದ್ದ ವಿಚಾರಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ, ನಾನು ನಾನ್ ವೆಜ್ ತಿಂತೀನಿ ಅಂದ್ರೆ ಒಕೆ, ಅದರ ಮಧ್ಯೆ ಜಾತಿ ಎಳೆದು ತಂದ್ರೆ ಹೇಗೆ? ಬೇರೆ ಆರ್ಟಿಸ್ಟ್ಗಳ ಹೆಸರು ತಂದಿದ್ದು ಬೇಜಾರ್ ಆಯ್ತು. ನನ್ನ ಆಹಾರ ನನ್ನ ಚಾಯ್ಸ್. ನಾನು ಆಗಾಗ ಪಾರ್ಟಿ ಮಾಡ್ತೀನಿ, ಸ್ಮೋಕ್ ಮಾಡ್ತಿದ್ದೆ. ಈಗ ನಿಲ್ಲಿಸಿದ್ದೀನಿ. ನನಗೆ ಸೀ-ಫುಡ್ ಬಹಳ ಇಷ್ಟ. ಅದು ನನ್ನ ಇಷ್ಟ, ಬೇರೆ ಬೇರೆ ಆಂಗಲ್ ಕೊಟ್ಟಿದ್ದು, ಸಮುದಾಯವನ್ನ ಎಳೆದು ತಂದಿದ್ದು ಬಹಳ ಬೇಜಾರಾಯ್ತು ಎಂದು ಹೇಳಿದ್ದಾರೆ.ಇದನ್ನೂ ಓದಿ: ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನ್ ಸಿನಿಮಾ ಪ್ರದರ್ಶನಕ್ಕೆ ನಟ ಪ್ರಕಾಶ್‍ ರಾಜ್‌ ಒತ್ತಾಯ – ಪರ ವಿರೋಧ ಚರ್ಚೆ

ನಾನು ನನ್ನ ಆಹಾರ, ಆಹಾರ ಪದ್ಧತಿ ಬಗ್ಗೆ ಮಾತಾಡೋಕೆ ಇಷ್ಟ ಇಲ್ಲ. ನಾನು ಬಹಳ ಇನೋಸೆಂಟ್ ಆಗಿ ನನ್ನ ಗೆಳೆಯನ ಹೋಟೆಲ್‌ಗೆ ಹೋಗಿದ್ದೆ. ಜೊತೆಗೆ ಪ್ರೀತಿಯಿಂದ ತಿಂದು ಬಂದೆ. 10 ರಿಂದ 15 ಬಿರಿಯಾನಿ ಶಾಪ್ ಓಪನ್ ಮಾಡಿದ್ದೀನಿ. ಈ ಥರದ ವಿಷಯ ಪಿಕ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಡಿಸ್ಕಷನ್ ಆಗಿದ್ದು ನೋಡಿ ಶಾಕ್ ಆಯ್ತು ಎಂದಿದ್ದಾರೆ.

ನಾನು ಮಾಂಸ ತಿಂದಿದ್ದು ಎಲ್ಲಿಂದ ಅಂತ ಹೇಳೋಕೆ ಹೋಗಲ್ಲ. ಚರ್ಚೆ ಶುರು ಮಾಡಿದವರಿಗೆ ನಾನು ಉತ್ತರ ಕೊಟ್ಟಂತೆ ಆಗುತ್ತೆ ಅದು ನನಗೆ ಇಷ್ಟ ಇಲ್ಲ. ನಾನು ಲಿಂಗ ಹಾಕಿ ಯಾವತ್ತೂ ಊಟ ಮಾಡಲ್ಲ. ನಾನು ಏನೇ ಮಾಡಿದರೂ ಬಹಳ ಪ್ರಶ್ನೆಗಳು ಬರುತ್ತೆ. ಅದು ನನಗೆ ಬಹಳ ಖುಷಿ ಇದೆ. ನಾನೊಬ್ಬ ನಟನಾಗಿ ಬಂದು ಪ್ರೊಡಕ್ಷನ್ ಶುರು ಮಾಡಿದ್ದೀನಿ. ಇಂಡಸ್ಟ್ರಿಗೆ ಬಹಳ ಸಿನಿಮಾ ಕೊಟ್ಟೆ, ನೂರಾರು ಕೋಟಿ ವ್ಯಾಪಾರ ಮಾಡಿರೋ ಪ್ರೊಡ್ಯೂಸರ್ ಅಲ್ಲ. ಆದರೆ ನಾನು ಬೇರೆ ಒಂದು ಕೆಲ್ಸಕ್ಕೆ ಅಂದ್ರೆ ಸಿನಿಮಾಕ್ಕಾಗಿ ಒದ್ದಾಡುತ್ತಿದ್ದೀನಿ, ಅದರ ಬಗ್ಗೆ ಯಾಕೆ ಚರ್ಚೆ ಆಗುತ್ತಿಲ್ಲ ಗೊತ್ತಿಲ್ಲ. ನಾನು ಇಂಡಸ್ಟ್ರಿಗಾಗಿ ಮಾಡೋ ಕೆಲಸದ ಬಗ್ಗೆ ಚರ್ಚೆ ಆಗಬೇಕು ಅನ್ನೋದು ನನ್ನ ಆಸೆ ಎಂದು ತಿಳಿಸಿದ್ದಾರೆ.

ಬಡವರ ಮಕ್ಕಳು ಬೆಳೆಯಬೇಕು ಅನ್ನೋದನ್ನ ಅವರವರ ಅರ್ಥಕ್ಕೆ ಬದಲಾಯಿಸಿ ಮಾತನಾಡಿದ್ದಾರೆ. ಸಂಬಂಧಗಳನ್ನ ಸೆಲೆಬ್ರೇಶನ್ ಮಾಡೋಣ ಅನ್ನೋದನ್ನ ನಾನು ಎಲ್ಲಾ ಕಡೆ ಹೇಳಿದ್ದೀನಿ ಅಷ್ಟೆ. ಎಲ್ಲರೂ ಎಲ್ಲಾ ವಿಚಾರವನ್ನ ಮಾತನಾಡಬಹುದು, ಸಿನಿಮಾ ನಟರು ಅಂದ್ರೆ ಅದನ್ನೇ ಮಾತಾಡಬೇಕು ಅಂತ ಏನಿಲ್ಲ. ನಾನು ಊಟ ಮಾಡಿದ ವಿಚಾರವನ್ನ ಕೂಡ ಮಾತಾಡ್ತಾರೆ ಅಂದ್ರೆ ತಪ್ಪಲ್ವಾ? ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಸಿನಿ ರಂಗದೊಂದಿಗೆ ಸಿಜೆ ರಾಯ್‌ ನಂಟು ಅಪಾರ – ಕನ್ನಡ, ಮಲಯಾಳಂ ನಲ್ಲಿ 11 ಸಿನಿಮಾ ನಿರ್ಮಾಣ

Share This Article